BREAKING NEWS
Search

ಯಲ್ಲಾಪುರ-ಮದುವೆಗೆ ಹೊರಟ ಮದುಮಗ ಅಪಘಾತದಲ್ಲಿ ಮಸಣ ಸೇರಿದ

1267

ಕಾರವಾರ :- ಕಾರು ಹಾಗೂ ಲಾರಿ ನಡುವೆ ಡಿಕ್ಕಿ ಯಾಗಿ ಕಾರಿನಲ್ಲಿದ್ದ ಮದುವೆಗೆ ಹೊರಟಿದ್ದ ಮದುಮಗ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ೬೩ ರಲ್ಲಿ ನಡೆದಿದೆ.
ಅಫ್ರೋಜ್ ಶೇಖ್ (೨೭) ಮೃತಪಟ್ಟ ಮದುಮಗನಾಗಿದ್ದು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಪಟ್ಟಣ ನಿವಾಸಿಯಾಗಿದ್ದಾನೆ.

ಅಪಘಾತಗೊಂಡ ಕಾರು.

ಕೆಲವು ವರ್ಷಗಳಿಂದ ಹಾನಗಲ್ ಮೂಲದ ಯುವತಿಯನ್ನು ಪ್ರೀತಿಸಿ ಇಬ್ಬರು ಮನೆಯವರನ್ನೂ ಒಪ್ಪಿಸಿ ಇಂದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನಲ್ಲಿ ಈತನ ಮದುವೆ ನಿಶ್ಚಯವಾಗಿತ್ತು.

ಆದರೇ ದೃರಾದೃಷ್ಟ ವಶಾತ್ ಕಾರಿನಲ್ಲಿ ತೆರಳುವಾಗ ಟ್ಯಾಂಕರ್ ಡಿಕ್ಕಿಯಾಗಿ ಮಧುಮಗ ಸ್ಥಳದಲ್ಲೇ ಸಾವು ಕಂಡಿದ್ದು ನಾಲ್ಕು ಜನ ಗಂಭೀರ ಗಾಯಗೊಂಡಿದ್ದಾರೆ.ಘಟನೆ ಸಂಬಂಧ
ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣದಾಖಲಾಗಿದೆ.
Leave a Reply

Your email address will not be published. Required fields are marked *