ಯಲ್ಲಾಪುರ-ಗನ್ ಪೌಡರ್ ಮಾರಾಟ ಮಾಡುತಿದ್ದವನ ಬಂಧನ!

618

ಕಾರವಾರ- ಅನಧಿಕೃತ ಮಾರಾಟ ಮಾಡುತಿದ್ದ ಗನ್ ಪೌಡರ್ ಹಾಗೂ ಕೇಪ್ ಗಳನ್ನು  ವಶ ಪಡಿಸಿಕೊಂಡು ಮಾರಾಟ ಮಾಡುತಿದ್ದ ವ್ಯಕ್ತಿಯನ್ನು  ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ಮಾರಿಕಾಂಬ ಸ್ಟೋರ್ಸ್ ನಲ್ಲಿ ನಡೆದಿದೆ.

ಬಂಧಿತ ಆರೋಪಿ

ಯಲ್ಲಾಪುರ ವೃತ್ತ ನಿರೀಕ್ಷಕ ಮಂಜುನಾಥ್ ನಾಯ್ಕ ನೇತ್ರತ್ವದಲ್ಲಿ ದಾಳಿ ನಡೆಸಿ ವಶಪಡಿಸಿಕೊಳ್ಳಲಾಗಿದ್ದು 8100 ರೂ ಮೌಲ್ಯದ 12 ಕೆ.ಜಿ ಗನ್ ಪೌಡರ್ ,500ಗ್ರಾಮ್ ಕೇಪ್ ವಶ ಪಡಿಸಿಕೊಂಡು ಮಾರಾಟ ಮಾಡುತಿದ್ದ ಅಂಗಡಿ ಮಾಲೀಕ ಗಣಪತಿ ಶೇಟ್ (65). ಎಂಬುವವರನ್ನು ಬಂಧಿಸಿ ಕಲಂ 285,286,ಪಿ.ಸಿ ಹಾಗೂ 9(B) ಸ್ಟೋಟಕ ನಿಯಮದಡಿ ಪ್ರಕರಣ ಯಲ್ಲಾಪುರ ಠಾಣೆಯಲ್ಲಿ ದಾಖಲಾಗಿದೆ.

#police #yallapur #crime
Leave a Reply

Your email address will not be published. Required fields are marked *