BREAKING NEWS
Search

645 ಹೊಸ ಬಸ್ ಗಳು ರಸ್ತೆಗೆ -ಉತ್ತರಕನ್ನಡ ಜಿಲ್ಲೆಗೆ ಪ್ರಮುಖ ಆಧ್ಯತೆ- ವಿ.ಎಸ್ ಪಾಟೀಲ್

379

ಕಾರವಾರ /ಶಿರಸಿ: ಮುಂದಿನ ವರ್ಷದ ಮಾರ್ಚ ವೇಳೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 645 ನೂತನ ಬಸ್ ಗಳು ಬರಲಿದ್ದು, ಉತ್ತರ ಕನ್ನಡ ಜಿಲ್ಲೆಗೆ ಪ್ರಾತಿನಿಧ್ಯದೊಂದಿಗೆ ಅಗತ್ಯ ಇರುವ ಕಡೆ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ವಾಯುವ್ಯ ಕರ್ನಾಟಕ ಸಾರಿಗೆ ಅಧ್ಯಕ್ಷ ವಿ.ಎಸ್.ಪಾಟೀಲ್ ತಿಳಿಸಿದ್ದಾರೆ.

ಇಂದು ಶಿರಸಿಯ ತಾಲೂಕಾ ಪಂಚಾಯತ ಸಭಾಂಗಣದಲ್ಲಿ ನಡೆದ ಜನಪ್ರತಿನಿಧಿಗಳು, ಸಾರ್ವಜನಿಕರ ಸಾರಿಗೆ ಸಮಸ್ಯೆಗಳ ಅಹವಾಲು ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜನವರಿಯಲ್ಲಿ 200 ಬಸ್ ಹಾಗೂ ಮಾರ್ಚ ಅಂತ್ಯದ ವೇಳೆ ಉಳಿದ 645 ಬಸ್ ಗಳು ಬರಲಿದೆ.

ಆಗ ಜಿಲ್ಲೆಗೆ ಅಗತ್ಯವಿರುವ ಬಸ್ ಹೊಂದಾಣಿಕೆ ಮಾಡುವ ವ್ಯವಸ್ಥೆ ಮಾಡುತ್ತೇವೆ ಎಂದರು.

ಸಂಸ್ಥೆ ನಷ್ಟದಲ್ಲಿ ಇದ್ದರೂ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತೇವೆ. ನಷ್ಟ ಕಡಿಮೆ ಮಾಡಲು ಪ್ರಯತ್ನ ನಡೆದಿದೆ. ಸರ್ಕಾರದಿಂದ ಹಣ ತರುವ ಕೆಲಸ ಮಾಡುತ್ತೇವೆ.ಕಂಡಕ್ಟರ್, ಡ್ರೈವರ್ ಕೊರತೆಯನ್ನೂ 2-3 ತಿಂಗಳಲ್ಲಿ ಸರಿಪಡಿಸಯತ್ತೇವೆ ಎಂದು ಭರವಸೆ ನೀಡಿದ ಪಾಟೀಲ್, ಸಂಸ್ಥೆಯ ಒಳಗಡೆ ಆಡಳಿತ ಬಿಗಿ ಹಿಡಿತ ಹೊಂದಿಲ್ಲ. ಅದನ್ನು ಸರಿಡಪಡಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಿರಸಿ ಹಳೆ ಬಸ್ ನಿಲ್ದಾಣದ ಕಟ್ಟಡ ಕಾಮಗಾರಿ ಹಾಗೂ ಮೂಲಭೂತ ಸೌಕರ್ಯಗಳ ಕುರಿತು ಶೀಘ್ರದಲ್ಲೇ ಕ್ರಮ ಕೈಗೊಳ್ಳುವುದಾಗಿ ಪಾಟೀಲ್ ಭರವಸೆ ನೀಡಿದರು.

ಈ ವೇಳೆ ತಾಪಂ ಉಪಾಧ್ಯಕ್ಷ ಚಂದ್ರು ಎಸಳೆ, ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹೆಗಡೆ, ಸಂಸ್ಥೆಯ ಡಿಸಿ ವಿವೇಕ ಹೆಗಡೆ, ಜಿಪಂ ಸದಸ್ಯೆ ಪ್ರಭಾವತಿ ಗೌಡ, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಫ್.ಜಿ.ಚಿನ್ನಣ್ಣನವರ್ ಸೇರಿದಂತೆ ಇತರರು ಇದ್ದರು.




Leave a Reply

Your email address will not be published. Required fields are marked *