BREAKING NEWS
Search

‘ಕಾರವಾರ;ಪಾಳುಬಿದ್ದ ಕೈಗಾರಿಕೆ ಈಗ ವಸತಿಗೃಹ!ಹೊಸ ಕೈಗಾರಿಕೆಗೆ ಅವಕಾಶವೆಲ್ಲಿ?

218

ಕಾರವಾರ-ಸರ್ಕಾರ ಕೈಗಾರಿಕೆಗಳು ಹಾಗೂ ಸ್ಥಳೀಯ ಮಟ್ಟದಲ್ಲಿ ಜನರಿಗೆ ಉದ್ಯೋಗ ದೊರೆಯತುವ ನಿಟ್ಟಿನಲ್ಲಿ ಉದ್ಯಮಿಗಳಿಗೆ ಕಡಿಮೆ ಬೆಲೆಯಲ್ಲಿ ಕೈಗಾರಿಕಾ ವಲಯವನ್ನು ಸೃಷ್ಟಿಸಿ ಕೈಗಾರಿಕೆ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿದೆ.ಆದ್ರೆ ಕಾರವಾರದ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಾಗಿ ತೆಗೆದುಕೊಂಡ ಭೂಮಿಯಲ್ಲಿ ಮನೆ,ಅಂಗಡಿ ನಿರ್ಮಿಸಿಕೊಂಡ್ರೆ ಹಲವರು ಕೈಗಾರಿಕೆಯನ್ನೇ ಪ್ರಾರಂಭ ಮಾಡದೇ ಜಾಗವನ್ನು ಪಾಳುಬಿಟ್ಟಿದ್ದು ಹೊಸ ಉದ್ಯಮ ಪ್ರಾರಂಭಿಸುವವರಿಗೆ ಅವಕಾಶ ಸಿಗದಂತೆ ಮಾಡಿದ್ದಾರೆ.

ಕಾರವಾರದ ಶಿರವಾಡ ಎಂಬಲ್ಲಿ 22 ವರ್ಷದ ಹಿಂದೆ ಸರ್ಕಾರ ಕೈಗಾರಿಕಾ ವಲಯ ನಿರ್ಮಿಸಿದೆ.ಕೈಗಾರಿಕಾ ಉದ್ಯಮ ಸ್ಥಾಪಿಸುವವರಿಗಾಗಿ ಕಡಿಮೆ ಬೆಲೆಯಲ್ಲಿ ಭೂಮಿಸಹ ನೀಡಿತ್ತು.ಇನ್ನು ನೀಡಿದ ಭೂಮಿಯಲ್ಲಿ ಹಲವರು ಉದ್ಯಮ ಪ್ರಾರಂಭ ಮಾಡಿದ್ರೆ,ಇನ್ನು 50 ಕ್ಕೂ ಹೆಚ್ಚು ಕೈಗಾರಿಕಾ ಉದ್ಯಮಗಳು ಪ್ರಾರಂಭವಾಗಿ ಕೆಲವು ದಿನಗಳಲ್ಲಿಯೇ ಬಾಗಿಲು ಮುಚ್ಚಿವೆ.
ಹೀಗೆ ಬಾಗಿಲು ಮುಚ್ಚಿದ ಉದ್ಯಮಗಳು ಈವರೆಗೂ ಬಾಗಿಲು ತೆರೆದಿಲ್ಲ. ಇನ್ನು ಕೈಗಾರಿಕಾ ಪ್ರದೇಶಗಳಿಗಾಗಿ ನೀಡಿದ ಪ್ರದೇಶದಲ್ಲಿ ಮನೆಗಳು ನಿರ್ಮಾಣವಾದ್ರೆ ಕೆಲವು ಭಾಗದಲ್ಲಿ ಅಂಗಡಿ ಮುಂಗಟ್ಟುಗಳನ್ನು ನಿರ್ಮಿಸಿಕೊಂಡಿದ್ದಾರೆ. ಇನ್ನು ಕೆಲವರು ಸಿಕ್ಕ ಜಾಗವನ್ನು ತಮ್ಮದಾಗಿಸಿಕೊಂಡು ಪಾಳು ಬೀಳುವಂತೆ ಮಾಡಿದ್ದಾರೆ. ಹೀಗಾಗಿ ಈ ಕೈಗಾರಿಕಾ ಪ್ರದೇಶವೀಗ ಹಾಳು ಬಿದ್ದಿದ್ದು ಇಡೀ ಪ್ರದೇಶದಲ್ಲಿ ಗಿಡಗೆಂಟೆಗಳು ಬೆಳೆದು ನಿಂತಿದ್ದು ಕೈಗಾರಿಕಾ ಪ್ರದೇಶವೇ ಎಂಬ ಪ್ರಶ್ನೆ ಮೂಡುವಂತಾಗಿದೆ.

ಪ್ರತಿ ದಿನ ಉದ್ಯೋಗಕ್ಕಾಗಿ ಕಾರವಾರದಿಂದ ನೂರಾರು ಜನ ಗೋವಾಕ್ಕೆ ತೆರಳುತಿದ್ದಾರೆ. ಬಹುತೇಕ ಕಾರವಾರದ ಉದ್ಯೋಗ ಆಕಾಂಕ್ಷಿಗಳು ನೆರೆಯ ಗೋವಾವನ್ನೇ ನೆಚ್ಚಿಕೊಂಡಿದ್ದಾರೆ.ನಮ್ಮಲ್ಲಿ ಪ್ರವಾಸೋಧ್ಯಮ,ಇಂಡ್ರಸ್ಟ್ರಿ ಗಳ ವಿಫುಲ ಅವಕಾಶವಿದ್ದರೂ ಈ ಭಾಗದ ಜನಕ್ಕೆ ಸ್ಥಳೀಯವಾಗಿ ಉದ್ಯೋಗ ಸಿಗದಂತಾಗಿದೆ.
ಇನ್ನು ಹೊಸದಾಗಿ ಕೈಗಾರಿಕೆ ನಿರ್ಮಾಣ ಮಾಡುತ್ತೇವೆ ಎನ್ನುವ ಉದ್ಯಮಿಗಳಿಗೆ ಕೈಗಾರಿಕಾ ಪ್ರದೇಶದಲ್ಲಿ ಸ್ಥಳವೇ ಸಿಗುತ್ತಿಲ್ಲ. ಎಲ್ಲವೂ ಈಗಾಗಲೇ ಪಟಭದ್ದ ಹಿತಾಸಕ್ತಿ ಜನರ ಪಾಲಾಗಿದೆ.
ಕೈಗಾರಿಕಾ ಪ್ರದೇಶದಲ್ಲಿ ಸ್ಥಳವನ್ನು ಲೀಸಿಗೆ ತೆಗೆದುಕೊಂಡು ಉದ್ಯಮಿಗಳು ಹೆಸರಿಗಷ್ಟೆ ಉದ್ಯಮವಿದ್ದು ಯಾವುದೂ ಕಾರ್ಯ ನಿರ್ವಹಿಸುತಿಲ್ಲ.ಇನ್ನು ಹೊಸದಾಗಿ ಪ್ರಾರಂಭಿಸಬೇಕು ಎನ್ನುವವರು ಮಾತ್ರ ಜಾಗ ಸಿಗದೇ ಬೇರೆಡೆ ತೆರಳವಂತಾಗಿದ್ದು ಸ್ಥಳೀಯ ಜನರಿಗೆ ಉದ್ಯೋಗ ಸಿಗದಂತಾಗಿದೆ.

ಬಾಗಿಲು ಮುಚ್ಚಿದ ಕೈಗಾರಿಕೆಗಳು
ಕೈಗಾರಿಕಾ ಪ್ರದೇಶದಲ್ಲಿ ತಲೆ ಎತ್ತಿ ನಿಂತ ವಸತಿ ನಿಲಯಗಳು

ಯಾರ ಹೆಸರಿಗೆ ಲೀಸ್ ನಲ್ಲಿ ಇದೆಯೋ ಅವರೇ ಆ ಜಾಗವನ್ನು ಲೀಸಿಗೆ ಕೊಡಬೇಕು!

ಈ ಪ್ರದೇಶದಲ್ಲಿ ಹೊಸದಾಗಿ ಕೈಗಾರಿಕೆ ನಿರ್ಮಾಣ ಮಾಡುವವರಿಗೆ ಸ್ಥಳಾವಕಾಶ ಸಿಗುತ್ತಿಲ್ಲ.ಈ ಗಾಗಲೇ ಲೀಸ್ ಗೆ ಪಡೆದುಕೊಂಡವರು ಕೈಗಾರಿಕೆ ನಡೆಸುತಿಲ್ಲ.ಇನ್ನು ಹೊಸದಾಗಿ ಪ್ರಾರಂಭಿಸುವವರಿಗೆ ಇವರ ಬಳಿಯೇ ಸ್ಥಳವನ್ನು ಲೀಸಿಗೆ ಪಡೆಯಬೇಕು. ಒಂದುವೇಳೆ ಲೀಸ್ ಗೆ ಪಡೆಯಬೇಕೆಂದರೇ ಕೋಟಿಗಟ್ಟಲೇ ಹಣ ಕೇಳುತ್ತಾರೆ ಮೊದಲು ಲೀಸಿಗೆ ಪಡೆದ ಸ್ಥಳದ ಮಾಲೀಕರು.
ಹೀಗಾಗಿ ಈ ಭಾಗದಲ್ಲಿ ಹೊಸ ಉದ್ಯಮಗಳು ತಲೆಎತ್ತಲು ದೊಡ್ಡ ಸಮಸ್ಯೆಯಾಗಿದೆ.
ಇನ್ನು ಕೈಗಾರಿಕಾ ಪ್ರದೇಶದ ಬಹುತೇಕ ಭಾಗದಲ್ಲಿ ವಸತಿ ನಿಲಯಗಳು ತಲೆಯತ್ತಿದ್ದು ಉದ್ಯಮಕ್ಕೆ ಮೀಸಲಿರುವ ಜಾಗ ಈಗ ವಸತಿ ನಿಲಯವಾಗಿ ಮಾರ್ಮಟ್ಟಿದೆ.

ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗಿರುವ ಮನೆಗಳು.

ಇನ್ನು ಕಾರವಾರದಲ್ಲಿ ಕೈಗಾರಿಕಾ ವಲಯ ಸ್ಥಾಪನೆ ಮಾಡಿದಾಗ ಶಿರವಾಡ ಗ್ರಾಮ ಅಷ್ಟೋಂದು ಬೆಳೆದಿರಲಿಲ್ಲ. ಆದರೆ ಸದ್ಯ ನಗರಮಟ್ಟದದಲ್ಲಿಯೇ ಗ್ರಾಮ ಬೆಳೆದಿದ್ದು ಗ್ರಾಮದಲ್ಲಿನ ಭೂಮಿಗೂ ಸಾಕಷ್ಟು ಬೆಲೆ ಇದೆ. ಈ ನಿಟ್ಟಿನಲ್ಲಿ ಕೈಗಾರಿಕೆ ಪ್ರಾರಂಭಿಸಲು ಜಾಗವನ್ನ ಪಡೆದವರು ಕೈಗಾರಿಕೆ ನಡೆಸದೇ ಜಾಗವನ್ನು ತಮ್ಮದಾಗಿಸಿಕೊಂಡು ಬೇರೆಯವರಿಗೂ ಅವಕಾಶ ಸಿಗದಂತೆ ಮಾಡಿದ್ದು ಇಡೀ ಕೈಗಾರಿಕಾ ಪ್ರದೇಶ ಹಾಳು ಬೀಳುವಂತೆ ಮಾಡಿದ್ದಾರೆ.

ಇನ್ನು ಈ ಬಗ್ಗೆ ಕೈಗಾರಿಕಾ ಇಲಾಖೆ ಅಧಿಕಾರಿಗಳಿಗೆ ಕೇಳಿದರೆ ಕೈಗಾರಿಕಾ ವಲಯದಲ್ಲಿ ಸದ್ಯ 14 ಕೈಗಾರಿಕೆಗಳು ಬಂದ್ ಆಗಿದ್ದು ಜಾಗವನ್ನ ಅವರ ಹೆಸರಿಗೆ ಕೊಟ್ಟ ನಂತರ ನಮ್ಮ ಇಲಾಖೆ ಹಸ್ತಕ್ಷೇಪ ಬರುವುದಿಲ್ಲ. ಸದ್ಯ ಅವರ ಹೆಸರಿನಲ್ಲಿಯೇ ಕೈಗಾರಿಕಾ ವಲಯದಲ್ಲಿ ಜಾಗ ಇರೋದ್ರಿಂದ ಅವರೇ ಆ ಜಾಗದಲ್ಲಿ ಬೇರೆಯವರಿಗೆ ಕೈಗಾರಿಕೆ ಸ್ಥಾಪಿಸಲು ಕೊಡುವ ಕಾರ್ಯವನ್ನ ಮಾಡಬೇಕು ಎಂದು ಕೈಚಲ್ಲಿ ಕುಳಿತಿದ್ದಾರೆ.

ದನಂಜಯ ಹೆಗಡೆ.ಸಹಾಯಕ ನಿರ್ದೇಶಕರು. ಕೈಗಾರಿಕಾ ಇಲಾಖೆ.ಉತ್ತರ ಕನ್ನಡ.

ಕೈಗಾರಿಕಾ ವಲಯದಲ್ಲಿ ಭೂಮಿ ಪಡೆದ ಕೆಲವರು ತಮ್ಮ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರೆ ಇನ್ನೂ ಕೆಲವರು ಅಂಗಡಿಗಳನ್ನ ಹಾಕುವ ಮೂಲಕ ಜಾಗವನ್ನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆನ್ನುವ ದೂರ ಸ್ಥಳೀಯರದ್ದು. ಆದರೆ ಕೈಗಾರಿಕೆ ಸ್ಥಳದಲ್ಲಿ ಕಾರ್ಮಿಕರಿಗೆ ವಸತಿ ಗೃಹ ಎಂದು ಕಟ್ಟಿಕೊಂಡರೇ ನಾವೇನು ಮಾಡಲು ಸಾಧ್ಯವಿಲ್ಲ ಅನ್ನುವುದು ಅಧಿಕಾರಿಗಳ ಮಾತು. ಅಲ್ಲದೇ ಕೈಗಾರಿಕಾ ವಲಯ ಪ್ರಾರಂಭ ಮಾಡುವಾಗ ಮಾತ್ರ ಅಧಿಕಾರಿಗಳು ಆಸಕ್ತಿ ವಹಿಸಿದ್ದರು. ಈಗ ಯಾರೊಬ್ಬರು ಕೈಗಾರಿಕಾ ವಲಯದ ಅಭಿವೃದ್ದಿ ಬಗ್ಗೆ ತಲೆ ಕೆಡೆಸಿಕೊಳ್ಳುತ್ತಿಲ್ಲ ಅನ್ನುವುದು ಸ್ಥಳೀಯರ ಆರೋಪ. ಒಟ್ಟಿನಲ್ಲಿ ಸರ್ಕಾರ ಕೈಗಾರಿಕೆಗಳು ಬೆಳೆದು ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಯಾಗಲಿ ಎಂದು ಮಾಡಿದ ಕೈಗಾರಿಕಾ ವಲಯ ಕೈಗಾರಿಕೆಗಳು ಪ್ರಾರಂಭವಿಲ್ಲದೇ ಪಾಳು ಬಿದ್ದಂತಾಗಿರುವುದು ನಿಜಕ್ಕೂ ದುರಂತವಾಗಿದೆ.

ಕೈಗಾರಿಕಾ ಪ್ರದೇಶ.

ಕಾರವಾರ ನಗರ ಬೆಳೆಯುತಿದ್ದು ಅಭಿವೃದ್ಧಿಯತ್ತ ಹೆಜ್ಜೆ ಇಡುತ್ತಿದೆ. ಈ ಬಗ್ಗೆ ಅಧಿಕಾರಿಗಳು ಇನ್ನಾದರು ಎಚ್ಚೆತ್ತುಕೊಂಡು ಬಂದ್ ಆಗಿರುವ ಕೈಗಾರಿಕಾ ಜಾಗದಲ್ಲಿ ಹೊಸ ಕೈಗಾರಿಕೆಗಳಿಗೆ ಅವಕಾಶ ಮಾಡಿಕೊಡುವ ಮೂಲಕ ಉದ್ಯೋಗ ಸೃಷ್ಠಿಮಾಡುವಂತಾಗಲಿ ಎನ್ನುವುದು ಕಾರವಾರ ಜನರ ಹೆಬ್ಬಯಕೆಯಾಗಿದ್ದು ಇದು ಈಡೇರುವುದೇ ಎಂಬುದನ್ನು ಕಾದುನೋಡಬೇಕಿದೆ.
Leave a Reply

Your email address will not be published. Required fields are marked *