BREAKING NEWS
Search

ನಾಳೆಯಿಂದ ನೀತಿ ಸಂಹಿತೆ ಜಾರಿ- ಸಿದ್ದವಾಯ್ತು ಉಪಕದನಕ್ಕೆ ವೇದಿಕೆ!

433

ಕಾರವಾರ:- ಅನರ್ಹ ಶಾಸಕರ ತೀರ್ಪು ಬರುವ ಮುಂಚಿತವಾಗಿ ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆ ಇದೇ ತಿಂಗಳ 11 ರಿಂದ ಜಾರಿ ಮಾಡಲಿದೆ.

ಎಲ್ಲೆಲ್ಲಿ ನೀತಿ ಸಂಹಿತೆ ಜಾರಿ ಇಲ್ಲಿದೆ ವಿವರ:-

ಉತ್ತರ ಕನ್ನಡ ಜಿಲ್ಲೆ ಸೇರಿ ಆರು ಜಿಲ್ಲೆಗೆ ಮಾತ್ರ ನೀತಿ ಸಂಹಿತೆ ಇದ್ದು ಉಳಿದ ಒಂಬತ್ತು ಜಿಲ್ಲೆಯ ಆಯಾ ಕ್ಷೇತ್ರಕ್ಕೆ ಮಾತ್ರ ನೀತಿ ಸಂಹಿತೆ ಗೆ ಒಳಪಡಲಿದೆ.

ನೀತಿ ಸಂಹಿತೆ ಒಳಪಡುವ ಜಿಲ್ಲೆಗಳು-
ಉತ್ತರ ಕನ್ನಡ
ಹಾವೇರಿ
ಚಿಕ್ಕಬಳ್ಳಾಪುರ
ಬೆಂಗಳೂರು ಗ್ರಾಮಾಂತರ ಜಿಲ್ಲೆ
ಮಂಡ್ಯ.

ನೀತಿ ಸಂಹಿತೆ ಒಳಪಡುವ ಕ್ಷೇತ್ರಗಳು :-
ಅಥಣಿ,ಕಾಗವಾಡ,ಗೋಕಾಕ್, ವಿಜಯನಗರ, ಕೆ.ಆರ್.ಪುರ,ಯಶವಂತಪುರ, ಮಹಾಲಕ್ಷ್ಮಿ ಲೇಔಟ್,ಶಿವಾಜಿ ನಗರ,ಹುಣಸೂರು.
ಈ ಕ್ಷೇತ್ರದಲ್ಲಿ ಮಾತ್ರ ಜಿಲ್ಲೆಗೆ ನೀತಿ ಸಂಹಿತೆ ಒಳಪಡುವುದಿಲ್ಲ.

ಉಪಚುನಾವಣೆ ನಡೆಯಲಿರುವ ಆಯಾ ಕ್ಷೇತ್ರಗಳಲ್ಲಿ ಸೋಮವಾರದಿಂದ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಇಂದು ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಿದ ಅವರು, ಇಡೀ ಜಿಲ್ಲೆಗೆ ನೀತಿ ಸಂಹಿತೆ ಅನ್ವಯ ಮಾಡಿದರೆ ಅದರಿಂದ ಅಭಿವೃದ್ಧಿ ಕಾರ್ಯಗಳಿಗೆ ಸಮಸ್ಯೆಯಾಗುತ್ತದೆ. ಇದರಿಂದ ಕೇವಲ ಕ್ಷೇತ್ರಕಷ್ಟೇ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.

ಉಪಚುನಾವಣೆಯಲ್ಲಿ ಈ ಸಲ ಸುಧಾರಿತ `ಎಂ 3’ ಮತಯಂತ್ರಗಳನ್ನು ಬಳಸಲಾಗುವುದು. ಇದನ್ನು 2018ರಲ್ಲಿ ಮೊದಲ ಬಾರಿಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಬಳಸಲಾಗಿತ್ತು ಎಂದು ಸಂಜೀವ್ ಕುಮಾರ್ ಹೇಳಿದ್ದಾರೆ.

ಯಲ್ಲಾಪುರದಲ್ಲಿ ಘಟಾನುಘಟಿಗಳ ನಾಮ ಪತ್ರ ಸಲ್ಲಿಕೆ ಯಾವಾಗ?

ಕಾಂಗ್ರೆಸ್ ನಿಂದ ಹೊರಬಂದ ಶಿವರಾಮ್ ಹೆಬ್ಬಾರ್ ಅನರ್ಹತೆ ಕೋರ್ಟ ನಲ್ಲಿ ಇದೇ ತಿಂಗಳ 13 ರಂದು ತೀರ್ಪು ಬರುವ ನಿರೀಕ್ಷೆ ಇದೆ.

ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿರುವ ಆಡಿಯೋ ಕೋರ್ಟ್ ನಲ್ಲಿ ಸಹ ಪ್ರತಿದ್ವನಿಸಿದ್ದು ಅನರ್ಹರಿಗೆ ಕಂಠಕವಾಗುವ ಸಾಧ್ಯತೆ ಕೂಡ ಇದೆ .

ಆದರೂ ಒಂದು ವೇಳೆ ಅನರ್ಹರು ಸ್ಪರ್ದಿಸಲು ಅವಕಾಶ ಮಾಡಿಕೊಟ್ಟರೆ ಶಿವರಾಮ್ ಹೆಬ್ಬಾರ್ ರವರು 17 ಅಥವಾ 18 ನೇ ತಾರೀಕಿನಂದು ನಾಮ ಪತ್ರ ಸಲ್ಲಿಕೆ ಮಾಡುವ ಸಾಧ್ಯತೆಗಳಿವೆ.

ಇನ್ನು ಕಾಂಗ್ರೆಸ್ ನಿಂದ ಭೀಮಣ್ಣ ನಾಯ್ಕ ರವರಿಗೆ ಟಿಕೇಟ್ ನೀಡಿದ್ದು ಬೀಮಣ್ಣ ನಾಯ್ಕ ರವರು 14 ರಂದು ನಾಮಪತ್ರ ಸಲ್ಲಿಸುವ ನಿರೀಕ್ಷೆಯಿದೆ.

ಇನ್ನು ಸದ್ಯ ಜೆಡಿಎಸ್ ನಿಂದ ಯಾವ ಅಭ್ಯಾರ್ಥಿ ಸಹ ಘೋಷಣೆಯಾಗಿಲ್ಲ ಅದಲ್ಲದೇ ಉಪ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಲ್ಲಿ ತಟಸ್ಥ ವಾಗಿ ಉಳಿಯುವ ಅಥವಾ ಯಾವುದಾದರೂ ಪಕ್ಷಕ್ಕೆ ಬೆಂಬಲ ನೀಡುವ ಸಾಧ್ಯತೆಗಳಿವೆ.
Leave a Reply

Your email address will not be published. Required fields are marked *