BREAKING NEWS
Search

ಚೂರಿ ಚಾಕು ಸುದ್ದಿ ಹೇಳಿದ ಹೆಬ್ಬಾರ್! 13 ನಂತರ ಯಾರು ಏನು ಕೊಟ್ಟಿದ್ರು ಎಲ್ಲಾ ಹೇಳ್ತೀನಿ ಅಂದ್ರು!

979

ಕಾರವಾರ /ಶಿರಸಿ :- ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಕ್ಕೆ ಮೋಸಮಾಡಿ ಹೋಗುವಾಗ ಚೂರಿ ಹಾಕಲಿಲ್ಲವಾ ಅದೇನು ಚೂರಿನೋ ಚಾಕುನೋ ,ನೀವು ಮೋಸಮಾಡಿಲ್ಲವೇ ಎಂದುಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ತಮ್ಮ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಮಾತಿಗೆ ತಿರುಗೇಟು ನೀಡಿದ್ದಾರೆ.‌

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಧ್ಯಮದೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ಹಿಂದೆ ಜೆಡಿಎಸ್ ನಲ್ಲಿ ಉಪ ಮುಖ್ಯಮಂತ್ರಿ ಇದ್ದವರು. ಆದರೆ ಅವರು ಪಕ್ಷ ಬಿಟ್ಟು ಬಂದಿದ್ದರು.

ದೇಶದಲ್ಲಿ ಪಕ್ಷಾಂತರ ಮಾಡಿದವನು ನಾನೊಬ್ಬನೇ ಅಲ್ಲ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದೇನೆ ಎಂದರು.‌

ಸಿದ್ಧರಾಮಯ್ಯನವರ ಮೇಲೆ‌ ವಯಕ್ತಿಕವಾಗಿ ಗೌರವ ಇದೆ. ಆದರೆ ಅವರು ಮಾತನಾಡಿರುವ, ಉಪಯೋಗಿಸಿರುವ ಭಾಷೆ ಸರಿಯಲ್ಲ.

ಅದು ಅವರಿಗೆ ಶೋಭೆ ತರುವುದಿಲ್ಲ. ನಾನು ಒಬ್ಬ ಸರ್ಕಾರದ ಭಾಗವಾಗಿ ಕ್ಷೇತ್ರಕ್ಕೆ ಹಣ ತಂದಿದ್ದೇನೆ. ಅವರ ಜೇಬಿನಿಂದ ಸಿದ್ದರಾಮಯ್ಯ ಹಣ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದು 13 ನೇ ತಾರೀಕಿನ ನಂತರ ಯಾರು ಏನು ಕೊಟ್ಟಿದ್ದರು ಏನಾಯ್ತು ಎಂದು ಹೇಳುತ್ತೇನೆ ಎಂದರು.




Leave a Reply

Your email address will not be published. Required fields are marked *