UPSC ಪರೀಕ್ಷೆ- ರ್ಯಾಂಕ್ ಬರುವ ಮೂಲಕ ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆತಂದ ಮೂವರು

2944

ಕಾರವಾರ:- ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ದೇಶದ ಅತ್ಯುನ್ನತ ನಾಗರಿಕ ಸೇವೆಗಳ ನೇಮಕಕ್ಕೆ ನಡೆಸಿದ 2019ನೇ ಸಾಲಿನ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದ್ದು. ಅಂಕೋಲಾದ ಹೇಮಾ ನಾಯ್ಕ (225) ,ದಾಂಡೇಲಿಯ ಸಚಿನ್ ಹಿರೇಮಠ್ (215),
ಕುಮಟಾ ಕತಗಾಲ ಮೂಲದ ಬೆಂಗಳೂರು ವಾಸವಿರುವ ಬಿ ಕೃತಿ. (297)ನೇ ಸ್ಥಾನದೊಂದಿಗೆ ತೇರ್ಗಡೆಯಾಗುವುದರ ಮೂಲಕ ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.

ಅಂಕೋಲಾ ತಾಲೂಕಿನ ವಾಸರಕುದ್ರಿಗಿಯ ಶಿಕ್ಷಕ ದಂಪತಿ ಶಾಂತಾರಾಮ ನಾಯಕ ಹಾಗು ರಾಜಮ್ಮ ಅವರ ಪುತ್ರಿ ಹೇಮಾ ನಾಯಕ, ಅವರು 225ನೇ ಸ್ಥಾನದೊಂದಿಗೆ ತೇರ್ಗಡೆಯಾಗಿದ್ದಾರೆ. ಅಂಕೋಲಾದ ಶ್ರೀರಾಮ್ ಸ್ಟಡಿ ಸರ್ಕಲ್‌’ ಹಾಗು ಬೆಂಗಳೂರಿನ ಇನ್ಸೈಟ್ಸ್ ಅಕಾಡೆಮಿಯಲ್ಲಿ ಇವರು ಕೆಲವು ಸಮಯ ಕೋಚಿಂಗ್ ತೆಗೆದುಕೊಂಡಿದ್ದರು.

ಕುಮಟ ಕತಗಾಲದ ಮೂಲದ ಬೆಂಗಳೂರು ನಿವಾಸಿ ರಿಟೈರ್ಡ್ ಜಾಂಯ್ಟ್ ಡೈರೆಕ್ಟರ್ (ಎಜ್ಯುಕೇಷನ್) ಭಾಸ್ಕರ್ ವಿಷ್ಣು ಭಟ್ಟ ಹಾಗು ಅಲಕಾ ಭಟ್ಟ ದಂಪತಿಯ ಕಿರಿಯ ಪುತ್ರಿ ಬಿ ಕೃತಿ, ತಮ್ಮ ಇಂಜಿನಿಯರಿಂಗ್ ಪದವಿ ಬಳಿಕ ಎರಡು ವರ್ಷಗಳ ಕಾಲ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿ ನಂತರ ಯುಪಿಎಸ್ಸಿ ಪರೀಕ್ಷೆ ಎದುರಿಸಿ, ಇದೀಗ 297ನೇ ಸ್ಥಾನದೊಂದಿಗೆ ತೇರ್ಗಡೆಯಾಗಿದ್ದರೆ ದಾಂಡೇಲಿಯ ಸಚೀನ್ ಹಿರೇಮಠ್ 215 ನೇ ರ್ಯಾಂಕ್ ಬಂದಿದ್ದಾರೆ.

ಟಾಪ್- 10 ಪಟ್ಟಿಯಲ್ಲಿ ಮೂವರು ಮಹಿಳೆಯರು ಮತ್ತು ಟಾಪ್ -25 ಶ್ರೇಯಾಂಕಗಳಲ್ಲಿ ಕನಿಷ್ಠ ಒಂಬತ್ತು ಮಂದಿ ಇದ್ದಾರೆ. 2019 ಸಾಲಿನಲ್ಲಿ ಒಟ್ಟು 829 ಅಭ್ಯರ್ಥಿಗಳು ವಿವಿಧ ನಾಗರೀಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ.

ಐಎಎಸ್​ಗೆ(ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್) 180, ಐಎಫ್​ಎಸ್ (ಇಂಡಿಯನ್ ಫಾರಿನ್ ಸರ್ವೀಸ್) 24, ಐಪಿಎಸ್ (ಇಂಡಿಯನ್ ಪೊಲೀಸ್ ಸರ್ವೀಸ್) 150, ಕೇಂದ್ರ ಸರ್ಕಾರದ ಎ ಗ್ರೂಪ್ ಹುದ್ದೆಗೆ 438 ಹಾಗೂ ಬಿ ಗ್ರೂಪ್ ಹುದ್ದೆಗೆ 135 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಸಾಮಾನ್ಯ ವರ್ಗ – 304 ಅಭ್ಯರ್ಥಿಗಳು, ಆರ್ಥಿಕವಾಗಿ ಹಿಂದುಳಿದ ವರ್ಗ -78 ಅಭ್ಯರ್ಥಿಗಳು, ಹಿಂದುಳಿದ ವರ್ಗ – 251 ಅಭ್ಯರ್ಥಿಗಳು, ಪರಿಶಿಷ್ಟ ಜಾತಿ – 129 ಅಭ್ಯರ್ಥಿಗಳು, ಪರಿಶಿಷ್ಟ ಪಂಗಡ – 67 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

829 ಅಭ್ಯರ್ಥಿಗಳಲ್ಲಿ ಕರ್ನಾಟಕದಿಂದ 37 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ಯಶಸ್ವಿನಿ ಬಿ 71 ರ‍್ಯಾಂಕ್ ಗಳಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ