BREAKING NEWS
Search

ಶಿರಸಿ ನಗರಕ್ಕೂ ಬಂತು ಚಿರಿತೆ! ವಿಡಿಯೋ ನೋಡಿ

5191

ಕಾರವಾರ :- ಲಾಕ್ ಡೌನ್ ವೇಳೆಯಲ್ಲಿ ಮನುಷ್ಯರ ಸಂಚಾರ ಸಂಪೂರ್ಣ ಶೂನ್ಯ ವಾಗುತಿದ್ದಂತೆ ಪ್ರಾಣಿಗಳು ಸ್ವತಂತ್ರವಾಗಿ ಸಂಚಾರ ಮಾಡುತ್ತಿವೆ.

ಇದಕ್ಕೆ ತಾಜಾ ಉದಾಹರಣೆ ಎಂದರೆ ಎಂದೂ ನಗರಕ್ಕೆ ಆಗಮಿಸದ ಚಿರತೆ ನಗರದಲ್ಲಿ ಕಾಣಿಸಿಕೊಳ್ಳುತ್ತಿದೆ. ಆಷ್ಟಕ್ಕೂ ಎಲ್ಲಿ ಅಂತೀರಾ
ಶಿರಸಿನಗರದ ಟಿ.ಎಸ್.ಎಸ್. ಆಸ್ಪತ್ರೆ ಎದುರಿಗಿರುವ ಎಚ್.ಪಿ.ಗ್ಯಾಸ್ ಪಕ್ಕದ ರಸ್ತೆಯಲ್ಲಿ ಚಿರತೆ ಸಂಚರಿಸಿದ ದೃಶ್ಯ ನಿನ್ನೆ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ.

ವಿಷಯ ತಿಳಿಯುತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚೆಗೆ ಲಾಕ್ ಡೌನ್ ನಿಂದ ಪರಿಸರ ಹಾನಿ ಶಬ್ಧಮಾಲಿನ್ಯ ಅತೀ ಗರಿಷ್ಠ ಮಟ್ಟಕ್ಕೆ ಇಳಿದಿದೆ.
ಹೀಗಾಗಿ ಕಾಡು ಪ್ರಾಣಿಗಳ ಸಂಚಾರವೂ ಹೆಚ್ಚಾಗಿದ್ದು ಈ ಹಿಂದೆ ಹಳಿಯಾಳ,ದಾಂಡೇಲಿ ಪಟ್ಟಣ ಭಾಗದಲ್ಲಿ ಹಾಗೂ ಶಿರಸಿ,ಮುಂಡಗೋಡು ಭಾಗದಲ್ಲಿ ಆನೆಗಳು ಸಂಚರಿಸಿದ್ದವು ಈಗ ಶಿರಸಿ ನಗರ ಭಾಗದಲ್ಲಿ ಚಿರತೆ ಬಂದಿದ್ದು ನಗರ ನಿವಾಸಿಗಳಿಗೆ ಭಯ ಹುಟ್ಟಿಸುವ ಜೊತೆ ಪ್ರಾಣಿ ಪ್ರಿಯರಿಗೆ ಖುಷಿ ನೀಡಿದೆ.

ಚಿರತೆಯ ವಿಡಿಯೋ ನೋಡಿ.:-




Leave a Reply

Your email address will not be published. Required fields are marked *