ಬನವಾಸಿ ರಸ್ತೆಯಲ್ಲಿ ಬೈಕ್ ಗೆ ಲಾರಿ ಡಿಕ್ಕಿ:ಸವಾರರಿಬ್ಬರು ಸಾವು!

724

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕೆರೆಕೊಪ್ಪ ಕ್ರಾಸ್ ಬಳಿ ಬೈಕಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರೂ ತೀವ್ರ ಗಾಯಗೊಂಡು ಮಾರ್ಗ ಮಧ್ಯೆ ಸಾವು ಕಂಡ ಘಟನೆ ಗುರುವಾರ ಸಂಭವಿಸಿದೆ.

ಬನವಾಸಿ ರಸ್ತೆಯ ಕೆರೆಕೊಪ್ಪ ಕ್ರಾಸ್ ರಸ್ತೆಯಲ್ಲಿ ಬೈಕ್ ಸವಾರ ಚಲಿಸುತ್ತಿದ್ದಾಗ, ಶಿರಸಿ ಕಡೆಯಿಂದ ಬನವಾಸಿ ಕಡೆಗೆ ಅತೀ ವೇಗ, ನಿರ್ಲಕ್ಷ್ಯತನದಿಂದ ಲಾರಿ ಚಾಲಕ ಬಂದಿದ್ದು , ಇದೇ ಸಂದರ್ಭದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಬೈಕ್ ಸವಾರನಿಗೆ ಲಾರಿ ಬಡಿದು ಅಪಘಾತ ಸಂಭವಿಸಿದೆ.

ಬೈಕ್ ಸವಾರ ವಿನಯ್ ,ಈತನೊಂದಿಗಿದ್ದ ವಿದ್ಯಾಳಿಗೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಕಾಲುಗಳಿಗೆ ಗಂಭೀರ ಗಾಯವಾಗಿತ್ತು. ಗಾಯಾಳುವನ್ನು ಬನವಾಸಿ ಆಸ್ಪತ್ರೆಗೆ ದಾಖಲು ಮಾಡುವಾಗ ಮಾರ್ಗ ಮಧ್ಯೆ ಇಬ್ಬರೂ ಸಾವು ಕಂಡಿದ್ದಾರೆ.ಲಾರಿ ಚಾಲಕ ಪ್ರವೀಣ ಭಂಡಾರಿ ವಿರುದ್ಧ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರ ವರದಿ :- ವಿಶ್ವನಾಥ್ ನಾಯ್ಕ. ಸಿದ್ದಾಪುರ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ