ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 76 ಮಂದಿಗೆ ಕೋವಿಡ್- 19 ಸೋಂಕು ದೃಢಪಟ್ಟಿದೆ.
ದಾಂಡೇಲಿಯಲ್ಲಿ ಇಂದು ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ದಾಂಡೇಲಿ- ಹಳಿಯಾಳ ಸೇರಿ 37 ಸೋಂಕು ಪ್ರಕರಣಗಳು ವರದಿಯಾಗಿವೆ. ಯಲ್ಲಾಪುರದಲ್ಲಿ 16, ಶಿರಸಿ 8, ಕುಮಟಾ 6, ಕಾರವಾರ 4, ಮುಂಡಗೋಡದಲ್ಲಿ 3, ಭಟ್ಕಳದಲ್ಲಿ 2 ಪ್ರಕರಣಗಳು ದೃಢಪಟ್ಟಿವೆ.
ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ಇಲ್ಲಿದೆ.



ಯಲ್ಲಾಪುರದಲ್ಲಿ ಸೋಂಕು ದೃಢಪಟ್ಟವರ ಪೈಕಿ ಮೂವರು ಸಾರಿಗೆ ಸಿಬ್ಬಂದಿ, ಓರ್ವ ತಾಲೂಕು ಆಸ್ಪತ್ರೆಯ ಸಿಬ್ಬಂದಿಯೂ ಸೇರಿದ್ದಾರೆ. ಶಿರಸಿಯಲ್ಲಿ ಪ್ರಸಿದ್ಧ ಎನ್ ಜಿಒನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂವರು ಸಿಬ್ಬಂದಿಗೆ ಸೋಂಕು ತಗುಲಿದೆ.