BREAKING NEWS
Search

ಮಂಗಳೂರು:ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ್ ಆತ್ಮಹತ್ಯೆ!?

1924

ಮಂಗಳೂರು:- ಮಾಜಿ ಸಿಎಂ ಎಸ್ಸೆಂ ಕೃಷ್ಣ ಅಳಿಯ, ಉದ್ಯಮಿ ವಿ.ಜಿ. ಸಿದ್ಧಾರ್ಥ ನಾಪತ್ತೆಯಾಗಿದ್ದಾರೆ.
ಮಂಗಳೂರಿನ ಉಳ್ಳಾಲದ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿರುವುದನ್ನು ಪೂಲೀಸರು ದೃಡಪಡಿಸಿದ್ದಾರೆ.

ಎಸ್.ಎಂ ಕೃಷ್ಣ ಅಳಿಯರಿದ್ದ ಕಾರು

ರಾತ್ರಿ 9 ಗಂಟೆ ಸುಮಾರಿಗೆ ಚಾಲಕನಲ್ಲಿ ಕಾರು ನಿಲ್ಲಿಸಲು ಹೇಳಿ ಸೇತುವೆಯ ಬಳಿ ನಡೆದುಕೊಂಡು ಹೋಗಿದ್ದ ಸಿದ್ದಾರ್ಥರವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರಿಂದ ಹುಡುಕಾಟ ನಡೆಸಲಾಗುತ್ತಿದೆ.

ಭಾರತದ ಅತಿದೊಡ್ಡ ಕಾಫಿ ರಫ್ತುಉದ್ಯಮಿಯಾಗಿರುವ ವಿ.ಜಿ. ಸಿದ್ಧಾರ್ಥ ಚಿಕ್ಕಮಗಳೂರಿನಲ್ಲಿ 12 ಸಾವಿರ ಎಕ್ರೆ ಕಾಫಿ ಎಸ್ಟೇಟ್ ಹೊಂದಿರುವ ಉದ್ಯಮಿಯಾಗಿದ್ದು
ದೇಶ- ವಿದೇಶದಲ್ಲಿ ಕೆಫೆ ಕಾಫಿ ಡೇ ಸ್ಥಾಪಿಸಿ, ಹೆಸರು ಗಳಿಸಿದ್ದರು.

ಸಿದ್ಧಾರ್ಥ್

ಮಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪೆನಿಗಳಿಗೆ ಹೂಡಿಕೆ ಮಾಡಿದ್ದ ಇವರುಷೇರು ಉದ್ಯಮ, ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು.

ಯಾವುದೂ ವಿಷಯವನ್ನು ಮನಸ್ಸಿಗೆ ಹಚ್ಚಿ ಕೊಂಡಿದ್ದ ಇವರು ರಾತ್ರಿ ಒಂಬತ್ತು ಘಂಟೆ ವೇಳೆಗೆ ತಮ್ಮ ಕಾರಿನಲ್ಲಿ ನೇತ್ರಾವತಿ ನದಿ ಸೇತುವೆ ಬಳಿ ಬಂದು ಕಾರುಚಾಲಕನಿಗೆ ಅಲ್ಲಿಯೇ ಇರಲು ಹೇಳಿ ತೆರಳಿದ್ದಾರೆ. ಈ ವೇಳೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ಪೂಲಿಸ್ ಮೂಲಗಳು ಹೇಳುತಿದ್ದು ಅವರ ಹುಡುಕಾಟ ಸಾಗಿದ್ದು ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.




Leave a Reply

Your email address will not be published. Required fields are marked *