ಕಾರವಾರ :- ಕಾಡುಪ್ರಾಣಿಯ ಬೇಟೆಗಾಗಿ ಇಟ್ಟಿದ್ದ ಕೈಬಾಂಬ್ ಸ್ಪೋಟಗೊಂಡು ಆಕಳಿನ ಬಾಯಿ ಛಿದ್ರವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸನವಳ್ಳಿ ಜಲಾಶಯದ ಬಳಿ ನಡೆದಿದೆ. ಮುಂಡಗೋಡಸ ಸನವಳ್ಳಿ ಪ್ಲಾಟಿನ ಅಪ್ಪು ನಾರಾಯಣಸ್ವಾಮಿ ನಾಯರ್ ಎಂಬವರಿಗೆ ಸೇರಿದ ಆಕಳು ಇದಾಗಿದ್ದು , ಮೇವು ಅರಸಿ ಜಲಾಶಯದ ಬಳಿ ಬಂದಿದ್ದು ಈ ವೇಳೆ ಆಹಾರವೆಂದು ನೆಲದಲ್ಲಿ ಕಾಡುಪ್ರಾಣಿ ಬೇಟೆಗೆ ಇರಿಸಿದ್ದ ಕೈಬಾಂಬ್ ತಿನ್ನಲು ಪ್ರಯತ್ನಿಸಿದ್ದು ಸ್ಪೋಟಗೊಂಡಿದೆ.

ಸ್ಪೋಟದಿಂದಾಗಿ ಆಕಳಿನ ಬಾಯಿ ಸಂಪೂರ್ಣ ಛಿದ್ರವಾಗಿದ್ದು ಅರಣ್ಯಾಧಿಕಾರಿಗಳ ಪರಿಶೀಲನೆ ವೇಳೆ ಮತ್ತೊಂದು ಜೀವಂತ ಕೈಬಾಂಬ್ ದೊರೆತಿದೆ. ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.