BREAKING NEWS
Search

ಕಾರವಾರ -ಬಂದ್ ಗೆ ಪುಲ್ ಬೆಂಬಲ!ಏನು ಇರುತ್ತೆ ಏನು ಇರಲ್ಲ ಇಲ್ಲಿದೆ ಮಾಹಿತಿ.

768

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸಾಗರಮಾಲಾ ಯೋಜನೆ ವಿರೋಧಿಸಿ ಇಂದು ಕಾರವಾರ ತಾಲೂಕು ಬಂದ್ ಗೆ ಮೀನುಗಾರರು ಹಾಗೂ ವಿವಿಧ ಸಂಘಟನೆ ಕರೆ ಕೊಟ್ಟಿದೆ.

ಬಂದ್ ಗೆ ಕರೆ ಕೊಟ್ಟ ಹಿನ್ನಲೆಯಲ್ಲಿ ಇಂದು ನಗರದಾಧ್ಯಾಂತ ಅಂಗಡಿ ಮುಂಗಟ್ಟುಗಳು ,ಸಾರಿಗೆ ಸಂಪರ್ಕ ಸೇರಿದಂತೆ ಎಲ್ಲವೂ ಬಂದ್ ಮಾಡಲಾಗಿದೆ.

ಇದಲ್ಲದೇ ಶಾಲಾ ಕಾಲೇಜುಗಳಿಗೂ ರಜೆ ನೀಡಲಾಗಿದ್ದು ಕಾರವಾರ ನಗರ ಜೀವನ ಸ್ಥಬ್ಧವಾಗಿದೆ.

ಇನ್ನು ಬಂದ್ ಹಿನ್ನಲೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ಬಿಗಿ ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗಿದ್ದು ಎಲ್ಲೆಡೆ ಬಿಗಿ ಬಂದವಸ್ತ್ ಕಲ್ಪಿಸಲಾಗಿದೆ.

ಏನೇನು ಇರೋದಿಲ್ಲ ಇಲ್ಲಿದೆ ಮಾಹಿತಿ:-


ಬಂದ್ ಗೆ ಇಡೀ ಕಾರವಾರದ ಜನತೆ ಹಾಗೂ ವಿವಿಧ ಸಂಘಟನೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಈ ಹಿನ್ನಲೆಯಲ್ಲಿ ಕಾರವಾರ ನಗರದಿಂದ ವಿವಿಧ ಜಿಲ್ಲೆಗಳಿಗೆ ಹಾಗೂ ತಾಲೂಕುಗಳಿಗೆ ಹೊರಡುವ ಯಾವುದೇ ಸರ್ಕಾರಿ ಬಸ್ ಗಳ ಸಂಚಾರ ಇರುವುದಿಲ್ಲ. ಇನ್ನು ಆಟೋ, ಬಾಡಿಗೆ ಕಾರುಗಳು ಸಹ ಪ್ರಯಾಣಿಕರಿಗೆ ಅಲಭ್ಯವಾಗಲಿದೆ.

ಅಂಗಡಿ ಮುಂಗಟ್ಟುಗಳು ಬಂದ್ ಆಗಿರುವುದರಿಂದ ಯಾವುದೇ ವಾಣಿಜ್ಯ ವ್ಯವಹಾರ ಸಹ ಸಂಪೂರ್ಣ ಬಂದ್ ಆಗಿವೆ.

ಶಾಲಾ ಕಾಲೇಜಿಗೂ ರಜೆ ನೀಡಲಾಗಿದೆ.

ವೈದ್ಯಕೀಯ ಚಿಕಿತ್ಸೆ ,ಸರ್ಕಾರಿ ಕಚೇರಿ ಹೊರತುಪಡಿಸಿ ಉಳಿದ ಸೇವೆಗಳು ಅಲಭ್ಯವಾಗಲಿದೆ.

ಬೆಳಗ್ಗೆ ಹತ್ತು ಘಂಟೆಯಿಂದ ಪ್ರತಿಭಟನೆಯು ಮಿತ್ರ ಸಮಾಜದಿಂದ ಪ್ರಾರಂಭವಾಗಿ ನಗರದ ವಿವಿಧ ಪ್ರಮುಖ ಬೀದಿಯಲ್ಲಿ ಸಂಚರಿಸಿ ಜಿಲ್ಲಾ ಕಚೇರಿ ಬಳಿ ಸೇರಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ. ನಂತರ ಲಂಡನ್ ಬಿಡ್ಜ್ ಬಳಿ ರಸ್ತೆ ತಡೆ ನೆಡಸಲಾಗುವುದು.
Leave a Reply

Your email address will not be published. Required fields are marked *