ಉತ್ತರ ಕನ್ನಡದಲ್ಲಿ ವಿದೇಶ ದಿಂದ ಬಂದವರು ಹಾಗೂ ಸೊಂಕಿತರ ಸಂಪರ್ಕಕ್ಕೆ ಬಂದವರಲ್ಲೇ ಫಾಸಿಟಿವ್ !

2478

ಕಾರವಾರ :- ದಿನೇ ದಿನೇ ಹೆಚ್ಚಾಗುತ್ತಿರುವ ಕೊರೊನಾ ಶಿರಸಿಯಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದ್ದು, ಇಂದು ೬ ಪ್ರಕರಣಗಳು ದೃಢಪಟ್ಟಿದೆ ಎನ್ನಲಾಗಿದೆ. ಇದರಲ್ಲಿ ಸಬ್ ಜೈಲಿನಲ್ಲಿರುವ ಆರೋಪಿಗಳೂ ಸೇರಿ ಆಸ್ಪತ್ರೆಯ ಸಿಬ್ಬಂದಿ ಗಳಿಗೂ ಕೊರೊನಾ ಹಬ್ಬಿದ್ದು, ಸಮುದಾಯಕ್ಕೆ ಹರಡಿದ ಭಯ ವ್ಯಕ್ತವಾಗಿದೆ.

ದ್ವಿಚಕ್ರ ಕಳ್ಳತನದ ಆರೋಪಿಯ ಪ್ರಾಥಮಿಕ ಸಂಪರ್ಕದಿಂದ ಶಿರಸಿ ಸಬ್ ಜೈಲಿನಲ್ಲಿರುವ ಮೂರು ಖೈದಿಗಳಿಗೆ ಸೋಂಕು ತಗುಲಿದೆ ಎನ್ನಲಾಗಿದ್ದು, ಆರೋಪಿತ ಭೇಟಿ ‌ನೀಡಿದ್ದ ಸಾರ್ವಜನಿಕ ಆಸ್ಪತ್ರೆಯ ಮಹಿಳಾ ಸಿಬ್ಬಂದಿ, ತಾಲೂಕಿನ ಸುಗಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಕಲ್ಲಿ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊರ್ವರಿಗೆ ಸೋಂಕು ತಗುಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇರುವವರ ಗಂಟಲು ದ್ರವ ಸಂಗ್ರಹಣೆ ಕಾರ್ಯ ನಡೆದಿದೆ ಎನ್ನಲಾಗಿದ್ದು, ಆರೋಗ್ಯ ಕೇಂದ್ರದ ಸಿಬ್ಬಂದಿ ಪಾರ್ಟ ಟೈಮ್ ಕೆಲಸ ಮಾಡುವ ನಗರದ ಖಾಸಗಿ ಆಸ್ಪತ್ರೆಯೊಂದನ್ನೂ ಸಹ ಬಂದ್ ಮಾಡಲಾಗಿದೆ ಎನ್ನುವ ಮಾಹಿತಿ ದೊರಕಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಅಂಕೋಲಾ ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿ ಜಿಲ್ಲೆಯಲ್ಲಿ 34 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎನ್ನಲಾದೆ.

ಭಟ್ಕಳದಲ್ಲಿ 16, ಶಿರಸಿಯಲ್ಲಿ 6, ಹೊನ್ನಾವರದ 5, ಅಂಕೋಲಾದ 6 ಹಾಗೂ ದಾಂಡೇಲಿಯ ಓರ್ವನಲ್ಲಿ ಕೊರೋನಾ ದೃಢಪಟ್ಟಿದೆ ಎನ್ನಲಾಗಿದ್ದು ಸಂಜೆಯ ಹೆಲ್ತ್ ಬುಲೆಟಿನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ಅಂಕೋಲಾ ಪೋಲಿಸ್ ಸಿಬ್ಬಂದಿಗೆ ಅಗ್ರಗೋಣದ ಸೋಂಕಿತನ ಸಂಪರ್ಕದಿಂದ ಸೋಂಕು ಕಾಣಿಸಿಕೊಂಡಿದ್ದು, ಈಗಾಗಲೇ ಪೊಲೀಸ್ ಸಿಬ್ಬಂದಿ ಠಾಣೆಯಲ್ಲಿ ಕೆಲವರ ಸಂಪರ್ಕಕ್ಕೂ ಬಂದಿರೋದಾಗಿ ಹೇಳಲಾಗಿದ್ದು, ಈ ಕಾರಣಕ್ಕೆ ಅಂಕೋಲ ಪೊಲೀಸ್ ಠಾಣೆಯನ್ನ ಸೀಲ್ ಡೌನ್ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ವಿದೇಶದಿಂದ ಬಂದ ಹಾಗೂ ಸೊಂಕಿತರ ಸಂಪರ್ಕಕ್ಕೆ ಬಂದ ಬಹುತೇಕ ರಲ್ಲೇ ಪಾಸಿಟಿವ್ ವರದಿಯಾಗುತ್ತಿರುವುದು ಬೆಚ್ಚಿ ಬೀಳಿಸಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ