BREAKING NEWS
Search

ರಾಜ್ಯ ಸರ್ಕಾರಕ್ಕೆ ಕೇಂದ್ರದ ಬೆಂಬಲ ಸಿಗುತ್ತಿಲ್ಲ ಎಂದ ಆರ್.ವಿ.ಡಿ ಬಿಜೆಪಿ ಪಕ್ಷ ಸೇರೋಬಗ್ಗೆ ಹೇಳಿದ್ದೇನು ಗೊತ್ತಾ?

457

ಕಾರವಾರ :- ಸಿದ್ದರಾಮಯ್ಯನವರು ಶಾಸಕಾಂಗ ಪಕ್ಷದ ನಾಯಕರಾಗಿಯೇ ಮುಂದುವರೆಯಲಿ,ಡಿಕೆ ಶಿವಕುಮಾರ್ ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳುವ ಹಕ್ಕಿದೆ ಎಂದು ಮಾಜಿ ಸಚಿವ ಹಳಿಯಾಳದ ಶಾಸಕ ಆರ್.ವಿ ದೇಶಪಾಂಡೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದ್ದಾರೆ.

ಇಂದು ಸಿದ್ದಾಪುರದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೆಪಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವಧಿ ಮುಗಿದಿಲ್ಲ ಮುಗಿದ ನಂತರ ಹೈ ಕಮಾಂಡ್ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ,ಹೈಕಮಾಂಡ್ ಎಲ್ಲರ ಅಭಿಪ್ರಾಯ ತೆಗೆದುಕೊಂಡಿದೆ,ನಾಲ್ಕು ದಿನದಲ್ಲಿ ಅಧ್ಯಕ್ಷ ಸ್ಥಾನದ ಕುರಿತು ಹೈಕಮಾಂಡ್ ಪ್ರಕಟಿಸುತ್ತದೆ,
ನನಗೆ ಪಕ್ಷದ ಜವಬ್ದಾರಿ ತೆಗೆದುಕೊಳ್ಳುವ ಕುರುತು ಹೈಕಮಾಂಡ್ ಕೇಳಿತ್ತು,ನಾನು ಸ್ಥಾನಕ್ಕೆ ಆಕಾಂಕ್ಷಿಯಲ್ಲ ಎಂದರು.

ಇನ್ನು ರಾಜ್ಯ ಸರ್ಕಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ರಾಜ್ಯ ಸರ್ಕಾರದ ಗೊಂದಲದಲ್ಲಿದೆ,ಸಂಪುಟ ವಿಸ್ತರಣೆ ಬಗ್ಗೆ ಗೊಂದಲವಿದೆ.ಹಣವೇ ಸರ್ಕಾರದಲ್ಲಿ ಇಲ್ಲದಿದ್ದಾಗ ಅಭಿವೃದ್ಧಿ ಪ್ರಶ್ನೆ ಎಲ್ಲಿಂದ ಬಂತು. ಅಭಿವೃದ್ಧಿ ಸ್ಥಗಿತವಾಗಿದೆ.

ರಾಜ್ಯದಲ್ಲಿ ಯಾವ ರೀತಿ ಅಭಿವೃದ್ಧಿ ಆಗಬೇಕು ಅದು ಆಗುತ್ತಿಲ್ಲ,ರಾಜಕೀಯವಾಗಿ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಯಾವ ರೀತಿ ಬೆಂಬಲ ಸಿಗಬೇಕು ಅದು ಸಿಗುತ್ತಿಲ್ಲ ಎಂದು ಕೇದ ವ್ಯಕ್ತಪಡಿಸಿದರು.

ನಾನು ಬಿಜೆಪಿ ಸೇರೋಲ್ಲ!

ಇನ್ನು ಮಾಧ್ಯಮದವರು ತಾವು ಬಿಜೆಪಿಗೆ ಸೇರುತ್ತೀರ ಎಂಬ ಬಗ್ಗೆ ಪ್ರಶ್ನೆ ಕೇಳಿದಾಗ ನಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ.ಅಂತಹ ಆಲೋಚನೆ ನನ್ನಲಿಲ್ಲ ಎಂದ ಅವರು ತಮ್ಮ ಮಗ ಬಿಜೆಪಿ ಸೇರುತ್ತಾರ ಎಂದಿದ್ದಕ್ಕೆ ಅದು ಅವರನ್ನೇ ಕೇಳಬೇಕು ಅದು ಅವರಿಗೆ ಬಿಟ್ಟ ವಿಚಾರ ಎಂದರು.

ಕಾಂಗ್ರೆಸ್ ಶಕ್ತಿ ಕುಂದಿಲ್ಲ!

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಆಯ್ಕೆ ಆಗಿಲ್ಲ ಅಂದಮಾತ್ರಕ್ಕೆ ಪಕ್ಷದ ವರ್ಚಸ್ಸು ಕುಂದಿದೆ ಎಂದಲ್ಲ, ನಾನು ಜನತಾದಳದಲ್ಲಿ ಇದ್ದಾಗ ನಾನೊಬ್ಬನೇ ಶಾಸಕನಿದ್ದೆ ಆದರೇ ನಂತರ ಬದಲಾಯಿತು ಅಲ್ಲವೇ ಹಾಗೆಯೇ ಬದಲಾಗಲಿದೆ.
ಮಾಧ್ಯಮಗಳು ನಾಯಕತ್ವ ಗುರುತಿಸಿ ಬೆಳೆಸುವ ಕೆಲಸ ಮಾಡಬೇಕು ಎಂದರು.
Leave a Reply

Your email address will not be published. Required fields are marked *