BREAKING NEWS
Search

ಶಿರಸಿ-ಮಳೆಯ ಅಬ್ಬರದಿಂದ ತೊಂದರೆ ಅನುಭವಿಸಿದ ಕೃಷಿಕರಿಗೆ ಕಾಡಾನೆ ಕಾಟ!

224

ಕಾರವಾರ /ಶಿರಸಿ : ಕಾಡಾನೆಗಳ ಹಿಂಡು ಶಿರಸಿ ತಾಲೂಕಿನ ಬದನಗೋಡ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರ ಕೃಷಿ ಪ್ರದೇಶದಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದ ಘಟನೆ ನಡೆದಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಆನವಟ್ಟಿಯಲ್ಲಿದ್ದ ನಾಲ್ಕು ಆನೆಗಳ ಹಿಂಡು ಗುರುವಾರ ಬದನಗೋಡದ ಕಾನೇಶ್ವರಿ ದೇವಾಲಯದ ಬಳಿ ಕಾಣಿಸಿಕೊಂಡಿದ್ದವು. ನಂತರ ರೈತರ ಜಮೀನನಲ್ಲಿ ಪುಂಡಾಟ ತೋರಿ ಪಕ್ಕದ ಕಾಡಿಗೆ ಸಾಗಿವೆ. ಈ ನಡುವೆ ಬದನಗೋಡದಿಂದ ಕ್ಯಾದಗಿಕೊಪ್ಪಕ್ಕೆ ಸಾಗುವ ಮಾರ್ಗ ಮಧ್ಯೆ ರೈತರ ಕೃಷಿ ಜಮೀನಿನ್ನು ತುಳಿದು ಸಾಗಿದ್ದು ಸಾಕಷ್ಟು ಹಾನಿ ಮಾಡಿವೆ.

ಮೂರು ದೊಡ್ಡ ಆನೆಗಳು ಹಾಗೂ ಒಂದು ಮರಿಯಾನೆ ಇರುವ ಹಿಂಡು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈತರು ಆತಂಕಗೊಂಡಿದ್ದು ಕೃಷಿ ಭೂಮಿ ಪ್ರದೇಶ ಹಾಗೂ ಕಾಡುಗಳಲ್ಲೇ ಹೆಚ್ಚು ಆನೆಗಳು ಕಳೆಯುತಿದ್ದು ಸ್ಥಳೀಯರು ಆತಂಕ ಪಡುವಂತಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆನೆಗಳನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ. ಆದರೇ ಆಹಾರ ಅರಸಿ ಆನೆಗಳ ಹಿಂಡು ಮರಳಿ ಕೃಷಿ ಪ್ರದೇಶಗಳಿಗೆ ನುಗ್ಗುತಿದ್ದು ಮಳೆಯಿಂದ ನಷ್ಟ ಅನುಭವಿಸುತ್ತಿರುವ ರೈತರ ಇರುವ ಅಲ್ಪ ಸ್ವಲ್ಪ ಬೆಳೆಯೂ ಕೂಡ ಕಾಡು ಪ್ರಾಣಿಗಳಿಗೆ ತುತ್ತಾಗುತಿದ್ದು ಎಲ್ಲರಲ್ಲಿ ಆತಂಕ ಮೂಡಿಸಿದೆ‌.




Leave a Reply

Your email address will not be published. Required fields are marked *