BREAKING NEWS
Search

ಭಟ್ಕಳದಲ್ಲಿ ಹೆಲ್ತ್ ಎಮರ್ಜನ್ಸಿ-ಜಿಲ್ಲಾಧಿಕಾರಿ ಹೇಳಿದ್ದೇನು ಗೊತ್ತಾ?

669

ಕಾರವಾರ :- ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮವಾಗಿ ಭಟ್ಕಳದಲ್ಲಿ ಹೆಲ್ ಎಮರ್ಜೆನ್ಸಿ ಘೋಷಣೆ ಮಾಡಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ ಕೆ . ಹರೀಶಕುಮಾರ್ ಹೇಳಿದ್ದಾರೆ , ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು , ಜಿಲ್ಲೆಯಾದ್ಯಂತ ಕೊರೊನಾ ವೈರಸ್ ತಡೆಯಲು ಈಗಾಗಲೇ ಸಾಕಷ್ಟು ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ .

ವಿದೇಶದಿಂದ ಹೆಚ್ಚಾಗಿ ಆಗಮಿಸಿದ ಭಟ್ಕಳದಲ್ಲಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಈಗಾಗಲೇ ಎರಡು ಪ್ರಕರಣಗಳಲ್ಲಿ ಧೃಡಪಟ್ಟಿದೆ .

ಉತ್ತರ ಕನ್ನಡ ಜಿಲ್ಲೆಯ ಕೊರೋನಾ ಸೊಂಕಿತರ ಮಾಹಿತಿ ಪಟ್ಟಿ.

ಆದರೆ ಈ ಸೋಂಕಿತರ ಸಂಪರ್ಕಕ್ಕೆ ಬಂದಂತಹ ಸುಮಾರು ೪೦ ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ . ಆದರೆ ಭಟ್ಕಳದಲ್ಲಿ ವಿದೇಶದಿಂದ ಬಂದಂತವರ ಸಂಖ್ಯೆ ಹೆಚ್ಚಾಗಿ ಇರುವ ಕಾರಣ ಭಟ್ಕಳ ಪಟ್ಟಣ ಜಾಲಿ ಹೆಬಳೆ , ಮಾವಿನಕುರ್ವ ಮುಂಡಳ್ಳಿ ಯಲವಡಿಕವೂರು ಹಾಗೂ ಮುಠಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ ತುರ್ತಾಗಿ ಹೆಲ್ ಎಮರ್ಜೆನ್ಸಿ ಘೋಷಿಸಲಾಗಿದೆ ಎಂದು ಹೇಳಿದರು .

ಈಗಿರುವ ಲಾಕ್ ಡೌನ್ ಅನ್ನು ಕೆಲವರು ಪಾಲಿಸದ ಕಾರಣ ಅಂತವರಿಂದ ಸಮುದಾಯಕ್ಕೆ ಹರಡುವ ಆತಂಕದಿಂದಾಗಿ ಹೆಲ್ ಎಮರ್ಜೆನ್ಸಿ ಘೋಷಿಸಲಾಗಿದೆ , ಈ ಅವಧಿಯಲ್ಲಿ ಯಾರೂ ಕೂಡ ಹೊರಗಡೆ ಓಡಾಡುವ ಹಾಗಿಲ್ಲ . ಜನರಿಗೆ ಅವಶ್ಯವಿರುವ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪುಸಲಾಗುವುದು , ಪೊಲೀಸರು ಭಟ್ಕಳದಲ್ಲಿ ತೀವ್ರ ನಿಗಾ ಇಡಲಿದ್ದಾರೆ ಎಂದರು.ಇನ್ನು ಕರೋನಾ ಪೀಡಿತರನ್ನು ಕಾರವಾರದ ನೇವೆಲ್ ಬೇಸ್ ನ ಪತಾಂಜಲಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಹೇಳಿಕೆ ವೀಡಿಯೋ ನೋಡಿ:-

ಜಿಲ್ಲಾಧಿಕಾರಿಯವರ ಇಂದಿನ ದಿನದ ಪತ್ರಿಕಾಗೋಷ್ಠಿ ಹೈಲೆಟ್ಸ್ :-

“ಭಟ್ಕಳದ ಜನ ಎಲ್ಲಿಯವರೆಗೂ ಬಂದ್ ಗೆ ಸ್ಪಂದಿಸುವುದಿಲ್ಲವೋ ಅಲ್ಲಿವರೆಗೂ ಹೆಲ್ತ್ ಎಮರ್ಜನ್ಸಿ ತೆಗೆಯುವುದಿಲ್ಲ.”

ಭಟ್ಕಳದಲ್ಲಿ ಇನ್ನೋರ್ವ ವ್ಯಕ್ತಿಯಲ್ಲೂ ಕರೋನಾ ವೈರೆಸ್ ಶಿವಮೊಗ್ಗ ಲ್ಯಾಬ್ ನಲ್ಲಿ ಫಾಸಿಟೀವ್ ಪತ್ತೆಯಾಗಿದೆ ಹೆಚ್ಚಿನ ದೃಡೀಕರಣಕ್ಕಾಗಿ ಪುಣೆಗೆ ಷಾಂಪಲ್ಸ್ ಕಳುಹಿಸಲಾಗಿದೆ.

ಭಟ್ಕಳ ನಗರದಾಧ್ಯಾಂತ ಕಠಿಣ ಕ್ರಮ ತೆಗೆದುಕೊಂಡಿದ್ದೇವೆ ,ಮನೆಯಿಂದ ಹೊರಬಂದವರಿಗೆ ಇನ್ನುಮುಂದೆ ಸುಮ್ಮನೆ ಬಿಡುವುದಿಲ್ಲ.

ಭಟ್ಕಳದಲ್ಲಿ ಹೈ ಅಲರ್ಟ್ .

ಜಿಲ್ಲೆಯಾಧ್ಯಾಂತ ಖಾಸಗಿ ವೈದ್ಯರು ಕಡ್ಡಾಯವಾಗಿ ಆಸ್ಪತ್ರೆ ತೆರೆಯಬೇಕು.

ಅಗತ್ಯ ವಸ್ತುಗಳ ಸತಬರಾಜು ಮಾಡುವವರಿಗೆ ಪಾಸ್ ವಿತರಣೆ ಮಾಡಲಾಗುವುದು.

ಅನಗತ್ಯ ಓಡಾಟಕ್ಕೆ ಇನ್ನುಮುಂದೆ ಕಡಿವಾಣ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ