BREAKING NEWS
Search

ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ಬ್ರೇಕ್ ! ಹಲವು ಕಡೆ ತಟ್ಟಿದ ಕರೋನಾ ಭೀತಿ.

246

ಕಾರವಾರ: ಕೊರೊನಾ ವೈರಸ್ ಆತಂಕ ಹಿನ್ನಲೆ ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳ ಭೇಟಿಗೆ ತಡೆ ನೀಡಲಾಗಿದೆ.

ಮಾರ್ಚ್ 25ರ ವರೆಗೆ ಜಿಲ್ಲೆಗೆ ಆಗಮಿಸದಂತೆ ಪ್ರವಾಸಿಗರಿಗೆ ನಿರ್ಭಂದ ಹೇರಲಾಗಿದ್ದು
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ
ಸ್ವಯಂಪ್ರೇರಿತವಾಗಿ ಪ್ರವಾಸವನ್ನ ಮುಂದೂಡುವಂತೆ ಮನವಿಯನ್ನು ಪ್ರವಾಸಿಗರಿಗೆ ಮನವಿ ಮಾಡಲಾಗಿದೆ.

ಕಾರವಾರ, ಗೋಕರ್ಣ, ಮುರ್ಡೇಶ್ವರ, ದಾಂಡೇಲಿ ತಾಣಗಳ ಭೇಟಿಗೆ ಪ್ರವಾಸಿಗರಿಗೆ ನಿರ್ಭಂದ ಹೇರಲಾಗಿದೆ.

ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರಿಂದ
ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಈ ಕ್ರಮ ಕೈಗೊಂಡಿದೆ.

ಕಾರವಾರ ದಲ್ಲಿ ವಾರದ ಸಂತೆಗೆ ತಟ್ಟದ ಕೊರೊನಾ ಬಿಸಿ!

ಕಾರವಾರದಲ್ಲಿ ಎಂದಿನಂತೆ ಇಂದು ನಡೆಯುತ್ತಿರುವ ಸಂತೆ ಮಾರುಕಟ್ಟೆಯಲ್ಲಿ
ಬೆಳಿಗ್ಗೆಯಿಂದಲೇ ತರಕಾರಿ ಖರೀದಿಗೆ ಗ್ರಾಹಕರು ಮುಂದಾದರು.

ಕೊರೊನಾ ಸೋಂಕು ಹರಡುವ ಹಿನ್ನಲೆ ಸಂಜೆ 6ರವರೆಗೆ ಮಾತ್ರ ಸಂತೆಗೆ ಅವಕಾಶವನ್ನು ನಗರಸಭೆ ಅವಕಾಶ ಕಲ್ಪಿಸಿತ್ತು.
ಹೆಚ್ಚು ಜನರು ಮಾರುಕಟ್ಟೆಯಲ್ಲಿ ಸೇರದಂತೆ ಮನವಿಯನ್ನು ಮಾಡಲಾಗಿದ್ದು ಇಂದು ಸಂಜೆ ಆರರ ನಂತರ ತರಕಾರಿ ಅಂಗಡಿಗಳನ್ನು ತೆರವು ಮಾಡಲಾಯಿತು.

ಆರೋಗ್ಯ ಇಲಾಖೆಯಿಂದ ತಪಾಸಣೆ!

ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಪ್ರಮುಖ ಪ್ರವಾಸಿ ತಾಣಗಳಲ್ಲಿ ಹೆಲ್ಪ್ ಡೆಸ್ಕ್ ಮಾಡಲಾಗಿತ್ತು.ದೇಶ ವಿದೇಶದ ಹಲವು ಜನರನ್ನು ತಪಾಸಣೆ ಮಾಡುವ ಜೊತೆ ಜಾಗೃತಿ ಮೂಡಿಸಲಾಯಿತು.

ಭಟ್ಕಳ ಯುವಕನಿಗೆ ಕರೋನಾ ನೆಗಟೀವ್

ದುಬೈ ನಿಂದ ಭಟ್ಕಳಕ್ಕೆ ಆಗಮಿಸಿದ್ದ ಭಟ್ಕಳ ಮೂಲದ ಇಬ್ಬರ ರಕ್ತ ಪರೀಕ್ಷೆಯನ್ನು ಮಾಡಲು ಶಿವಮೊಗ್ಗ ದ ಮೆಗ್ಗಾನ ಆಸ್ಪತ್ರೆಗೆ ರಕ್ತದ ಮಾದರಿಯನ್ನು ಕಳುಹಿಸಲಾಗಿದ್ದು ಇಬ್ಬರಲ್ಲೂ ರಕ್ತ ಪರೀಕ್ಷೆ ನಂತರ ಕೊರೋನಾ ವೈರೆಸ್ ಇಲ್ಲ ಎಂಬುದು ದೃಡಪಟ್ಟಿರುವ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಯಾವೊಬ್ಬರಿಗೂ ಕರೋನ ಪತ್ತೆಯಾಗದಿರುವುದು ಸಂತಸದ ವಿಷಯವಾಗಿದೆ.
Leave a Reply

Your email address will not be published. Required fields are marked *