BREAKING NEWS
Search

ಮುಂಡಗೋಡಿನ ಜೋಳದ ಹೊಲದಲ್ಲಿ ಹುಲಿ ಪತ್ತೆ-ಹುಲಿಗಾಗಿ ಬೋನು ಇಟ್ಟು ಕಾಯ್ದ ಅರಣ್ಯ ಇಲಾಖೆ ಸಿಬ್ಬಂದಿ

258

ಕಾರವಾರ:-ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಮತ್ತು ಧಾರವಾಡದ ಕಲಘಟಗಿ ತಾಲೂಕಿನ ಗಡಿ ಭಾಗದ ಬೆಂಡ್ಲಗಟ್ಟಿ ಗ್ರಾಮದ ಗೋವಿನಜೋಳದ ಗದ್ದೆಯೊಂದರಲ್ಲಿ ಹುಲಿ ಕಾಣಿಸಿಕೊಂಳ್ಳುವ ಮೂಲಕ ಸ್ಥಳೀಯ ಜನರ ಆತಂಕಕ್ಕೆ ಕಾರಣವಾಗಿದೆ.

ಬೆಂಡ್ಲಗಟ್ಟಿ ಗ್ರಾಮದ ಬಳಿಯ ಜಮೀನಿನ ಮಾಲಿಕ ತನ್ನ ಗೋವಿನ ಜೋಳದ ಬೆಳೆಗೆ ನೀರು ಹಾಯಿಸುವಲ್ಲಿ ನಿರತನಾಗಿದ್ದಾಗ ಹುಲಿ ಕಂಡುಬಂದಿದ್ದು ಗ್ರಾಮಸ್ಥರಿಗೆ ವಿಷಯವನ್ನು ತಿಳಿಸಿದ್ದಾನೆ. ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ತಿಳಿಸಿ ಜಮೀನಿನತ್ತ ತೆರಳಿದಾಗ ಹುಲಿ ಯಾರಿಗೂ ಗೋಚರಿಸಲಿಲ್ಲ, ಸುದ್ಧಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳಿಗೂ ಹುಲಿ ಕಂಡು ಬರಲಿಲ್ಲ, ಈ ಹಿನ್ನೆಲೆಯಲ್ಲಿ ಹುಲಿಯ ಪತ್ತೆಗಾಗಿ ಡ್ರೋಣ್ ನೆರವನ್ನು ಪಡೆಯಲು ನಿರ್ಧರಿಸಿ ಕಾರ್ಯಾಚರಣೆ ನಡೆಸಿದಾಗ ಗೋವಿನ ಜೋಳದ ಪೋದೆಯಲ್ಲಿ ಹುಲಿ ನಿದ್ರಿಸುತ್ತಿರುವುದು ಕಂಡು ಬಂದಿದೆ.

ಹುಲಿ ಇರುವುಕೆಯನ್ನು ಪತ್ತೆ ಹಚ್ಚಿದ ನಂತರ ತಪ್ಪಿಸಿಕೊಳ್ಳದಂತೆ ಬೋನ್ ಇಡುವ ಮೂಲಕ ದಿಗ್ಬಂಧನ ವಿಧಿಸಲಾಗಿದೆ.

ಮುಂಡಗೋಡ ಮತ್ತು ಕಲಘಟಗಿ ತಾಲೂಕಿನ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳದಲ್ಲಿಯೇ ಮುಕಾಂ ಹೂಡಿದ್ದು, ಹುಲಿ ಸೆರೆ ಹಿಡಿಯಲು ತೀವ್ರ ಪ್ರಯತ್ನದಲ್ಲಿ ತೊಡಗಿದ್ದಾರೆ.

ಹುಲಿಯ ಚಿತ್ರ ಮತ್ತು ಹೆಜ್ಜೆಯ ಗುರುತನ್ನು ಗಮನಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಪಶು ವೈದ್ಯಾಧಿಕಾರಿಗಳು ಹುಲಿ ಎಂಟರಿಂದ ಒಂಬತ್ತು ವರ್ಷ ಪ್ರಾಯದ್ದಾಗಿರಬಹುದೆಂದು ಅಂದಾಜಿಸಿದ್ದಾರೆ.

ಹುಲಿ ಕಂಡು ಬಂದ ಸ್ಥಳದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಡಂಗೂರ ಸಾರಿಸಿ ಜನತೆ ಜಾಗೃತರಾಗಿರುವಂತೆ ತಿಳಿಸಿದ್ದಾರಲ್ಲದೆ ಒಂಟಿಯಾಗಿ ಸಂಚರಿಸದಂತೆ ಎಚ್ಚರಿಸಿದ್ದಾರೆ. ಸಾಕು ಪ್ರಾಣಿಗಳನ್ನು ಹೊರಗೆ ಬಿಡದಂತೆ ಸೂಚಿಸಿದ್ದಾರಲ್ಲದೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣವೇ ಇಲಾಖೆಗೆ ತಿಳಿಸುವಂತೆ ವಿನಂತಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *