BREAKING NEWS
Search

ಆಗಸ್ಟ್ 1 ವಿಶ್ವ ಕುಂದಾಪ್ರ ದಿನ ಆಚರಣೆ:ಗ್ರಾಮೀಣ ಭಾಗದ ಆಡು ಭಾಷೆಗೊಂದು ಹಬ್ಬ!

226

ಉಡುಪಿ:- ಕರ್ನಾಟಕದಲ್ಲಿ ಅನೇಕ‌ ಗ್ರಾಮೀಣ ಭಾಗದಲ್ಲಿ ಅವರದ್ದೇಯಾದ ಆಡುಭಾಷೆಯಿದೆ .

ಅದೇ ರೀತಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು ಆರು ತಾಲೂಕುಗಳಿವೆ ಅದರಲ್ಲಿ ಮೂರು‌ ತಾಲೂಕುಗಳಲ್ಲಿ ಕುಂದಾಪುರದ ಆರೇ ಬಾಷೆಯನ್ನು ಮಾತನಾಡುತ್ತಾರೆ ಅದುವೇ ಕುಂದಾಪುರ ಕನ್ನಡ.

ಸಾವಿರ ವರ್ಷಗಳ ಕಾಲದ ಇತಿಹಾಸವಿದ್ದ ಈ‌ ಭಾಷೆ ಈಗ ಸಾಮಾಜೀಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ,ಒಂದಿಷ್ಟು ಕುಂದಾಪುರದ ಸಾಂಸ್ಕೃತಿಕ ಐತಿಹಾಸಿಕ ವಿಚಾರಗಳನ್ನು ತಮ್ಮ ಸಾಮಾಜೀಕ ಜಾಲತಾಣಗಳಲ್ಲಿ ಪಸರಿಸುತ್ತ ಬಾಷೆಯ ಹೆಮ್ಮೆಯನ್ನು ತಿಳಿಹೇಳುತ್ತಿರು ಯುವಕರ ತಂಡ ಈ ವಿಶ್ವ ಕುಂದಾಪುರ ದಿನಾಚರಣೆಯನ್ನು ಆಗಸ್ಟ್ ಒಂದಕ್ಕೆ ಮಾರಸ್ವಾಮಿ ಚಾತ್ರೆಯ ಕರ್ಕಾಟಕ ಅಮವಾಸ್ಯೆ ದಿನದಂದು ಆಚರಿಸಲು ನಿರ್ಧರಿಸಿದರು.

ಇದಕ್ಕೆ ಸಾಮಾಜೀಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ದೂರಕ್ಕಿದ್ದು ದೇಶ ವಿದೇಶಗಳಲ್ಲಿ ಕುಂದಾಪುರ ಜನತೆಗಳಲ್ಲಿ ಹಬ್ಬದ ವಾತವರಣ ಸೃಷ್ಟಿಯಾಗಿದೆ.

ಕುಂದಾಪುರ ಕನ್ನಡ ಹಾಸ್ಯಮಯವಾಗಿ ಸಿನಿಮಾ ಧಾರವಾಹಿ ನಾಟಕಗಳಲ್ಲಿ ಬಳಸಿಕೋಳ್ಳುತ್ತಿದ್ದು ಇಂದು ರಿಯಾಲಿಟಿ ಶೋಗಳಲ್ಲಿ ಕುಂದಾಪುರ ಕನ್ನಡ ಮಿಂಚುತ್ತಿದೆ.

ಈ ಹಿನ್ನೆಲೆಯಲ್ಲಿ ವಿಶೇಷವಾಗಿ ವಿಶ್ವ ಕುಂದಾಪ್ರ ದಿನ ಆಚರಿಸಲಾಗುತ್ತಿದೆ.

ಸಂದೇಶ್ ಶೆಟ್ಟಿ ಆಜ್ರಿ ನಟ ನಿರ್ದೇಶಕ ಪತ್ರಕರ್ತ

ಕುಂದಾಪುರದ ನೆಲದಲ್ಲಿ ಹುಟ್ಟಿದ ನಾನು ಮಾತೃ ಭಾಷೆಯ ಕಲಾವಿದರ ಅನೇಕ ಅಭಿವೃದ್ಧಿ ಕೆಲಸಗಳು ಮಾಡಬೇಕು ಅನ್ನುವ ಆಸೆಯಿದೆ ಅದು ಮುಂದಿನ ದಿನಗಳಲ್ಲಿ ನನ್ನ ಸಿನಿಮಾ ಜರ್ನಿಯ ಜೊತೆಗೆ ಮಾಡುತ್ತೇನೆ ಭಾಷೆಯಲ್ಲಿರುವ ಕಲೆಯನ್ನು ಮೊದಲು ಬೆಳೆಸಿದರೆ ಆ ಕಲೆಯ ಮೂಲಕ ದೇಶದ ಎಲ್ಲೆಡೆ ನಮ್ಮ ಬಾಷೆಯ ಕಂಪು ಮೂಡಲು ಸಾಧ್ಯ.

ಉಪೇಂದ್ರ ,ನಟ ನಿರ್ದೇಶಕ

ಕರ್ನಾಟಕಕ್ಕೆ ಕನ್ನಡ ಭಾಷೆ ತಾಯಿ ತಂದೆಯಾದ್ರೆ ಅನೇಕ ಗ್ರಾಮೀಣ ಭಾಷೆಗಳು ಇವೆ ಅಂತಹ ಭಾಷೆಯಲ್ಲಿ ಕುಂದಾಪುರ ಕನ್ನಡ ಒಂದು ಈಗ ಈ ಭಾಷೆಯ ವಿಶ್ವ ದಿನಾಚರಣೆಯಿಂದ ಗ್ರಾಮೀಣ ಭಾಗದ ಭಾಷೆಯ ಸುಗಂಧ ದೇಶದ ಮೂಲೆ ಮೂಲೆಗಳಲ್ಲಿ ಹರಿದಾಡುತ್ತಾದೆ

ರಾಜು ಕೋಠಾರಿ ,ನಿರ್ದೇಶಕ ನಿರ್ಮಾಪಕ ರಾಷ್ಟ್ರಪ್ರಶಸ್ತಿ ವಿಜೇತ

ಕುಂದಾಪುರ ಬಾಷೆಯ ಜೊತೆಗೆ ಒಂದು ವಿಶೇಷವಾದ ಬದುಕು ಇದೆ ಆ ಬದುಕಿನ ಆಶಾದಾಯಕ ಪದಗಳು ಈ ಭಾಷೆ ಮತ್ತು ಗಾದೆಮಾತುಗಳಲ್ಲಿ ಇವೆ ಜಯವಾಗಲಿ ವಿಶ್ವ ಕುರ ದಿನಕ್ಕೆ
Leave a Reply

Your email address will not be published. Required fields are marked *