BREAKING NEWS
Search

ಉತ್ತರ ಕನ್ನಡದಲ್ಲಿ ಆರು ಜನ ಕರೋನಾ ದಿಂದ ಗುಣಮುಖ! ಇಂದು ಭಟ್ಕಳ ಹೊನ್ನಾವರಕ್ಕೆ ಮತ್ತೆ ಶಾಕ್!

1145

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಇಬ್ಬರಿಗೆ ಕರೋನಾ ಫಾಸಿಟಿವ್ ವರದಿಯಾಗಿದೆ. ವಿಜಯವಾಡ ದಿಂದ ಜಿಲ್ಲೆಗೆ ಬಂದ ಭಟ್ಕಳ ಮೂಲದ 38 ವರ್ಷದ ಪುರುಷ ,ಮುಂಬೈ ನಿಂದ ಹೊನ್ನಾವರಕ್ಕೆ ಬಂದ 32 ವರ್ಷದ ಮಹಿಳೆಗೆ ಫಾಸಿಟಿವ್ ವರದಿಯಾಗಿದ್ದು ಜಿಲ್ಲೆಯಲ್ಲಿ 33 ಸಕ್ರಿಯ ಪ್ರಕರಣಗಳಿದ್ದು 35 ಕ್ಕೆ ಏರಿಕೆಯಾಗಿದೆ.

ಇಂದಿನ ಸೊಂಕಿತರ ವರದಿ:-

ಜಿಲ್ಲೆಯಲ್ಲಿ ಆರು ಜನ ಗುಣಮುಖ !

13 ವರ್ಷದ ಬಾಲಕ ಸೇರಿದಂತೆ 6 ಕೊರೊನಾ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು ಇಂದು ಕಾರವಾರ ಮೆಡಿಕಲ್ ಕಾಲೇಜಿನ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

64 ವರ್ಷದ ಮಹಿಳೆ, 65 ವರ್ಷದ ಪುರುಷ ,13 ವರ್ಷದ ಬಾಲಕ, 50 ವರ್ಷದ ಪುರುಷ, 19 ವರ್ಷದ ಯುವತಿ ಹಾಗೂ 18 ವರ್ಷದ ಯುವಕ ಗುಣಮುಖರಾದವರು. ಮೆಡಿಕಲ್ ಕಾಲೇಜಿನ ಡೀನ್ ಡಾ. ಗಜಾನನ ನಾಯಕ, ವೈದ್ಯರು ಹಾಗೂ ಸಿಬ್ಬಂದಿ ಗುಣಮುಖರಾದವರಿಗೆ ಶುಭ ಹಾರೈಸಿ ಬೀಳ್ಕೊಟ್ಟರು.

ನಾಲ್ಕೇ ದಿನಕ್ಕೆ ಗುಣಮುಖರು!


ಆಸ್ಪತ್ರೆಯಿಂದ ಬಿಡುಗಡೆಯಾದವರ ಪೈಕಿ 13 ವರ್ಷದ ಬಾಲಕ 50 ರ ಪುರುಷ ಮತ್ತು 18 ವರ್ಷದ ಯುವಕನಲ್ಲಿ ಜೂನ್ 23 ರಂದು ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಚಿಕಿತ್ಸೆಗೆ ದಾಖಲಿಸಲಾಗಿತ್ತು. 19 ವರ್ಷದ ಯುವತಿ 22 ರಂದು ದಾಖಲಾಗಿದ್ದರು. ಕೇವಲ 4-5 ದಿನಕ್ಕೆ ಚಿಕಿತ್ಸೆ ಯಶಸ್ವಿಯಾಗಿರುವುದು ಜಿಲ್ಲೆಯ ಸಾರ್ವಜನಿಕರ ಆತ್ಮ ವಿಶ್ವಾಸ ಹೆಚ್ಚಿಸಿದೆ.

ಓರ್ವ ಐಸಿಯುನಲ್ಲಿ!


ಅಂಕೋಲಾದ ಓರ್ವ ಕೊರೊನಾ ಸೋಂಕಿತನಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Leave a Reply

Your email address will not be published. Required fields are marked *