BREAKING NEWS
Search

ಕರೋನಾ ಜಯಿಸಿಬಂದ ಭಟ್ಕಳೀಗರು! ಐದು ಜನ ಇಂದು ಬಿಡುಗಡೆ ವಿಡಿಯೋ ನೋಡಿ

926

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮೊದಲಬಾರಿಗೆ ಕರೋನಾ ಸೊಂಕು ಕಾಣಿಸಿಕೊಳ್ಳುವ ಮೂಲಕ ಜಿಲ್ಲೆಗೆ ಮೊದಲ ಎಂಟ್ರಿ ನೀಡಿದ್ದ ವೈರೆಸ್ ಬಹುತೇಕ ತಾಲೂಕುಗಳಿಗೆ ಹೊರ ರಾಜ್ಯ ಹಾಗೂ ದೇಶದಿಂದ ಈ ಭಾಗಕ್ಕೆ ಲಾಂಗುಡಿ ಇಡುವಂತೆ ಮಾಡಿತು.

ಇದಕ್ಕೆ ತಕ್ಕಂತೆ ಜಿಲ್ಲಾಡಳಿತ ಸಹ ಹೋರಾಟಕ್ಕೆ ವಿಶೇಷ ಪರಿಶ್ರಮ ಹಾಕಿದೆ.

ಸಮುದಾಯಕ್ಕೆ ಹಬ್ಬದಂತೆ ಎಚ್ಚರಿಕೆ ತೆಗೆದುಕೊಳ್ಳುವ ಜೊತೆ ಸೊಂಕಿತರು ಶೀಘ್ರ ಗುಣಮುಖರಾಗುವಲ್ಲಿ ವಿಶೇಷ ಕಾಳಜಿ ವಹಿಸಿ ಇಡೀ ತಂಡ ಪ್ರಯತ್ನ ಸಫಲವಾಗಿತ್ತು.

ಇಂದು ಬಿಡುಗಡೆಯಾದ ಜಿಲ್ಲೆಯ ಭಟ್ಕಳ ಮೂಲದ ಐವರಿಗೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕ ದಿಂದ ಕೊರೋನಾ ಸೋಂಕು ತಗುಲಿತ್ತು. ಅವರನ್ನ ಮೆಡಿಕಲ್ ಕಾಲೇಜಿನ ಕೋವಿಡ್ 19 ವಾರ್ಡ್ ನಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಲಾಗಿತ್ತು.

ಹದಿನಾಲ್ಕು ದಿನಕ್ಕೂ ಅಧಿಕ ಕಾಲ ಚಿಕಿತ್ಸೆ ನೀಡಿದ್ದು, ಐವರಲ್ಲಿ ಕೊರೋನಾ ನೆಗೆಟಿವ್ ಬಂದ ಹಿನ್ನಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಕ್ರಿಮ್ಸ್ ನಿರ್ದೇಶಕ ಗಜಾನನ ನಾಯ್ಕ, ಸರ್ಜನ್ ಶಿವಾನಂದ ಕುಡ್ತಳಕರ್‌ ಸೇರಿದಂತೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಗುಣಮುಖರಾದವರನ್ನ ಆಸ್ಪತ್ರೆಯಿಂದ ಬಿಳ್ಕೋಟ್ಟರು. ಕಳೆದ ಎರಡು ದಿನದ ಹಿಂದೆ 21 ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದರು. ಇದೀಗ ಐವರು ಗುಣಮುಖರಾಗಿದ್ದು, ಮೆಡಿಕಲ್ ಕಾಲೇಜಿನ ಕೋಡಿವ್ 19 ವಾರ್ಡಿನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರ ಸಂಖ್ಯೆ 26 ಕ್ಕೆ ಏರಿಕೆಯಾಗಿದೆ.

ಗುಣಮುಖರಾದವರ ವಿವರ ಇಲ್ಲಿದೆ:-

ವಿಡಿಯೋ ನೋಡಿ:-




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ