add

ಸಿದ್ದಾಪುರದಲ್ಲಿ ಮೊಬೈಲ್ ಸಿಗ್ನಲ್ ಗಾಗಿ ಗುಡ್ಡ ಏರಿದವನಿಗೆ ಗುಂಡೇಟು!

2587

ಕಾರವಾರ :-ಮೊಬೈಲ್ ಸಿಗ್ನಲ್ ಗಾಗಿ ಗುಡ್ಡ ಏರಿ ಮೊಬೈಲ್ ನೋಡುತ್ತಿದ್ದ ಯುವಕನೋರ್ವನನ್ನು ಕಾಡು ಪ್ರಾಣಿ ಎಂದು ತಿಳಿದು ಬೇಟೆಗಾರನೊಬ್ಬ ಗುಂಡು ಹಾರಿಸಿ ಗಾಯಗೊಳಿಸಿದ ಘಟನೆ ಸಿದ್ದಾಪುರ ತಾಲೂಕಿನ ಕವಲಕೊಪ್ಪ ಗ್ರಾಮದ ಗೊಂಟನಾಳದಲ್ಲಿ ನಡೆದಿದೆ.

ಕುಂಬಾರಕುಳಿ ಮೂಲದ ಹಾಲಿ ಗೊಂಟನಾಳದ ನಿವಾಸಿ ಪ್ರದೀಪ್ ನಾರಾಯಣ್ ಗೌಡ (೧೯) ಗಾಯಗೊಂಡ ಯುವಕ. ಈತ ನೆಟ್‌ವರ್ಕ್ ಸಂಪರ್ಕ ಅರಸಿ ಗುಡ್ಡ ಏರಿ ಕುಳಿತು ಮೊಬೈಲ್ ವೀಕ್ಷಿಸುತ್ತಿದ್ದ.

ಕಾಡು ಪ್ರಾಣಿಗಳನ್ನು ಬೇಟೆಯಾಡುವ ಚಟವುಳ್ಳ ಕವಲಕೊಪ್ಪ ಗೊಂಟನಾಳದ ರಾಮಾ ಕನ್ನಾ ನಾಯ್ಕ ಪ್ರಾಣಿ ಎಂದು ತಿಳಿದು ಗುಂಡು ಹಾರಿಸಿದ ಆರೋಪಿಯಾಗಿದ್ದಾನೆ.

ಇದರಿಂದ ಯುವಕನ ಬಲ ಮೊಣಕಾಲು ಹಾಗೂ ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿ ಗಾಯವಾಗಿದೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ