BREAKING NEWS
Search

ಸಂಪುಟದಿಂದ ಕೈಬಿಡುವ ಸೂಚನೆ ಕೊಟ್ಟ ಶಶಿಕಲಾ ಜೋಲ್ಲೆ- ಶಿರಸಿಯಲ್ಲಿ ಫಲ ಪುಷ್ಪ ಪ್ರದರ್ಶನ.

965

ಕಾರವಾರ :- ಸಂಪುಟ ವಿಸ್ತರಣೆಗೆ ಈಗಾಗಲೇ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ನಾನು ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೋಲ್ಲೆ ಪ್ರತಿಕ್ರಿಯಿಸಿದ್ದಾರೆ.

ಶಿರಸಿಯಲ್ಲಿ ಮಾತನಾಡಿದ ಅವರು, ಸಂಪುಟ ವಿಸ್ತರಣೆಯಲ್ಲಿ ಕಾರವಾರ ಜಿಲ್ಲಾ ಉಸ್ತುವಾರಿ ಸ್ಥಾನ ಕಳೆದುಕೊಳ್ಳುವ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನು ಎರಡು ಮೂರು ದಿನಗಳಲ್ಲಿ ವಿಸ್ತರಣೆ ಆಗಲಿದೆ ಎಂದರು.‌

ಹಿರಿಯ ಮುಖಂಡರ ತಿರ್ಮಾನದಂತೆ ಸಚಿವ ಸಂಪುಟ ವಿಸ್ತರಣೆ ಆಗಲಿದ್ದು, ಮುಖ್ಯಮಂತ್ರಿಗಳು ಹಾಗೂ ರಾಜ್ಯದ ನಾಯಕರು ಹೇಳಿದ ರೀತಿಯಲ್ಲಿ ನಾನು ಸೇವೆಯನ್ನು ಸಲ್ಲಿಸುತ್ತೇನೆ ಎಂದರು. ಅಂಗನವಾಡಿಗಳಲ್ಲಿ ಯುನಿಫಾರ್ಮ ಜಾರಿಗೆ ತರುವ ಚಿಂತನೆ ಇದೆ ಎಂದು ತಿಳಿಸಿದ ಅವರು, ಬಯೋಮೆಟ್ರಿಕ್ ಸಿಸ್ಟಮ್ ಆಳವಡಿಸಲು ಯೋಜನೆ ಹಾಕಿಕೊಳ್ಳಲಾಗುತ್ತಿದ್ದು, ಬಜೆಟ್ ತನಕ ಕಾದಲ್ಲಿ ಎಲ್ಲಾ ಯೋಜನೆ ಸಮಗ್ರ ಚಿತ್ರಣ ಸಿಗಲಿದೆ ಎಂದರು.

ಕಿಸಾನ್ ಮೇಳ ಉದ್ಘಾಟನೆ-ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ.

ತೋಟಗಾರಿಕಾ ಇಲಾಖೆ ಉತ್ತರ ಕನ್ನಡ, ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಶಿರಸಿಯ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ನಡೆಯುತ್ತಿರೋ ಫಲಪುಷ್ಪ ಪ್ರದರ್ಶನ ಹಾಗೂ ಕಿಸಾನ್ ಮೇಳದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ನೆರವೇರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವೆ, ರೈತರು ಯಾವುದಕ್ಕೂ ಕೈ ಒಡ್ಡದೇ, ಕಿಸಾನ್ ಸಮ್ಮಾನ್ ಯೋಜನೆ ತಂದಿರೋದು ಶ್ಲಾಘನೀಯ. ರೈತರಿಗೆ ಅಂತಾನೇ ವಿಶೇಷ ಬಜೆಟ್ ಕೂಡ ಘೋಷಣೆ ಮಾಡ್ತಿದ್ದಾರೆ. ರೈತರು ಬೆಳೆದ ಬೆಳೆಗೆ ದ್ವಿಗುಣ ಆದಾಯ ಬರುವಂತಹ ಯೋಜನೆಗಳನ್ನ ಘೋಷಿಸಲಾಗ್ತಿದೆ.

ಸಾವಯವ ಕೃಷಿಯ ಅವಶ್ಯಕತೆ ಇಂದಿನ ದಿನಗಳಲ್ಲಿ ಪ್ರಾಮುಖ್ಯವಾಗಿವೆ. ರಾಸಾಯನಿಕ ಹಾಕಿ ಬೆಳೆಸಿದ ತರಕಾರಿಗಳನ್ನು ಸೇವಿಸಿ ಜನರ ಆರೋಗ್ಯ ಹಾಳಾಗುತ್ತಿದೆ. ತೋಟಗಾರಿಕಾ ಇಲಾಖೆಯ ಈ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಇಂದಿನಿಂದ ಪ್ರಾರಂಭವಾಗಿ 3 ದಿನಗಳ ಕಾಲ ನಡೆಯೋ ಈ ಫಲ ಪುಷ್ಪ ಪ್ರದರ್ಶನ ಸೋಮವಾರ ಮುಕ್ತಾಯಗೊಳ್ಳಲಿದೆ.

ಪ್ರತಿವರ್ಷ ನಡೆಯುತ್ತಿರೋ ಫಲ ಪುಷ್ಪ ಪ್ರದರ್ಶನದಲ್ಲಿ ವರ್ಷವೂ ವಿಶೇಷವಾದ ಮಾದರಿಯ ಪುಷ್ಪಗಳಿಂದ ಮಾಡಲ್ಪಟ್ಟ ಆಕೃತಿಗಳು ಗಮನ ಸೆಳೆಯುತ್ತವೆ. ಈ ವರ್ಷ ಕಮಲ್ ಮಹಲ್ ಹಾಗೂ ಪೇಜಾವರ ಶ್ರೀಗಳಿಗೆ ಶೃದ್ಧಾಂಜಲಿ ಎನ್ನುವ ಕಲಾಕೃತಿಗಳು ಜನರ ಗಮನ ಸೆಳೆಯುತ್ತಿವೆ. ಇನ್ನೂ ಹಲವಾರು ಕಲಾಕೃತಿಗಳು ಪುಷ್ಪಗಳಿಂದ ನಿರ್ಮಿತವಾಗಿದ್ದು ತೋಟದ ಬೆಳೆಗಳ ಪ್ರದರ್ಶನ ಕೂಡ ನಡೆಯುತ್ತಿದೆ.

ಕಾರ್ಯಕ್ರಮದಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಎನ್. ಡಬ್ಲ್ಯೂ.ಕೆ.ಆರ್.ಟಿ.ಸಿ ಅಧ್ಯಕ್ಷ ವಿ.ಎಸ್ ಪಾಟೀಲ್ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಜರಿದ್ದರು.
Leave a Reply

Your email address will not be published. Required fields are marked *