BREAKING NEWS
Search

ನಾನು ಯಾರ ಗುಲಾಮನೂ ಅಲ್ಲ ನಾಲಿಗರ ಹರಿಬಿಟ್ಟರೆ ನನಗೂ ಕೆಳಮಟ್ಟದಲ್ಲಿ ಟೀಕೆ ಮಾಡಲು ಬರುತ್ತೆ-ಶಿವರಾಮ್ ಹೆಬ್ಬಾರ್!

720

ಕಾರವಾರ :- ಯಲ್ಲಾಪುರ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ದೇಶಪಾಂಡೆ ವಿರುದ್ದ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಕಿಡಿಕಾರಿದ್ದಾರೆ.

ಹಿರಿಯ ನಾಯಕರಾದವರಿಗೆ ನಾಲಿಗೆ ಮೇಲೆ ಹಿಡಿತ ಇರಲಿ ಎಂದು ತಿರುಗೇಟು ನೀಡಿದ್ದಾರೆ. ‌

ಯಲ್ಲಾಪುರ ಕ್ಷೇತ್ರದ ಬನವಾಸಿಯ ಬಿದ್ರಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ಕೆಳಮಟ್ಟದಲ್ಲಿ ಟೀಕೆ ಮಾಡೋದಕ್ಕೆ ಬರುತ್ತದೆ.

ನೀವು ನಿಮ್ಮ ಬಾಯನ್ನ ಹರಿಬಿಟ್ಟರೇ ನಾನು ನನ್ನ ಬಾಯನ್ನ ಹರಿಬಿಡುತ್ತೇನೆ. ನಾನು ನಾಲ್ಕು ದಶಕದಿಂದ ರಾಜಕೀಯದಲ್ಲಿ ಇದ್ದೇನೆ. ಪಕ್ಷಾಂತರದ ಬಗ್ಗೆ ದೇಶಪಾಂಡೆ ಸಿದ್ದರಾಮಯ್ಯ ನವರಿಂದ ಪಾಠ ಕಲಿಯುವ ಅಗತ್ಯವಿಲ್ಲ. ಅವರು ಹೇಳುವುದು ಭೂತದ ಬಾಯಲ್ಲಿ ಭಗವದ್ಗೀತೆ ಇದ್ದಂತೆ ಎಂದು ವಾಗ್ದಾಳಿ ನಡೆಸಿದ್ದಾರೆ.

ವೈಯಕ್ತಿಕ ಟೀಕೆಗೆ ಮುಂದಾದರೆ ನಾನು ವೈಯಕ್ತಿಕ ಟೀಕೆಗೆ ಮುಂದಾಗುತ್ತೇನೆ. ದೇಶಪಾಂಡೆ ಕ್ಷೇತ್ರದ ಜನತೆಗೆ ಕ್ಷಮೆ ಕೇಳುತ್ತೇನೆ ಹೆಬ್ಬಾರ್ ಪರ ಕಳೆದ ಬಾರಿ ಚುನಾವಣೆಯಲ್ಲಿ ಮತ ಕೇಳಿದ್ದಕ್ಕೆ ಅಂದಿದ್ದಾರೆ. ಆದರೆ ದೇಶಪಾಂಡೆ ಇಡೀ ಜಿಲ್ಲೆಯ ಜನರ ಕ್ಷಮೆ ಕೇಳಬೇಕು. ನಾನು ಯಾರ ಬಗ್ಗೆಯೂ ಟೀಕೆ ಮಾಡಿಲ್ಲ. ನಾನು ಅವರ ಗುಲಾಮನೂ ಅಲ್ಲ. ಅಲ್ಲದೇ ಮನಸ್ಸಿಗೆ ಬಂದಂತೆ ಹೇಳಲು ಗುತ್ತಿಗೆ ನೀಡಿಲ್ಲ.‌ ಸ್ವಾಭಿಮಾನಕ್ಕೆ ಧಕ್ಕೆ ಬಂದಲ್ಲಿ ಯಾವ ಶಬ್ದ ಬೇಕೋ ಆ ಶಬ್ದ ಬಳಕೆ ಮಾಡುತ್ತೇವೆ ಎಂದರು.
Leave a Reply

Your email address will not be published. Required fields are marked *