BREAKING NEWS
Search

ಕಾರವಾರ -ರಾಜ್ಯದ ವಿವಿಧ ಜಿಲ್ಲೆಯಲ್ಲಿ ಜನರನ್ನು ವಂಚಿಸುತಿದ್ದ ನಕಲಿ ಐಟಿ ಅಧಿಕಾರಿ ಬಂಧನ

243

ಕಾರವಾರ :- ಐ.ಟಿ ಆಧಿಕಾರಿ ಎಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನರಿಗೆ ವಂಚಿಸಿ ದುಡ್ಡು ದೋಚುತಿದ್ದವನನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರವನಗರ ಪೊಲೀಸರು ಹಣದ ಸಮೇತ ಬಂಧಿಸಿದ್ದಾರೆ.

ಹಾವೇರಿ ಮೂಲದ ಪ್ರಶಾಂತ್ ಎಂದು ಹೇಳಿಕೊಂಡಿರುವ ವ್ಯಕ್ತಿಯೇ ಪೊಲೀಸರಿಂದ ಬಂಧನಕ್ಕೊಳಗಾದವನು.

ಈತ ಕಾರವಾರದ ವಿನೋದ್ ನಾಯ್ಕ ಎಂಬುವವರಿಗೆ ತಾನೊಬ್ಬ ಐಟಿ ಅಧಿಕಾರಿ ಪೆಪ್ಸಿ ಕಂಪನಿಯಲ್ಲಿ ಡಿಸ್ಟ್ರೂಬೂಶನ್ ಕೆಲಸ ಕೊಡಿಸುತ್ತೇನೆ 15 ಲಕ್ಷ ಕಂಪನಿಗೆ ಕಟ್ಟಬೇಕಾಗುತ್ತದೆ ಎಂದು ಹೇಳಿ ಒಂದು ಲಕ್ಷ ಹಣ ಪಡೆದು ಮೋಸ ಮಾಡುವ ಜೊತೆ ಕೊಪ್ಪಳ,ಮಂಗಳೂರು, ಉಡುಪಿ,ಮೈಸೂರು,ಹಾವೇರಿ,ಶಿವಮೊಗ್ಗ ಗಳಲ್ಲಿ ಸಹ ಜನರಿಗೆ ಸೈಟ್ ,ಡಿಸ್ಟ್ರುಬ್ಯೂಷನ್ ಕೊಡಿಸುವುದಾಗಿ ಹೇಳಿ ಮೋಸ ಮಾಡಿ ಪರಾರಿಯಾಗಿದ್ದ.

ನಕಲಿ ಐಟಿ ಅಧಿಕಾರಿ.

ಘಟನೆ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು.

ಇನ್ನು ಈತನು ಕಾರವಾರದಲ್ಲಿ ಹಲವರಿಂದ ದೋಚಿದ ಹಣವನ್ನು ಕೊಂಡೊಯ್ಯುತ್ತಿರುವ ವೇಳೆ ಕಾರವಾರ ನಗರದ ಪಿ.ಎಸ್.ಐ ಸಂತೋಷ್ ಕುಮಾರ್ ನೇತ್ರತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಈತನಿಂದ 5,95,000 ₹ನಗದು, 13,00,000 ಮೌಲ್ಯದ 327 ಗ್ರಾಂ ತೂಕದ ಚಿನ್ನದ ಆಭರಣ ಹಾಗೂ ದುಬಾರಿ ಫೋರ್ಡ ಕಾರ್ ವಶಕ್ಕೆ ಪಡೆದುಕೊಂಡಿದ್ದಾರೆ.




Leave a Reply

Your email address will not be published. Required fields are marked *