add

ಶಿರಸಿ|ತನ್ನೊಂದಿಗೆ ಸಮಯ ಕಳೆಯದ ಪತಿ:ಕೋಪಗೊಂಡ ಪತ್ನಿ ಆತ್ಮಹತ್ಯೆ.

1252

ಕಾರವಾರ:- ತನ್ನ ಗಂಡ ತನ್ನೊಂದಿಗೆ ಹೆಚ್ಚು ಸಮಯ ಕಳೆಯುವುದಿಲ್ಲ ಹಾಗೂ ಮಾತನಾಡುವುದಿಲ್ಲ ಎಂದು ಮನನೊಂದ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಇಂದಿರಾ ನಗರದಲ್ಲಿ ನಡೆದಿದೆ.‌

ಮೂಲತಃ ಶಿರಸಿ ತಾಲೂಕಿನ‌ ಗಿಡಮಾವಿನಕಟ್ಟೆಯ ನಿವಾಸಿಯಾಗಿದ್ದ ಪಲ್ಲವಿ ವಿಜಯ ದೇವಡಿಗ (೨೭) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದಾಳೆ.

ಈಕೆ ಕಳೆದ ಎರಡು ವರ್ಷಗಳಿಂದ ಪತಿಯೊಂದಿಗೆ ಇಂದಿರಾ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು.

ಪತಿ ತನ್ನ ಜೊತೆ ಹೆಚ್ಚಿನ ಸಮಯ ಕಳೆಯುವುದಿಲ್ಲ ಎಂದು ಕೊರಗುತಿದ್ದ ಈಕೆ ಇಂದು ಪತಿ ತನ್ನ ಗೆಳೆಯರೊಂದಿಗೆ ಕ್ರಿಕೆಟ್ ನೋಡಲು ತೆರಳಿದ್ದರಿಂದ ಸಿಟ್ಟಾಗಿ ಮಗನಿಗಾಗಿ ಕಟ್ಟಲಾಗಿದ್ದ ಜೋಕಾಲಿಯ ಸೀರೆ ಸೆರಗನ್ನು ಬಿಚ್ಚಿ ಅದರ ಮೂಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:-




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ