ಅಂಕೋಲಾಕ್ಕೂ ಕರೋನಾ ! ಇಂದು ಜಿಲ್ಲೆಯಲ್ಲಿ ಮುಂದುವರೆದ ಕರೋನಾ!

1849

ಕಾರವಾರ : ಕರಾವಳಿಯಲ್ಲಿ ಇಂದು ಕೂಡ ನಾಲ್ಕು ಪ್ರಕರಣಗಳು ಪತ್ತೆಯಾಗಿದೆ‌

ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ ನಾಲ್ವರು ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು
ಮಹಾರಾಷ್ಟ್ರದಿಂದ ವಾಪಸ್ಸಾದ ಮೂವರಲ್ಲಿ ಕೊರೊನಾ ದೃಢ ಪಟ್ಟಿದೆ,ದ್ವಿತೀಯ ಸಂಪರ್ಕದಿಂದ ಅಂಕೋಲಾದ ಮಹಿಳೆಗೆ ಸೋಂಕು ತಗುಲಿದೆ.

30 ವರ್ಷದ ಮಹಿಳೆಗೆ ಸೋಂಕಿತ ಸಂಖ್ಯೆ 6827 ದ್ವಿತೀಯ ಸಂಪರ್ಕ ಹೊಂದಿದ್ದಾಳೆ.ಅಂಕೋಲಾ ತಾಲ್ಲೂಕಿನಲ್ಲಿ ಇದು ಮೊದಲ ಪಾಸಿಟಿವ್ ಪ್ರಕರಣ ಇದಾಗಿದ್ದು ಕಾರವಾರದ ಮೂವರಲ್ಲಿ ಕೂಡ ಕರೋನಾ ಫಾಸಿಟಿವ್ ದೃಢಪಟ್ಟಿದೆ. ಕಾರವಾರದ
65 ವರ್ಷದ ಪುರುಷ ಸೋಂಕಿತ UK-121
52 ವರ್ಷದ ಮಹಿಳೆ ಸೋಂಕಿತೆ UK-122
64 ವರ್ಷದ ಮಹಿಳೆ ಸೋಂಕಿತೆ UK-123 ಯಾಗಿದ್ದಾರೆ‌. ಈ ಮೂಲಕ ಜಿಲ್ಲೆಯಲ್ಲಿ 124ಕ್ಕೆ ಕರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು
4 ಪ್ರಕರಣ ಸೇರಿ ಸಕ್ರಿಯ ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 93 ಆಗಿದ್ದು ಸೋಂಕಿತರಿಗೆ ಕಾರವಾರ ಕ್ರಿಮ್ಸ್‌ನ ಕೋವಿಡ್-19 ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ