ಹೊನ್ನಾವರದಲ್ಲಿ ಮೀನುಗಾರರು ರಕ್ಷಿಸಿದ 200 ಆಮೆಗಳು ಕಡಲಿಗೆ|ವಿಡಿಯೋ ನೋಡಿ.

859

ಕಾರವಾರ :- ಹೊನ್ನಾವರದ ಕಾಸರಕೋಡು ಟೊಂಕಾ ಕಡಲತೀರದಲ್ಲಿ ಸುಮಾರು 45 ದಿನಗಳ‌ ಹಿಂದೆ ಪತ್ತೆಯಾಗಿದ್ದ ವಿಶೇಷ ಆಮೆಯ ಮೊಟ್ಟೆಗಳಿಂದ ಇದೀಗ ಸುಮಾರು 200 ಆಮೆ ಮರಿಗಳು ಹೊರಬಂದಿದ್ದು, ಅವುಗಳನ್ನು ಸುರಕ್ಷಿತವಾಗಿ ಭಾನುವಾರ ದಂದು ಮತ್ತೆ ಕಡಲಿಗೆ ಬಿಡಲಾಯಿತು.

ಅಳಿವಿನಂಚಿನಲ್ಲಿರುವ “ಆಲಿವ್ ರೆಡ್ಲಿ” ಜಾತಿಗೆ ಸೇರಿರುವ ಕಡಲಾಮೆ ಮರಿಗಳು ಇವುಗಳಾಗಿದ್ದು, ಕಳೆದ 45 ದಿನಗಳಿಂದ ಮೀನುಗಾರರಾದ ರಮೇಶ, ನರಸಿಂಹ, ಭಾಸ್ಕರ, ಚಂದ್ರ, ಗಣಪತಿ, ವಿನಾಯಕ ಹಾಗೂ ರಾಜು ಅವರು ಮೊಟ್ಟೆಗಳನ್ನು ನೋಡಿಕೊಂಡಿದ್ದರು.‌

ಹೊನ್ನಾವರದ ಕಡಲಾಮೆ ಜೀವನ ಚಕ್ರ.
ರಾಜ್ಯ ಜೀವವೈವಿಧ್ಯತಾ ಮಂಡಳಿಯ ಸದಸ್ಯ ಡಾ. ಪ್ರಾಕಾಶ ಮೇಸ್ತ ರವರು ಮಾಹಿತಿ ನೀಡಿದ ಹಾಗೂ ಆಮೆಗಳ ವಿಡಿಯೋ ನೋಡಿ:-

ಆದರೆ, ಶನಿವಾರ ರಾತ್ರಿ ಸುಮಾರು 3 ಗಂಟೆಯ ವೇಳೆ ಮೊಟ್ಟೆಗಳಿಂದ ಮರಿಗಳು ಬಂದಿದ್ದು, ಅವುಗಳನ್ನು ಅರಣ್ಯಾಧಿಕಾರಿಗಳಿಗೆ ತಿಳಿಸಲಾಗಿತ್ತು. ಇಂದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ, ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿಯ ಸದಸ್ಯ ಡಾ. ಪ್ರಕಾಶ್ ಮೇಸ್ತ, ಉತ್ತರ ಕನ್ನಡ ಜಿಲ್ಲಾ ಮೀನುಗಾರಿಕಾ ಫೇಡರೇಸನ್ ಅಧ್ಯಕ್ಷರಾದ ರಾಜು ತಾಂಡೇಲ್, ಕಾರವಾರ ಕಡಲ ಜೀವ ಶಾಸ್ತ್ರದ ಸ್ನಾತಕೊತ್ತರ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಇತರರು ಆಗಮಿಸಿದ್ದರು. ಅಲ್ಲದೇ, ಹೆಚ್ಚಿನ ಪ್ರಮಾಣದಲ್ಲಿ ಸ್ಥಳೀಯ ಮೀನುಗಾರ ಮಕ್ಕಳು ಹಾಗೂ ಮಹಿಳೆಯರು ಪಾಲ್ಗೊಂಡು ಕಡಲಾಮೆ ಮರಿಗಳನ್ನು ಕಡಲಿಗೆ ಬಿಟ್ಟರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ