BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ಏರಿಕೆ ಕಂಡ ಕರೋನಾ ಪಾಸಿಟಿವ್ ಸಂಖ್ಯೆ.

1438

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಪಾಸಿಟಿವ್ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡಿದೆ.ಜಿಲ್ಲೆಯಲ್ಲಿ ಇಂದು ಒಂಬತ್ತು ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು ,ಕಾರವಾರ- 2, ಕುಮಟಾ-2, ಹಳಿಯಾಳ-4 ,ಜೋಯಿಡಾ-1 ಪಾಸಿಟಿವ್ ವರದಿಯಾಗಿದೆ.
ನಾಲ್ಕು ಜನರು ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು 65 ಜನ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದು,69 ಸಕ್ರಿಯ ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೋವಿಡ್ ನಿಂದ 824 ಜನ ಮೃತಪಟ್ಟಿದ್ದು ,ಈವರೆಗೆ 71295 ಜನ ಕರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಅತೀ ಹೆಚ್ಚು ಸಾವು ಸಂಭವಿಸಿದ್ದೆಲ್ಲಿ?

ತಾಲೂಕುವಾರು ಕರೋನಾ ಪಾಸಿಟಿವ್ ವಿವರ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವರೆಗೆ ಕರೋನಾ ದಿಂದ ಕಾರವಾರದಲ್ಲಿ 129 ಜ‌ನ ಮೃತಪಟ್ಟಿದ್ದಾರೆ. ಇದರ ನಂತರ ಹಳಿಯಾಳದಲ್ಲಿ 128 ಜನ ಮೃತರಾಗಿದ್ದು ,ಹೊನ್ನಾವರ ,ಶಿರಸಿಯಲ್ಲಿ ತಲಾ 112 ಜನ ಮೃತಪಟ್ಟಿದ್ದು ಅತೀ ಹೆಚ್ಚು ಸಾವಿನ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!