BREAKING NEWS
Search

ಚಿಗುರೊಡೆದ ತಾಳುಗುಪ್ಪ ಸಿದ್ದಾಪುರ ರೈಲು ಮಾರ್ಗ:ಕಾಗೇರಿ ಇಂದ ರೈಲ್ವೆ ಸಚಿವರ ಭೇಟಿ!

584

ನವ ದೆಹಲಿ:- ಇಂದು ವಿಧಾನಸಭಾ ಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ದೆಹಲಿಯ ರೈಲ್ವೇ ಭವನದಲ್ಲಿ ರೈಲ್ವೇ ಸಚಿವರಾದ ಶ್ರೀ ಸುರೇಶ ಅಂಗಡಿಯವರನ್ನು ಭೇಟಿ ಮಾಡಿದರು.

ಉತ್ತರ ಕನ್ನಡ ಶಿವಮೊಗ್ಗ ಜಿಲ್ಲೆಯ ತಾಳಗುಪ್ಪಾ – ಸಿದ್ದಾಪುರ ಹಾಗೂ ಅಂಕೋಲಾ – ಹುಬ್ಬಳ್ಳಿ ರೈಲು ಮಾರ್ಗವಿಸ್ತರಣೆಗೆ ರೈಲ್ವೇಲೈನ್ ಮಂಜೂರಾತಿ ನೀಡುವ ಕುರಿತು ಚರ್ಚಿಸಿದರು.

ಈ ಹಿಂದೆ ಕೂಡ ಈ ಕುರಿತು ಸಂಸದ ಅನಂತಕುಮಾರ್ ಹೆಗಡೆ ಹಿಂದಿನ ರೈಲ್ವೆ ಸಚಿವರಲ್ಲಿ ಚರ್ಚಿಸಿದ್ದರು‌.
ಇದಲ್ಲದೇ ಪರಿಸರಕ್ಕೆ ಹಾನಿ ಹಾಗೂ ಅಪಾರ ಪ್ರಮಾಣದ ಕಾಡು ನಾಶ ವಾಗುವ ಕುರಿತು ಅನುಮೋದನೆಗೆ ಅಡ್ಡಿಯಾಗಿತ್ತು.

ಜಿಲ್ಲೆಗೆ ಈ ರೈಲು ಮಾರ್ಗದಿಂದ ಆಗುವ ಅನುಕೂಲದ ಕುರಿತು ಸಭಾಧ್ಯಕ್ಷರು ಮನವರಿಕೆ ಮಾಡಿಕೊಟ್ಡಿದ್ದು

ಈ ಬಗ್ಗೆ ರೈಲ್ವೇ ಸಚಿವ ಶ್ರೀ ಸುರೇಶ ಅಂಗಡಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ರೈಲ್ವೇ ಮಾರ್ಗಗಳ ವಿಸ್ತರಣೆಯನ್ನು ಅನುಷ್ಟಾನಗೊಳಿಸಲು ಇರುವ ತೋಂದರೆಗಳನ್ನು ಮುಂದಿನ ದಿನಗಳಲ್ಲಿ ಬಗಹರಿಸಲು ಪ್ರಯತ್ನಿಸುವುದಾಗಿ ಭರವಸೆಯನ್ನು ರೈಲ್ವೆ ಸಚಿವರು ನೀಡಿದ್ದಾರೆ. ಈ ಸಂದರ್ಭದಲ್ಲಿ ಸಂಬಂಧಿಸಿದ ರೈಲ್ವೇ ಅಧಿಕಾರಿಗಳು ಉಪಸ್ಥತರಿದ್ದರು.
Leave a Reply

Your email address will not be published. Required fields are marked *