BREAKING NEWS
Search

ಹೆಬ್ಬಾರ್ ಹನಿಟ್ರ್ಯಾಪ್! ಸತ್ಯ ಮಿತ್ಯವೇನು?

1617

ಕಾರವಾರ:- ಇಂದು ಚುನಾವಣೆ ಬಹಿರಂಗ ಸಭೆಗೆ ವಿರಾಮ ಬಿದ್ದಿದೆ. ಅಷ್ಟರಲ್ಲಾಗಲೇ ಇಡೀ ಯಲ್ಲಾಪುರದಲ್ಲಿ ಬೆಳಗ್ಗೆ ಇಂದ ಜನರ ಬಾಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಹನಿಟ್ರ್ಯಾಪ್ ಗೆ ಒಳಗಾಗಿದ್ದಾರೆ ಎನ್ನುವ ಸುದ್ದಿ ಪ್ರತಿಷ್ಠಿತ ವಾರ ಪತ್ರಿಕೆಯಲ್ಲಿ ಪ್ರಕಟವಾಗಿ ಇಡೀ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.

ಅಷ್ಟಕ್ಕೂ ಅನರ್ಹ ಶಾಸಕರು ಹನಿಟ್ರ್ಯಾಪ್ ಗೆ ಒಳಗಾಗಿದ್ದಾರ ಎನ್ನುವ ಪ್ರಶ್ನೆ ರಾಜ್ಯದಲ್ಲಿ ಸದ್ದು ಮಾಡುತ್ತಿದೆ.

ಇದರ ಜೊತೆಗೆ ರಾಜ್ಯ ಪೊಲೀಸ್ ಇಲಾಖೆ ಸಹ ಇದರ ಹಿಂದೆ ಬಿದ್ದಿದ್ದು ಈಗಾಗಲೇ ಆರೋಪಿಗಳನ್ನ ವಶಕ್ಕೆ ಪಡೆದು ತನಿಖೆಯನ್ನು ಬಿರುಸಿನಿಂದ ನಡೆಸಲಾಗುತ್ತಿದೆ.

ಇದೆಲ್ಲದರ ನಡುವೆ ಉತ್ತರ ಕರ್ನಾಟಕ ಭಾಗದ ಬಿಜೆಪಿ ಶಾಸಕ ಕಳಕಪ್ಪ ಬಂಡಿ ನಗ್ನರಾಗಿರುವ ವಿಡಿಯೋ ರಾಜ್ಯದಲ್ಲಿ ಸದ್ದುಮಾಡುತ್ತಿದೆ.


ಇದರ ಜೊತೆ ಅನರ್ಹ ಶಾಸಕರಾಗಿರುವ ಕೆಲವರು ಕೂಡ ಹಾಸಿಗೆಯಲ್ಲಿ ನಗ್ನರಾಗಿದ್ದಾರೆ ಎಂಬ ಸುದ್ದಿ ಹರಿದಾಡಿದ್ದು ಇದು ನಿಜ ಕೂಡ.

ಸದ್ಯ ಬೆತ್ತಲಾದ ಶಾಸಕರ ವಿಡಿಯೋ ವನ್ನು ಪ್ರಸಾರ ಮಾಡದಂತೆ ಕೋರ್ಟ ಸ್ಟೇ ತಂದಿದ್ದು ಸುದ್ದಿಯಾಗದೇ ಹರಾಜು ಆದ ತಮ್ಮ ಮಾನವನ್ನು ಉಳಿಸಿಕೊಂಡಿದ್ದಾರೆ.

ಹನಿ ಟ್ರ್ಯಾಪ್ ಗೆ ಒಳಗಾದ ಶಾಸಕನ ಕಳಕಪ್ಪ ಬಂಡಿ ಚಿತ್ರ.

ರೆಕಾರ್ಡ ಮಾಡಿದ್ದು 2017 ರಲ್ಲಿ !

ಇನ್ನು ಶಾಸಕರನ್ನು ಕೆಡ್ಡಾಕ್ಕೆ ಬೀಳಿಸಿ ನಗ್ನ ವೀಡಿಯೋ ತೆಗೆದಿದ್ದು 2017 ರಲ್ಲಿ ಅಲ್ಲಿಂದ ಇಲ್ಲಿಯ ವರೆಗೆ ಈ ವೀಡಿಯೋ ಬಾಹ್ಯ ಜಗತ್ತಿಗೆ ಬಾರದೇ ಕತ್ತಲಲ್ಲಿತ್ತು .ಆದ್ರೆ ಚುನಾವಣೆ ಸಂದರ್ಭದಲ್ಲಿ ಹೊರಕ್ಕೆ ಬಂದಿದ್ದು ಬೆಣ್ಣೆ ತಿಂದವರ ತಿನ್ನದವರ ಬಾಯಿಗೂ ಹತ್ತಿಬಿಟ್ಟಿದೆ.!

ಯಲ್ಲಾಪುರ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಹನಿಟ್ರ್ಯಾಪ್ ಆದ್ರ!?

ಸದ್ಯ ಹನಿಟ್ರ್ಯಾಪ್ ಪ್ರಕರಣ ತನಿಖೆ ಹಂತದಲ್ಲಿದೆ. ಕೆಲವು ಮಾಹಿತಿ ಪ್ರಕಾರ ಹನಿಟ್ರ್ಯಾಪ್ ಕಿಂಗ್ ಪಿನ್ ಶಿವಮೊಗ್ಗ ಮೂಲದ ರಾಘವೇಂದ್ರ ಹಾಗೂ ಆತನ ಗೆಳತಿ ಪುಷ್ಪ ಮಾಡಿರುವ ಹನಿಟ್ರ್ಯಾಪ್ ವಿಡಿಯೋ ಕೆಲವು ನಿಜವಾಗಿದ್ದರೆ ಇನ್ನು ಕೆಲವು ವಿಡಿಯೋ ಎಡಿಟ್ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳುತ್ತವೆ.

ಚುನಾವಣೆಗೆ ಸದ್ದು ಮಾಡಿತು ಸುದ್ದಿ?

ಯಲ್ಲಾಪುರದಲ್ಲಿ ಶಿವರಾಮ್ ಹೆಬ್ಬಾರ್ ತನ್ನದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಅನರ್ಹರಾದ ಮೇಲೆ ಬಿಜೆಪಿಯಿಂದ ಮರು ಆಯ್ಕೆ ಬಯಸಿ ಚುನಾವಣೆ ಅಕಾಡಕ್ಕೆ ಇಳಿದಿದ್ದಾರೆ.

ಸದ್ಯ ಹೆಬ್ಬಾರ್ ಟ್ರಂಡ್ ಚನ್ನಾಗಿದೆ,ಹಾಗೆಯೇ ನೇರ ಪೈಪೋಟಿ ಕೊಡಲು ಕಾಂಗ್ರೆಸ್ ಭೀಮಣ್ಣ ನಾಯ್ಕ ಸಹ ದೊಡ್ಡ ಎದುರಾಳಿಯಾಗಿ ನಿಂತಿದ್ದಾರೆ. ಜೊತೆಗೆ ನೇರ ನೇರ ಪೈಪೋಟಿ ಇಬ್ಬರ ನಡುವೆ ಇದೆ. ಇಬ್ಬರಲ್ಲಿ ಒಬ್ಬರು ಹ್ಯಾಮಾರಿದ್ರು ಎದುರಾಳಿ ಯಾರೇ ಆದ್ರು ಗೆಲ್ಲೋದು ಸಾದ್ಯ.

ಇಂತಹ ಸ್ಥಿತಿ ನಿರ್ಮಾಣವಾಗಿರುವಾಗ ಹೆಬ್ಬಾರ್ ಹನಿಟ್ರ್ಯಾಪ್ ಸುದ್ದಿ ಬಿತ್ತರವಾಗಿದ್ದು ಕ್ಷೇತ್ರದಲ್ಲಿ ಉಚಿತವಾಗಿ ಪತ್ರಿಕೆ ಬಿತ್ತರವಾಗುತ್ತಿದೆ.

ಸುದ್ದಿ ಹಬ್ಬುತಿದ್ದಂತೆ ಕ್ಷೇತ್ರದಲ್ಲಿ ಹೆಬ್ಬಾರ್ ಇಮ್ಯಾಜ್ ಗೆ ಹೊಡೆತ ಬಿದ್ದಿದ್ದು ಜನರ ಬಾಯಲ್ಲಿ ಹೆಬ್ಬಾರ್ ಮಾತುಗಳು ಓಡಾಡತೊಡಗಿದೆ.

ಈ ಸುದ್ದಿಯಿಂದಾಗಿ ಮತದಾರರ ಮೇಲೂ ಪರಿಣಾಮ ಬೀರಿದೆ.
ಇನ್ನು ಹೆಬ್ಬಾರ್ ಹನಿಟ್ರ್ಯಾಪ್ ಗೆ ಒಳಗಾಗಿದ್ದಾರೆಯೇ ಎಂಬ ಮಾಹಿತಿ ಆಧಾರವನ್ನು ಕೆದಕುತ್ತಾ ಹೋದಾಗ ಪೊಲೀಸ್ ಮೂಲಗಳೇ ಇದನ್ನು ಅಲ್ಲಗೆಳೆಯುತ್ತಿದೆ.

ಆದರೇ ಒಂದುವೇಳೆ ಹನಿಟ್ರ್ಯಾಪ್ ಆಗಿದ್ದರೆ ಇಷ್ಟರಲ್ಲಾಗಲೇ ವಿಷಯ ಹೊರಗೆ ಬರುತಿತ್ತು.ಆದರೇ ಯಾರೋ ಟ್ರ್ಯಾಪ್ ಆದರು ಎಂದು ಇವರ ಹೆಸರನ್ನು ಬಳಸಿ ಸುದ್ದಿಯಾಗುತ್ತಿರುವುದು ಮತದಾರನ ಮೇಲೆ ಪರಿಣಾಮ ಬೀರುವ ಇನ್ನೊಂದು ತಂತ್ರವೇ ಎಂಬ ಪ್ರಶ್ನೆ ಏಳತೊಡಗಿದೆ.

ಹನಿಟ್ರ್ಯಾಪ್ ಕುರಿತು ಹೆಬ್ಬಾರ್ ಪ್ರತಿಕ್ರಿಯೆ ನೀಡಿದ್ದು ಕಾಂಗ್ರೆಸ್ ನಿನ್ನೆಯೇ ಸೋಲನ್ನು ಒಪ್ಪಿಕೊಂಡಿದೆ.ಇಂದು ಯಾವುದೋ ಪತ್ರಿಕೆಯಲ್ಲಿ ನನ್ನ ವಿರುದ್ಧ ಅಪಪ್ರಚಾರ ಸುದ್ದಿ ಬರೆಯಿಸಿ ಹಂಚುತಿದ್ದಾರೆ ಇದರಿಂದ ಬಿಜೆಪಿ ಮತಗಳು ಹೆಚ್ಚಾಗುತ್ತೆಯೇ ಹೊರತು ಕಮ್ಮಿ ಆಗಲಾರದು.
ಈ ಚುನಾವಣೆ ಕಾಂಗ್ರೆಸ್ ,ಬಿಜೆಪಿ ಸ್ಪರ್ಧೆಯಲ್ಲ ಹೆಬ್ಬಾರ್ ,ದೇಶಪಾಂಡೆ ಚುನಾವಣೆ ನನಗೆ ದೇಶಪಾಂಡೆ ಎದುರಾಳಿ ಎಂದಿದ್ದು ಚುನಾವಣೆ ಬಂದಾಗ ಇವೆಲ್ಲವೂ ಇರುವುದೇ ಹನಿಟ್ರಾಪ್ಯ ,ಮನಿಟ್ರ್ಯಾಪ್ ಎಲ್ಲವನ್ನೂ ನೋಡಿದ್ದೇನೆ ಎಂದರು.

ಸದ್ಯ ಇಂದು ಯಲ್ಲಾಪುರ ಕ್ಷೇತ್ರದಲ್ಲಿ ಹನಿಟ್ರ್ಯಾಪ್ ಸದ್ದುಮಾಡಿದ್ದು ಆಡಿಕೊಳ್ಳುವವರ ಬಾಯಿಗೆ ಆಹಾರವಾಗಿದ್ದು ನಿಜಾಂಶವೇನು ಎಂಬುದನ್ನು ತನಿಖೆ ನಂತರವೇ ತಿಳಿದುಬರಬೇಕಿದೆ.
Leave a Reply

Your email address will not be published. Required fields are marked *