BREAKING NEWS
Search

11 ವರ್ಷದ ಬಾಲಕನಿಗೆ ಕಾಣಿಸಿಕೊಂಡಿತು 50 ವರ್ಷದ ನಂತರ ಕಾಡುವ ಪೊರೆ ದೋಷ! ಶಟ್ಟಿ ಐ ಆಸ್ಪತ್ರೆಯಿಂದ ಚಿಕಿತ್ಸೆ

442

ಕಾರವಾರ:- ಮನುಷ್ಯನ ಅಂಗದಲ್ಲಿ ಕಣ್ಣಿಗೆ ಪ್ರಮುಖ ಸ್ಥಾನ ನೀಡಲಾಗಿದೆ.ನಮ್ಮ ದೈನಂದಿನ ಚಟುವಟಿಕೆ ಹಾಗೂ ಆಹಾರ ಪದ್ದತಿಯಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮ ಬೀರುತ್ತದೆ. ಹೌದು ಕಾರವಾರದಲ್ಲಿ ಚಿಕ್ಕ ಬಾಲಕನಿಗೆ 50 ವರ್ಷದ ನಂತರ ಬರುವ ಕಣ್ಣಿನ ಪೊರೆ ಚಿಕ್ಕ ಬಾಲಕನಿಗೆ ಬಂದು ಅಚ್ಚರಿ ಹುಟ್ಟಿಸಿದೆ.

ಚಿಕಿತ್ಸೆ ಗೊಳಗಾದ ಬಾಲಕ

ಪ್ರತಿ ಸಾವಿರದಲ್ಲಿ ಒಬ್ಬರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಣ್ಣಿನಲ್ಲಿ ಪೊರೆ ಕಾಣಿಸಿಕೊಳ್ಳುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲದ 11 ವರ್ಷದ ಬಾಲಕನಿಗೆ ಆತನ ಎರಡು ಕಣ್ಣು ಗಳಿಗೆ ಪೊರೆ ಬಂದಿದ್ದು ತೊಂದರೆಗೊಳಗಾಗಿದ್ದ.

ತಕ್ಷಣದಲ್ಲಿ ಕಾರವಾರದ ಶಟ್ಟಿ ಐ ಆಸ್ಪತ್ರೆಯ ವೈದ್ಯ ಡಾ.ಕೌಶಿಕ್ ಹೆಗಡೆ ರವರ ಬಳಿ ತಪಾಸಣೆಗೆ ಕರೆದೊಯ್ಯಲಾಯಿತು.

ಚಿಕ್ಕ ವಯಸ್ಸಿನಲ್ಲಿಯೇ ಈ ಬಾಲಕನ ಎರಡು ಕಣ್ಣು ಗಳು 50 ವರ್ಷ ವಯಸ್ಸಾದ ಜನರಿಗೆ ಬರುವ ಕಣ್ಣಿನ ಪೊರೆ ಬಂದಿರುವುದು ಪತ್ತೆಯಾಯಿತು.
ತಕ್ಷಣದಲ್ಲಿ ಆತನಿಗೆ ಡಾ.ಕೌಶಿಕ್ ಹೆಗಡೆ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನೀಡಿ ಪೊರೆಯನ್ನು ತೆಗೆಯುವಲ್ಲಿ ಯಶಸ್ಸು ಕಂಡಿದ್ದಾರೆ.

ಅಪರೂಪದಲ್ಲಿ ಅಪರೂಪ!
ತಾಯಿ ಗರ್ಭವತಿಯಾಗಿದ್ದಾಗ ಗರ್ಭದಲ್ಲಿ ತೊಂದರೆ ಕಾಣಿಸಿಕೊಂಡಾಗ ಮಗುವಿಗೆ ಈ ತೊಂದರೆ ಕಾಣಿಸಿಕೊಳ್ಳುತ್ತದೆ. ಇದಲ್ಲದೇ ಅಲರ್ಜಿ ಇಂದಾಗಿ ಹಾಗೂ ನರದ ತೊಂದರೆಯಿಂದಾಗಿ ಈ ದೋಷ ಕಂಡುಬರುತ್ತವೆ.
ತಕ್ಷಣದಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದರೆ ಮಕ್ಕಳು ಕಣ್ಣುಗಳನ್ನು ಕಳೆದುಕೊಳ್ಳವ ಸಾಧ್ಯತೆಗಳಿದ್ದು ಅಪರೂಪದಲ್ಲಿ ಅಪರೂಪವಾದ ಘಟನೆ ಎನ್ನುತ್ತಾರೆ ಚಿಕಿತ್ಸೆ ನೀಡಿದ ವೈದ್ಯ ಡಾ.ಕೌಶಿಕ್ ಹೆಗಡೆ.

ಚಿಕಿತ್ಸೆ ನೀಡಿದ್ರೂ ಸಂಪೂರ್ಣ ದೃಷ್ಠಿ ಕಷ್ಟಸಾದ್ಯ!

ಚಿಕ್ಕ ಮಕ್ಕಳಲ್ಲಿ ಈ ದೋಷ ಕಂಡುಬಂದಲ್ಲಿ ತಕ್ಷಣದಲ್ಲಿ ಚಿಕಿತ್ಸೆ ನೀಡಬೇಕು.12 ರಿಂದ 15 ವರ್ಷದೊಳಗೆ ಮಕ್ಕಳಲ್ಲಿ ಪೊರೆ ದೋಷ ಕಂಡುಬಂದರೆ ಶಸ್ತ್ರ ಚಿಕಿತ್ಸೆ ನಂತರ ಸಂಪೂರ್ಣ ದೃಷ್ಟಿ ನೀಡಬಹುದು ಆದರೇ ವಯಸ್ಸು ಹೆಚ್ಚಾದಲ್ಲಿ ಕಣ್ಣಿನ ದೃಷ್ಟಿ ಸಂಪೂರ್ಣ ವಾಗಿ ತರಿಸುವುದು ಕಷ್ಟಸಾಧ್ಯ.




Leave a Reply

Your email address will not be published. Required fields are marked *