BREAKING NEWS
Search

ಕುಮಾರಸ್ವಾಮಿ ಕಾಲದಲ್ಲಿ ಪೊಲೀಸರನ್ನು ಯಾವುದಕ್ಕೆ ಬಳಕೆ ಮಾಡಿಕೊಂಡಿದ್ದರು ಎಂದು ಗೊತ್ತಿದೆ- ಬಸವರಾಜ್ ಬೊಮ್ಮಾಯಿ

221

ಕಾರವಾರ :- ಕುಮಾರಸ್ವಾಮಿ ಅವರ ಕಾಲದಲ್ಲಿ ಪೊಲೀಸರನ್ನು ಯಾವುದಕ್ಕೆ ಬಳಕೆ ಮಾಡಿಕೊಂಡಿದ್ದರು ಎಂದು ಎಲ್ಲರಿಗೂ ತಿಳಿದಿದೆ. ಆದರೆ ನಮ್ಮ ಕಾಲದಲ್ಲಿ ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮ ಕೈಗೊಂಡಿದ್ದಾರೆ. ಆದ ಕಾರಣ ಕುಮಾರಸ್ವಾಮಿ ಅವರು ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಮಂಗಳೂರು ಗಲಭೆಯ ಕುರಿತು ಕುಮಾರಸ್ವಾಮಿ ಸಿಡಿ ಬಿಡಿಗಡೆ ಮಾಡಿರುವ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

ಇಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪಯರದ ಟಿ.ಎಮ್.ಎಸ್ ಅಮೃತ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು ಉಗ್ರವಾದಿಗಳ ನೆಲೆಗಳ ಮೇಲೆ ಹಾಗೂ ಅವರ ಚಟುವಟಿಕೆಗಳ ಮೇಲೆ ಈಗಾಗಲೇ ಕಟ್ಟೆಚ್ಚರ ವಹಿಸಲಾಗಿದ್ದು, ಕರ್ನಾಟಕದಲ್ಲಿ ಉಗ್ರರ ಯಾವುದೇ ಚಟುಚಟಿಕೆಗೆ ಅವಕಾಶ ನೀಡುವುದಿಲ್ಲ ,ತಮಿಳುನಾಡಿನಿಂದ ಉಗ್ರರ ಕುರಿತ ಮಾಹಿತಿ ಬಂದ ತಕ್ಷಣ ಮೂವರನ್ನು ಬಂಧಿಸಲಾಗಿದೆ. ಇನ್ನೂ ಇಬ್ಬರು ತಲೆಮರೆಸಿಕೊಂಡಿದ್ದು, ಅವರೂ ಸೇರಿದಂತೆ ಅವರ ಎಲ್ಲಾ ಜಾಲಗಳನ್ನು ಭೇಧಿಸುವ ಕಾರ್ಯ ಆಗುತ್ತಿದೆ ಎಂದರು.‌

ಉಗ್ರರು ನಿರಂತರವಾಗಿ ಒಂದು ಕಡೆ ಇರುವುದಿಲ್ಲ. ತಾಣಗಳನ್ನು ಬದಲಿಸುತ್ತಿರುತ್ತಾರೆ. ಉಗ್ರರ ಹಿಡಿಯಲು ಶೋಧನೆ ಮಾಡಲಾಗುತ್ತಿದೆ. ಅಲ್ಲದೇ ಭಯೋತ್ಪಾದನೆ ಮಾಡುವ ಎಲ್ಲಾ ಶಕ್ತಿಗಳನ್ನು ನಿಯಂತ್ರಿಸುವ ನಮ್ಮ ಪೊಲೀಸರು ನಿಯಂತ್ರಿಸುತ್ತಾರೆ ಎಂದರು.




Leave a Reply

Your email address will not be published. Required fields are marked *