BREAKING NEWS
Search

ಶಿರಸಿ-ವಿಶ್ರಪ್ರಾಶನದಿಂದ ಕುರಿಗಳು ಸಾವು!

271

ಕಾರವಾರ/ಶಿರಸಿ :-ವಿಷ ಪ್ರಾಶನದಿಂದ 2ಗಂಡು ಮತ್ತು 9 ಹೆಣ್ಣು ಸೇರಿ ಒಟ್ಟೂ 12ಕುರಿಗಳು ದಾರುಣ ಸಾವು ಕಂಡು ಘಟನೆ ಶಿರಸಿ ತಾಲೂಕಿನ ಇಸಳೂರಿನ‌ ವಿದ್ಯಾನಗರದಲ್ಲಿ ನಡೆದಿದೆ. ಕುರಿಗಳ ಸಾವಿನಿಂದ ಸುಮಾರು 1.5 ಲಕ್ಷಕ್ಕೂ ಅಧಿಕ ನಷ್ಟ ಎಂದು ಅಂದಾಜಿಸಲಾಗಿದೆ.

ಇಸಳೂರಿನ ಓಂಕಾರಪ್ಪ ಕೊರಚರ ಅವರಿಗೆ ಸೇರಿದ 2 ಕುರಿ ಹಾಗೂ 6ಮೇಕೆ ಮೃತಪಟ್ಟಿವೆ. ಹೆಣ್ಣು ಕುರಿಗಳು ಮರಿ ಹಾಕುವ ಹಂತದಲ್ಲಿದ್ದ ಕಾರಣ ಹೊಟ್ಟೆಯಲ್ಲಿಯೇ ಮರಿಗಳೂ ಸಹ ಮೃತಪಟ್ಟಿವೆ. ಇವುಗಳ ಸಾವು ಅನುಮಾನಾಸ್ಪದವಾಗಿದ್ದರೂ, ಮೇಲ್ನೋಟಕ್ಕೆ ವಿಷ ಪ್ರಹಸನದಿಂದ ಎಂದು ಮಾಲೀಕರು ತಿಳಿಸಿದ್ದಾರೆ.

ತೋಟದಲ್ಲಿ ಮೇಯಲು ಹೋದಾಗ 5 ಹಾಗೂ ಮನೆಯಲ್ಲಿ 7 ಕುರಿಗಳು ಸಾವು ಕಂಡಿವೆ. ಕುರಿಗಳ ಸಾಕಾಣಿಕೆ ಮಾಡುವ ಕೊರಚರ ಮನೆಯಲ್ಲಿ ಒಟ್ಟೂ 45 ಕುರಿಗಳಿದ್ದು, ಅವುಗಳಿಂದಲೇ ಜೀವನ ಸಾಗಿಸಬೇಕಾಗಿದೆ. 12 ಕುರಿಗಳ ಸಾವು ಬಹುದೊಡ್ಡ ನಷ್ಟವನ್ನು ಉಂಟು ಮಾಡಿದ್ದು, ಸರ್ಕಾರ ಸಹಾಯ ಹಸ್ತವನ್ನು ಚಾಚಿದ್ದಾರೆ.

ಕುರಿಗಳ ಸಾವು ಕಾಣುತ್ತಿದ್ದಂತೆ ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆ ವೈದ್ಯ ಡಾ.ಗಣೇಶ್ ಮತ್ತಿತ್ತರರು ಭೇಟಿ ನೀಡಿ ಸ್ಯಾಂಪಲ್ ಪಡೆದುಕೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ಮಾಡಿದ್ದಾರೆ. ಸ್ಥಳೀಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆದಷ್ಟು ಶೀಘ್ರದಲ್ಲಿ ಪರಿಹಾರ ಒದಗಿಸುವ ಕೆಲಸ ಆಗಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ‌
Leave a Reply

Your email address will not be published. Required fields are marked *