BREAKING NEWS
Search

ಹೆಬ್ಬಾರ್ ಗೆ ಅವಾಚ್ಯ ಶಬ್ದದಿಂದ ಬೈದು ಹೊರಹಾಕಿದ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರು! ಅಲ್ಲಿ ನೆಡದಿದ್ದೇನು ಗೊತ್ತಾ!

1603

ಕಾರವಾರ:- ಸ್ವ ಪಕ್ಷದ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ಯಲ್ಲಾಪುರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರಗೆ ಬಾಯಿಗೆ ಬಂದ ಹಾಗೆ ಅವಾಚ್ಯ ಶಬ್ಧದಿಂದ ಬೈದು ದೂಡಾಡಿ ಗ್ರಾಮದಿಂದ ಹೊರಕ್ಕೆ ಕಳುಹಿಸಿದ ಘಟನೆ ಬನವಾಸಿಯ ಅಜ್ಜರಣಿ ಗ್ರಾಮ ದಲ್ಲಿ ನಡೆದಿದೆ.

ವೀಡಿಯೋ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:-

#ಬನವಾಸಿಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಗೆ ತರಾಟೆ ತೆಗೆದುಕೊಂಡ ಬಿಜೆಪಿ,ಕಾಂಗ್ರೆಸ್ ಕಾರ್ಯಕರ್ತರು#yallapura #by Election

Posted by Kannadavani on Tuesday, November 26, 2019

ಬಿಜೆಪಿಯ ಅಭ್ಯರ್ಥಿ ಶಿವರಾಮ ಹೆಬ್ಬಾರ ಅವರಿಗೆ ಸುತ್ತುವರೆದು ಅವಾಚ್ಯ ಶಬ್ಧ ಬಳಸಿ ತರಾಡೆ ತೆಗೆದುಕೊಂಡ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರು.
ಅವರನ್ನು ದೂಡಾಡಿ ಅವಾಚ್ಯ ಶಬ್ದದಿಂದ ನಿಂದಿಸಿದರು.

ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ನೀವೆ ಕಾರಣರಾದವರು,ಹಿಂದೆ ಬಿಜೆಪಿ ತೆಗಳಿ ಈಗ ಆಡಿದ ಮಾತು ಉಳಿಸಿಕೊಳ್ಳಿ ,ನಿಮ್ಮಿಂದಾಗಿ ಆಗಿನ ನಮ್ಮ ಅಭ್ಯರ್ಥಿ ಸೋಲಲುವಂತಾಯಿತು ಎಂದು ಬಿಜೆಪಿ ಕಾರ್ಯಕರ್ತರು ಜರಿದರೆ ಬಿಜೆಪಿ ಕಾರ್ಯಕರ್ತರೊಂದಿಗೆ ಕೈ ಜೋಡಿಸಿದ ಕಾಂಗ್ರೆಸ್ ಕಾರ್ಯಕರ್ತರು ನೀವು ಕಾಂಗ್ರೆಸ್ ನಲ್ಲೇ ಇದ್ದಿದ್ದರೆ ಓಟು ಕೊಡುತಿದ್ದೆವು ಬಿಜೆಪಿ ಗೆ ಹೋಗಿದ್ದೀರಿ ಹೇಗೆ ಓಡು ಕೊಡಲಿ ಎಂದು ತರಾಟೆ ತೆಗೆದುಕೊಂಡರು.
ಸ್ವ ಪಕ್ಷ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಈ ದಿಡೀರ್ ಮಾತಿನಿಂದ ವಿಚಲಿತರಾದ ಹೆಬ್ಬಾರ್ ಸಮಾಧಾನ ಪಡಿಸಲು ಮುಂದಾದರೂ ಎರಡೂ ಪಕ್ಷದವರು ಕೇಳದೇ ಹಲ್ಲೆಗೆ ಸಹ ಮುಂದಾಗಿದ್ದರು.

ಈ ವೇಳೆ ಘಟನೆ ತೀವ್ರತೆ ಅರಿತ ಹೆಬ್ಬಾರ್ ಅಲ್ಲಿಂದ ಹೊರಹೋದರು.
Leave a Reply

Your email address will not be published. Required fields are marked *