ಯಲ್ಲಾಪುರದಲ್ಲಿ ಟ್ಯಾಂಕರ್ ನಿಂದ ಅನಿಲದ ಹೊಗೆ ತಂತು ಆತಂಕ! ಜಿಲ್ಲೆಯ ಇಂದಿನ ಪ್ರಮುಖ ಸುದ್ದಿಗಳು ಇಲ್ಲಿವೆ.

497

ಹೊನ್ನಾವರದ ಇಕೋ ಬೀಚ್ ಗೆ ಅಂತರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಾಸರಕೋಡಿನ ಇಕೋ ಬೀಚ್ ಗೆ ‘ಬ್ಲ್ಯೂ ಫ್ಲಾಗ್’ ಬೀಚ್ ಅಂತರರಾಷ್ಟ್ರೀಯ ಮಾನ್ಯತೆ ದೊರೆತಿದೆ.
ಕಾಸರಕೋಡಿನಲ್ಲಿರುವ ಇಕೋ ಬೀಚ್ ಇದೀಗ ಅಂತರಾಷ್ಟ್ರೀಯ ಮಟ್ಟದ ಬೀಚ್‌ ಆಗಿ ಮೇಲ್ದರ್ಜೆಗೇರಿದೆ. ಕಡಲತೀರಕ್ಕೆ ಬರುವ ಪ್ರವಾಸಿಗರಿಗೆ ಕುಳಿತುಕೊಳ್ಳುವ ಆಸನದಿಂದ ಹಿಡಿದು ಕುಡಿಯುವ ನೀರು, ಮಕ್ಕಳ ಆಟಿಕೆಗಳು, ಜೀವರಕ್ಷಕ ಸಿಬ್ಬಂದಿ ಹಾಗೂ ಮುಖ್ಯವಾಗಿ ಕಡಲತೀರದ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಪ್ರತ್ಯೇಕ ಸಿಬ್ಬಂದಿ ಒಳಗೊಂಡು ವಿನೂತನ ಮಾದರಿಯ ವ್ಯವಸ್ಥೆ ಒದಗಿಸಲಾಗಿದೆ.
ಈ ಹಿನ್ನಲೆಯಲ್ಲಿ ಬ್ಲೂ ಫ್ಲಾಗ್ ಅಂತರಾಷ್ಟ್ರೀಯ ಮಾನ್ಯತೆ ದೊರೆತಿದೆ.

ಕುಮಟಾ-ಶಿರಸಿ ಬದಲಿ ರಸ್ತೆ ಮಾರ್ಗ ಕ್ಕೆ ಅಧಿಕಾರಿಗಳ ಸಭೆ.

ಕುಮಟಾ-ಶಿರಸಿ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಹಿನ್ನಲೆಯಲ್ಲಿ ನಾಳೆಯಿಂದ 18 ತಿಂಗಳಕಾಲ ಸಂಪೂರ್ಣ ಬಂದ್ ಮಾಡುತಿದ್ದು ಪರ್ಯಾಯ ಮಾರ್ಗ ಕುರಿತು ನಾಳೆ ಶಿರಸಿ ಮತ್ತು ಕುಮಟಾ ಉಪವಿಭಾಗಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದಿದ್ದಾರೆ.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ,ಲೋಕೋಪಯೋಗಿ ಇಲಾಖೆ,ಪಂಚಾಯತ್ ರಾಜ್ ಅಧಿಕಾರಿಗಳು ಹಾಗೂ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರ ಸಭೆ ಕರೆದಿದ್ದು ಇವರೊಂದಿಗೆ ಚರ್ಚಿಸಿ ಸ್ಥಳೀಯರಿಗೆ ಪರ್ಯಾಯ ಮಾರ್ಗ ಗುರುತಿಸಿ ನಂತರ ಕಾಮಗಾರಿ ಪ್ರಾರಂಭಿಸಲಾಗಿವುದು ಎಂದು ಇಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ಮುರಡೇಶ್ವರದಲ್ಲಿ ನೀರುಪಾಲಾಗುತಿದ್ದ ತುಮಕೂರಿನ ಇಬ್ಬರು ಪ್ರವಾಸಿಗರ ರಕ್ಷಣೆ

ಮರಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದು ತುಮಕೂರಿನ ಇಬ್ಬರು ಮರಡೇಶ್ವರದ ಕಡಲಲ್ಲಿ ಈಜಲು ಹೋಗಿ ನೀರಿನಲ್ಲಿ ಸಿಲುಕಿದ್ದ ಇಬ್ಬರನ್ನು ಲೈಫ್ ಗಾರ್ಡ ಸಿಬ್ಬಂದಿ ರಕ್ಷಿಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ.ತುಮಕೂರಿನ ಚರಣ್,ಅರ್ಜುನ್ ರಕ್ಷಣೆಗೊಳಗಾದ ಪ್ರವಾಸಿಗರು.
ಜಯರಾಮ್ ಹರಿಕಾಂತ್,ಅಣ್ಣಪ್ಪ,ಶಶಿಧರ್ ನಾಯ್ಕ ಪ್ರವಾಸಿಗರನ್ನು ರಕ್ಷಣೆ ಮಾಡಿದ ಲೈಫ್ ಗಾರ್ಡ ಸಿಬ್ಬಂದಿ. ಮರಡೇಶ್ವರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಇಂದು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಹಾಗು ಮಲೆನಾಡು ಭಾಗದಲ್ಲಿ ಮಳೆ ಸುರಿದಿದೆ. ಕರಾವಳಿ ಭಾಗದ ಕಾರವಾರ ಹಾಗು ಸಿದ್ದಾಪುರ ಭಾಗದ ಗಟ್ಟ ಪ್ರದೇಶದಲ್ಲಿ ಮಳೆ ಸುರಿದಿದ್ದು ಇನ್ನೂ ಮೂರು ದಿನಗಳ ಕಾಲ ಕರಾವಳಿ ಭಾಗದಲ್ಲಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಗೋಕರ್ಣ ಮಹಾಬಲೇಶ್ವರ ದರ್ಶನಕ್ಕೆ ಹರಿದುಬಂದ ಜನಸಾಗರ.

ಕರೋನಾ ದಿಂದ ಬಂದ್ ಆಗಿದ್ದ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಇದೇ ತಿಂಗಳ ಐದರಂದು ಪ್ರಾರಂಭವಾಗಿದೆ.ಇಂದು ಭಾನುವಾರವಾದ ಕಾರಣ ಮಹಾಬಲೇಶ್ವರ ದೇವಸ್ಥಾನಕ್ಕೆ ರಾಜ್ಯದ ನಾನಾ ಭಾಗದಿಂದ ಭಕ್ತ ಸಾಗರ ಹರಿದುಬಂದಿದೆ.ಈ ಹಿನ್ನಲೆಯಲ್ಲಿ ದೇವಸ್ಥಾನ ಆಡಳಿತ ಮಂಡಳಿ ಕರೋನಾ ಸೋಂಕು ಹರಡದಂತೆ ಸ್ಯಾನಿಟೈಜ್ ವ್ಯವಸ್ಥೆ ಜೊತೆಗೆ ಆತ್ಮಲಿಂಗ ದರ್ಶನಕ್ಕೆ ಹಂತ ಹಂತವಾಗಿ ಐವತ್ತು ಜನರಿಗೆ ಮಾತ್ರ ಅವಕಾಶ ಮಾಡಿಕೊಟ್ಟಿದ್ದು ಭಕ್ತರು ದೇವರ ದರ್ಶನ ಪಡೆದರು.

ಹಿರಿಯ ಸಹಕಾರಿ ಡಾ.ವಿ ಎಸ್ ಸೋಂದೆ ವಿಧಿವಶ.

ಶಿರಸಿ: ಶಿರಸಿಯ ಸಹಕಾರಿಗಳಲ್ಲಿ ಒಬ್ಬರಾಗಿದ್ದ ಶಿರಸಿಯ ಡಾ. ವಿ ಎಸ್ ಸೋಂದೆ ವಿಧಿವಶರಾಗಿದ್ದಾರೆ.
ಶಿರಸಿಯ ಅರ್ಬನ್ ಬ್ಯಾಂಕ್ ಸೇರಿದಂತೆ ಹಲವಾರು ಶಿಕ್ಷಣ, ಧಾರ್ಮಿಕ, ಸಾಮಾಜಿಕ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ಮಾರ್ಗದರ್ಶನ ಮಾಡಿದ್ದರು. ಡಾ. ಸೋಂದೆಯವರ ಸಾವು ಜಿಲ್ಲೆಗೆ ತುಂಬಲಾರದ ನಷ್ಟ.

ಯಲ್ಲಾಪುರದಲ್ಲಿ ಆತಂಕ ಸೃಷ್ಟಿಸಿದ ಟ್ಯಾಂಕರ್ ಹೊಗೆ!

ಯಲ್ಲಾಪುರದ ನಗರದಲ್ಲಿ ಟ್ಯಾಂಕರ್ ನಿಂದ ಅನಿಲದ ಹೊಗೆ ಹೊರಸೂಸಿ ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ಇಂದು ನಡೆದಿದೆ. ಅದೃಷ್ಟವಶಾತ್ ಟ್ಯಾಂಕರ್ ನಿಂದ ಸುರಿದ ಅನಿಲದ ಹೊಗೆ ಅಪಾಯಕಾರಿ ಆಗಿಲ್ಲದ ಕಾರಣ ಜನರ ಭಯ ನಿವಾರಣೆಯಾಯ್ತು. ನಂತರ ಟ್ಯಾಂಕರ್ ಅನ್ನು ಸ್ಥಳಾಂತರಿಸಲಾಯಿತು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ