BREAKING NEWS
Search

ಉತ್ತರ ಕನ್ನಡ ಪ್ರವಾಹ ಪೀಡಿತ ಪ್ರದೇಶಕ್ಕೆ ಹೆಚ್.ಕೆ ಪಾಟೀಲ್ ಭೇಟಿ!

259

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಅಧ್ಯಯನಕ್ಕೆ ಐದುಜನರಿಂದ ಕೂಡಿದ ಕೆ.ಪಿ.ಸಿಸಿ ತಂಡ ಭೇಟಿ ನೀಡುತಿದ್ದು ಇಂದು ಸಂಜೆ ಮುಂಡಗೋಡಿನ ಚಿಗಳ್ಳಿ ಹಾಗೂ ಶಿರಸಿ ಭಾಗಕ್ಕೆ ಈ ತಂಡದ ಹಿರಿಯ ಮಾಜಿ ಜಲಸಂಪನ್ಮೂಲ ಸಚಿವ ಹೆಚ್.ಕೆ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಂಡದಲ್ಲಿ ಸತೀಶ್ ಜಾರಕಿಹೊಳಿ,ಹೆಚ್.ಕೆ ಪಾಟೀಲ್ ,ಉಮಾಶ್ರೀ ,ಆರ್.ವಿ ತಿಮ್ಮಾಪುರ,ಸನದಿ ಸೇರಿದಂತೆ ಐದು ಜನರ ತಂಡ ಇದಾಗಿದ್ದು ಜಿಲ್ಲೆಯ ಹಳಿಯಾಳ,ಶಿರಸಿ,ಮುಂಡಗೋಡುಗಳಿಗೆ ಪ್ರತ್ತೇಕವಾಗಿ ಭೇಟಿ ನೀಡಿದ್ದಾರೆ.

ಮುಂಡಗೋಡಿನ ಚಿಗಳ್ಳಿಯಲ್ಲಿರುವ ಶಿಥಿಲಗೊಂಡ ಚಕ್ ಡ್ಯಾಮ್ ಗೆ ಮಾಜಿ ಜಲಸಂಪನ್ಮೂಲ ಸಚಿವ ಹೆಚ್.ಕೆ ಪಾಟೀಲ್ ಭೇಟಿ ನೀಡಿ ನಂತರ ಪ್ರವಾಹದಿಂದ ಕೃಷಿ ಭೂಮಿ ಯಲ್ಲಿ ನಷ್ಟ ಗೊಂಡ ಸಂತ್ರಸ್ಥ ರೈತರನ್ನು ಭೇಟಿಯಾಗಿ ಸಾಂತ್ವನ ಹೆಳಿದರು.

ನಂತರ ಶಿರಸಿಯಲ್ಲಿನ ಸಾಂಬ್ರಾಟ್ ಹೋಟಲ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಮಾಜಿ ಜಲಸಂಪನ್ಮೂಲ ಸಚಿವ ಹೆಚ್.ಕೆ.ಪಾಟೀಲ್ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು,
ಕೇಂದ್ರ ಸಚಿವ ಅಮಿತ್ ಶಾ ವೈವಾನಿಕ ಸಮೀಕ್ಷೆ ನಡೆಸಿದ್ದು ಆದರೇ ಬಹಳ ನಿರೀಕ್ಷೆ ಇಟ್ಟುಕೊಂಡ ಜನತೆಗೆ ಏನು ಭರವಸೆ ನೀಡದೆ ಹೋಗಿರುವುದು ನಿರಾಸೆ ತಂದಿದೆ. ನಿರಾಶ್ರಿತರಿಗೆ ಬದುಕು ಕಟ್ಟಿಕೊಡುವ ಕೆಲಸ ಆಗಬೇಕಿದೆ. ಈಗ ಸಹಾಯ ಮಾಡುವುದಕ್ಕಿಂತ ಅವರು ಪುನಹ ತಮ್ಮ ಸ್ಥಳಕ್ಕೆ ಹೋದಾಗ ಅವರು ಜೀವನ ನಡೆಸುವಂತಾಗಬೇಕು ಪ್ರದಾನ ಮಂತ್ರಿ ಈಗಲಾದರೂ ಬರಬೇಕು. ಇಲ್ಲದಿದ್ದರೇ ಜವಾಬ್ದಾರಿಯಿಂದ ಕಳಚಿಕೊಂಡಂತೆ ಎಂದು ಹೆಚ್ ಕೆ ಪಾಟೀಲ್ ಬೇಸರ ವ್ಯಕ್ತಪಡಿಸಿದರು.
Leave a Reply

Your email address will not be published. Required fields are marked *