ಮಹಾರಾಷ್ಟ್ರ ದಿಂದ ಪಾಸ್ ಪಡೆಯದೆ ಬಂದ ಚಾಲಕ ಶಿರಸಿಯಲ್ಲಿ ಕ್ವಾರಂಟೈನ್ ಗೆ!ಕಳ್ಳಹಾದಿಯಿಂದ ಉತ್ತರ ಜಿಲ್ಲೆಗೆ ಬರುತ್ತಿರುವ ಮಹಾರಾಷ್ಟ್ರದ ಜನರ ಕಂಟಕ!

1551

ಕಾರವಾರ :- ಮಹಾರಾಷ್ಟ್ರ ದಿಂದ ಯಾವುದೇ ಪಾಸ್ ಇಲ್ಲದೇ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಬಂದಿದ್ದ ಓರ್ವ ಚಾಲಕನನ್ನು ಸ್ಥಳೀಯರ ದೂರಿನ ಆದಾರದಲ್ಲಿ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದ್ದು ಈತನೊಂದಿಗೆ ಇದ್ದ ಸಹ ಚಾಲಕ ಪರಾರಿಯಾಗಿದ್ದಾನೆ.ಯೋಗೀಶ್ ಪೊಲೀಸರು ವಶಕ್ಕೆ ಪಡೆದ ಮಹರಾಷ್ಟ್ರ ಮೂಲದ ಚಾಲಕ ನಾಗಿದ್ದು ಇನ್ನೋರ್ವನ ಪತ್ತೆಯಾಗಬೇಕಿದೆ.
ಶಿರಸಿಯ ದೀವಗಿ ವಾರ್ನರ್ ಪ್ಯಾಕ್ಟರಿಗೆ ಸೇರಿದ ಚಾಲಕ ನಾಗಿದ್ದು ಮಹರಾಷ್ಟ್ರದಿಂದ ಯಾವುದೇ ಪಾಸ್ ಪಡೆಯದೇ ಶಿರಸಿಗೆ ಬಂದಿದ್ದು ದೀವಗಿ ವಾರ್ನರ್ ಪ್ಯಾಕ್ಟರಿಗೆ ಸೇರಿದ್ದ ಸಹ್ಯಾದ್ರಿ ಕಲೋನಿಯ ಮನೆಯಲ್ಲಿ ತಂಗಿದ್ದರು.

ಕ್ವಾರಂಟೈನ್ ಮಾಡುವ ಹಿನ್ನಲೆಯಲ್ಲಿ ಮಾಹಿತಿ ನೀಡದೇ ತಪ್ಪಿಸಿಕೊಂಡಿದ್ದ ದೀವಗಿ ವಾರ್ನರ್ ಪ್ಯಾಕ್ಟರಿ ಚಾಲಕರು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತಿದ್ದಂತೆ ಓರ್ವ ತಪ್ಪಿಸಿಕೊಂಡಿದ್ದಾನೆ.

ಪೊಲೀಸರು ಚಾಲಕನನ್ನು ವಶಕ್ಕೆ ಪಡೆದ ಶಿರಸಿಯ ಅಲೇಖ ಇಂಟರ್ನ್ಯಾಷನಲ್ ಕ್ವಾರಂಟೈನ್ ಸೆಂಟರ್ ನಲ್ಲಿ ಕ್ವಾರಂಟೈನ್ ಮಾಡಿದ್ದು ಇನ್ನೋರ್ವ ಚಾಲಕನಿಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ. ಶಿರಸಿಯ ದೀವಗಿ ಪ್ಪಾಕ್ಟರಿಯಲ್ಲಿ ಮಹಾರಾಷ್ಟ್ರದಿಂದ ಬಂದ ಹಲವು ಚಾಲಕರಿದ್ದು ಕೆಲವರು ಮಾತ್ರ ಪಾಸ್ ಪಡೆದು ಅನುಮತಿಯೊಂದಿಗೆ ಬಂದಿದ್ದಾರೆ.ಕೆಲವರು ಅನುಮತಿ ಪಡೆಯದೇ ಬಂದಿದ್ದು ನಗರದ ವಿವಿಧ ಭಾಗದಲ್ಲಿ ತಂಗಿದ್ದಾರೆ.ಶಿರಸಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಉಳಿದವರ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.

ಕರಾವಳಿಗೆ ಸೀಮಿತವಾಗಿದ್ದ ಮಹರಾಷ್ಟ್ರ ಸೊಂಕಿತರ ಭಯ ಮಲೆನಾಡಿನ ಶಿರಸಿಗೂ ತಟ್ಟಿತೇ?

ಇಷ್ಟು ದಿನ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗಕ್ಕೆ‌ ಮಾತ್ರ ಮಹರಾಷ್ಟ್ರ ದವರಿಂದಾಗಿ ಸೀಮಿತವಾಗಿದ್ದ ಕರೋನಾ ಸೊಂಕು ಇದೀಗ ಮಲೆನಾಡು ಭಾಗಕ್ಕೂ ಆವರಿಸಿದೆ.
ಹಲವರು ಮಹರಾಷ್ಟ್ರ ದಿಂದ ಯಾವುದೆ ಅನುಮತಿ ಪಡೆಯದೇ ಕಳ್ಳಹಾದಿ ಮೂಲಕ ಜಿಲ್ಲೆಯ ಭಾಗಕ್ಕೆ ಬಂದಿದ್ದು ಕ್ವಾರಂಟೈನ್ ಆಗದೇ ತಪ್ಪಿಸಿಕೊಳ್ಳುತಿದ್ದಾರೆ.
ಇನ್ನು ಮಹರಾಷ್ಟ್ರ ದಿಂದ ಬಂದವರಲ್ಲಿ ಮಲೆನಾಡಿನ ಭಾಗವಾದ ಯಲ್ಲಾಪುರ,ಜೋಯಿಡಾ ಭಾಗಕ್ಕೂ ಸೊಂಕು ಹಬ್ಬಿತ್ತು. ಆದರೇ ಶಿರಸಿ ಭಾಗದಲ್ಲಿ ತೊಂದರೆಯಿಂದ ತಪ್ಪಿಸಿಕೊಂಡಿದ್ದರು.ಆದರೇ ಇಂದು ಶಿರಸಿಯಲ್ಲಿಯೋ ಕರೋನಾ ಸೊಂಕು ಪತ್ತೆಯಾಗುವ ಸಾಧ್ಯತೆಗಳಿದ್ದು 9 ಜನರಿಗೆ ಫಾಸಿಟಿವ್ ಬರುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳುತ್ತಿದೆ. ಇನ್ನು ಕಳ್ಳಹಾದಿಯಿಂದ ಬಂದ ಜನರನ್ನು ಹುಡುಕಿ ಕ್ವಾರಂಟೈನ್ ಮಾಡುವುದು ಜಿಲ್ಲಾ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ