ಸಿದ್ದಾಪುರಕ್ಕೂ ಅಂಟಿದ ಕರೋನಾ ಉತ್ತರ ಕನ್ನಡ ಜಿಲ್ಲೆಯಲ್ಲಿ ಆರು ಫಾಸಿಟಿವ್. ರಾಜ್ಯದಲ್ಲಿ ಇಂದು ಎಷ್ಟು ಫಾಸಿಟಿವ್ ಗೊತ್ತಾ!

2846

ಬೆಂಗಳೂರು:- ಕರ್ನಾಟಕದಲ್ಲಿ ಇಂದು ಕರೋನಾ ಫಾಸಿಟಿವ್ ಸಂಖ್ಯೆ ಮತ್ತೆ ಏರಿಕೆಯಾಗಿದೆ.
ಕರ್ನಾಟಕದಲ್ಲಿ122 ಜಿಲ್ಲೆಯಲ್ಲಿಯೇ ಕಲ್ಬುರ್ಗಿ ಅತೀ ಹೆಚ್ಚು ಪ್ರಕರಣ ಇಂದು ವರದಿಯಾಗಿದೆ.

ರಾಜ್ಯದಲ್ಲಿ ಎಷ್ಟು ಪ್ರಕರಣ ಇದರ ಮಾಹಿತಿ ಈ ಕೆಳಗಿನಂತಿದೆ.

ಉತ್ತರ ಕನ್ನಡ ಸಿದ್ದಾಪುರಕ್ಕೂ ಅಂಟಿದ ಕರೋನಾ!

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ಆರು ಮಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ.

ಇದುವರೆಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಮಹಾ ಮಾರಿ ಸಿದ್ದಾಪುರವನ್ನು ಹೊರತುಪಡಿಸಿ ಎಲ್ಲೆಡೆ ಹರಡಿತ್ತು.ಆದರೇ ಇಂದು ಮಲೆನಾಡಿನ ಸಿದ್ದಾಪುರಕ್ಕೂ ಕಾಲಿಟ್ಟಿದೆ. ಒಂದು ವಾರದ ಹಿಂದೆ ಮಹರಾಷ್ಟ್ರ ದಿಂದ ಸಿದ್ದಾಪುರಕ್ಕೆ ಬಂದು ಕ್ವಾರಂಟೈನ್ ಆಗಿದ್ದ 52 ವರ್ಷದ ವ್ಯಕ್ತಿಯಲ್ಲಿ ಕರೋನಾ ಫಾಸಿಟಿವ್ ವರದಿ ಬಂದಿದೆ.

ಇನ್ನು ಹೊನ್ನಾವರದ 24 ವರ್ಷದ ಯುವಕ,

ಯಲ್ಲಾಪುರದ 12 ವರ್ಷದ ಹೆಣ್ಣು,3 ವರ್ಷದ ಗಂಡು ,9 ವರ್ಷದ ಗಂಡು ಮಕ್ಕಳಿಗೂ ಕರೋನಾ ಸೋಂಕು ತಗುಲಿದೆ.

ಎಲ್ಲರೂ ಮಹಾರಾಷ್ಟ್ರದಿಂದ ವಾಪಸ್ಸಾದವರಾಗಿದ್ದು ಒಂದು ವಾರದಿಂದ ಕ್ವಾರಂಟೈನ್‌ನಲ್ಲಿದ್ದರು.

ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಕೋಲಾ, ಹಳಿಯಾಳ ಹೊರತುಪಡಿಸಿ ಎಲ್ಲ ತಾಲ್ಲೂಕುಗಳಲ್ಲೂ ವ್ಯಾಪಿಸಿದ್ದು ಜಿಲ್ಲೆಯ 12 ತಾಲ್ಲೂಕುಗಳ ಪೈಕಿ 10 ತಾಲ್ಲೂಕುಗಳಲ್ಲೂ ಸೋಂಕಿತರು ಪತ್ತೆಯಾಗಿದೆ.

ಒಟ್ಟು ಕರೋನಾ ಸೊಂಕಿತರ ಸಂಖ್ಯೆ 75 ಕ್ಕೆ ಏರಿಕೆಯಾಗಿದ್ದು ಸಕ್ರಿಯ ಸಂಖ್ಯೆ 38 ಇದ್ದು ಇದುವರೆಗೆ 37 ಜನ ಗುಣಮುಖರಾಗಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ