BREAKING NEWS
Search

ಕಾರವಾರ-ಸಾಗರಮಾಲ ವಿರೋಧಿ ಹೋರಾಟ ಎಂಟನೇ ದಿನಕ್ಕೆ-ಅಸ್ವಸ್ಥರಾಗಿ ಬಿದ್ದ ಪ್ರತಿಭಟನಾಗಾರ-ಹಾಸನ ರೈತರ ಬೆಂಬಲ

197

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಕಾರವಾರದ ವಾಣಿಜ್ಯ ಬಂದರನ್ನು ಎರಡನೇ ಹಂತದ ವಿಸ್ತರಣೆಗೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪ್ರತಿಭಟನಾ ನಿರತ ಮೀನುಗಾರ ಅಸ್ವಸ್ಥನಾಗಿ ಕುಸಿದು ಬಿದ್ದ ಘಟನೆ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದಿದೆ. ದಿಗಂಬರ್ ಎಂಬುವವರೇ ಅಸ್ವಸ್ಥನಾಗಿ ಕುಸಿದು ಬಿದ್ದ ಪ್ರತಿಭಟನಾ ನಿರತ ಮೀನುಗಾರನಾಗಿದ್ದು ತಕ್ಷಣ ಆತನನ್ನು ಅಂಬುಲೆನ್ಸ್ ಮೂಲಕ ಕಾರವಾರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ಎಂಟನೇ ದಿನಕ್ಕೆ ಪ್ರತಿಭಟನೆ-ಹಾಸನ ರೈತರಿಂದ ಬೆಂಬಲ!

ಕಾರವಾರದಲ್ಲಿ ಕಳೆದ ಎಂಟು ದಿನದಿಂದ ಸಾಗರ ಮಾಲಾ ಯೋಜನೆಯಲ್ಲಿ ವಾಣಿಜ್ಯ ಬಂದರಿನ ಎರಡನೇ ಹಂತದ ಕಾಮಗಾರಿ ವಿರೋಧಿಸಿ ವೀನುಗಾರರು ನಡೆಸಿತ್ತಿರುವ ಪ್ರತಿಭಟನೆಗೆ ಹಾಸನ ಜಿಲ್ಲೆಯ ರೈತ ಸಂಘದವರು ಬೆಂಬಲ ನೀಡಿ ಇಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಹೋರಾಟಕ್ಕೆ ಮತ್ತಷ್ಟು ಬೆಂಬಲ ವೆಕ್ತವಾಗಿದೆ.

ಬಂದರು ವಿಸ್ತರಣೆ ಕಾಮಗಾರಿ ಸ್ಥಗಿತ ಗೊಳಿಸುವ ವರೆಗೂ ಪ್ರತಿಭಟನೆ ಮುಂದುವರೆಸಲು ಮೀನುಗಾರರು ತೀರ್ಮಾನಿಸಿದ್ದು ಮತ್ತಷ್ಟು ತೀರ್ವತೆ ಪಡೆದುಕೊಂಡಿದೆ.




Leave a Reply

Your email address will not be published. Required fields are marked *