ಯಲ್ಲಾಪುರದಲ್ಲಿ ಟ್ಟಿಟರ್ ಸಂಸ್ಥೆ ವಿರುದ್ಧ ಪ್ರಸಾದ್ ಹೆಗಡೆ ದೂರು

663

ಕಾರವಾರ :- ನಿಷೇಧಿತ ಸಿಖ್ ಫಾರ್ ಜಸ್ಟೀಸ್ (S.F.J) ಸಂಘಟನೆಯಿಂದ ದೇಶವಿರೋಧಿ ಟ್ಟೀಟ್ ಹಿನ್ನಲೆಯಲ್ಲಿ ಟ್ಟಿಟರ್ ಸಂಸ್ಥೆ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಯಲ್ಲಾಪುರ ಬಿಜೆಪಿ ತಾಲೂಕು ಪ್ರಧಾನಕಾರ್ಯದರ್ಶಿ ಪ್ರಸಾದ್ ಹೆಗಡೆ ಯಿಂದ ದೂರು ದಾಖಲಾಗಿದ್ದು ಎಸ್.ಎಫ್.ಜೆ ಸಂಘಟನೆಯ ಗುರುಪತ್ವ ಸಿಂಗ್ ಇದರ ಮುಖ್ಯಸ್ಥನಾಗಿದ್ದು 2019 ರಲ್ಲಿ ಎಸ್.ಎಫ್.ಜೆ ಸಂಘಟನೆಯನ್ನು ಪಂಜಾಬ್ ಅನ್ನು ಖಲಿಸ್ತಾನ ಎಂಬ ಹೆಸರಿನಲ್ಲಿ ಭಾರತದಿಂದ ಬೇರ್ಪಡಿಸುವ ಸಂಚನ್ನು ರೂಪಿಸಿದ್ದ ಆಧಾರದಲ್ಲಿ ಕೇಂದ್ರ ಸರ್ಕಾರ ನಿಷೇಧಿಸಿತ್ತು.


ಕೇಂದ್ರ ಸರ್ಕಾರ ನಿಷೇಧಿಸಿದ್ದರೂ ಟ್ಟಿಟರ್ ನಲ್ಲಿ ಸಕ್ರಿಯವಾಗಿದ್ದ ಸಂಘಟನೆ ಭಾರತದ ವಿರೋಧ ಸಂಗತಿಗಳು,ಭಯೋತ್ಪಾದಕ ಚಟುವಟಿಕೆಯನ್ನು ಪ್ರಚೋಧಿಸುವ ಟೀಟ್ ಮಾಡಿದ್ದು ಟ್ಪಿಟರ್ ಕಂಪನಿಯ ಪ್ರತಿನಿಧಿಗಳಾದ ಶಗುಪ್ತಾ ಕಮ್ರಾನ್ ಹಾಗೂ ಮಹಿಮಾ ಕೌಲ್ ಎಂಬುವವರಿಂದ ವ್ಯಾಪಕವಾದ ಷೇರ್ ಮಾಡುವ ಮೂಲಕ ಪ್ರಮುಖ ಪಾತ್ರ ವಹಿಸಿದ್ದು
ದೇಶ ವಿರೋಧಿ ಹೇಳಿಕೆಗಳನ್ನು ಪ್ರಕಟಿಸಲು ಟ್ಟಿಟ್ಟರ್ ಸಂಸ್ಥೆ ಉತ್ಸುಕವಾಗಿದ್ದು ಸಂಸ್ಥೆ ಹಾಗೂ ಆಡಳಿತಾಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ