ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಓರ್ವ ಮಹಿಳೆ ಹಾಗೂ ಪುರುಷನಿಗೆ ಕರೋನಾ ಸೊಂಕು ದೃಡಪಟ್ಟಿದೆ.
ಯಲ್ಲಾಪುರದ ಪುರುಷ ಹಾಗೂ ಹೊನ್ನಾವರದ ಮಹಿಳೆಗೆ ಸೊಂಕು ದೃಡಪಟ್ಟಿದ್ದು ಹೊನ್ನಾವರದ 34ವರ್ಷದ ಮಹಿಳೆ ಮುಂಬೈ ನಿಂದ ಗಂಡ ಹಾಗೂ ಐದು ವರ್ಷದ ಮಗುವಿನೊಂದಿಗೆ ಮೇ.15 ರಂದು ಹೊನ್ನಾವರಕ್ಕೆ ಬಂದಿದ್ದಳು. ನಿನ್ನೆ ಗಂಡನಿಗೆ ಸೊಂಕು ದೃಡವಾಗಿತ್ತು ಇಂದು ಗಂಡನಿಂದ ಹೆಂಡತಿಗೂ ಸೊಂಕು ತಗಲಿರುವುದು ದೃಡವಾಗಿದ್ದು ಮಗುವಿನ ವರದಿ ಬರಬೇಕಿದೆ.
ಇದಲ್ಲದೇ ದೆಹಲಿ ಯಿಂದ ಯಲ್ಲಾಪುರಕ್ಕೆ ಬಂದಿದ್ದ ಪುರಷನಿಗೂ ಕರೋನಾ ಸೊಂಕು ದೃಡ ಪಟ್ಟಿದ್ದು
ಉತ್ತರ ಕನ್ನಡ ಜಿಲ್ಲೆಯಲ್ಲಿ ಸಕ್ರಿಯ ಸೊಂಕು 34 ಕ್ಕೆ ಏರಿಕೆಯಾಗಿದೆ.