BREAKING NEWS
Search

ಭಾವ ಭೀಮಣ್ಣನ ಪರ ಬಂಗಾರಪ್ಪ ಪ್ರಚಾರ! ಗತಿಸಿದ ದ್ವನಿ ಪ್ರಚಾರ ಮಾಡಿದ್ದು ಹೇಗೆ ಗೊತ್ತಾ?

850

ಕಾರವಾರ/ಸೊರಬ: ಯಲ್ಲಾಪುರ ವಿಧಾನ ಸಭಾ ಕ್ಷೇತ್ರಕ್ಕೆ ಡಿ. ೫ರಂದು ನಡೆಯುವ ಉಪ ಚುನಾವಣೆ ಅಂಗವಾಗಿ ಈಗಾಗಲೇ ರಾಜ್ಯದ ಪ್ರಮುಖ ನಾಯಕರು ಭೇಟಿ ನೀಡಿ, ಮತಯಾಚನೆ ಮಾಡಿದ್ದಾರೆ.

ಆದರೆ, ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪನವರ ಧ್ವನಿ ಮಾತ್ರ ಈಗ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ.

ವಿಡಿಯೋ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ:-

ಯಲ್ಲಾಪುರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹವ ಬಣ್ಣದ ಬಾಬು ಬಂಗಾರಪ್ಪನ ದ್ವನಿಯಲ್ಲಿ ನೀವು ಕೇಳಿ ಖುಷಿ ಪಡದೆ ಬಿಡೆರು

Posted by Kannadavani on Wednesday, December 4, 2019

ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮಂಗಳವಾರವೇ ತೆರೆ ಎಳೆಯಲಾಗಿದ್ದು, ಮತದಾನ ಪ್ರಕ್ರಿಯೆಗೆ ತಾಲೂಕು ಆಡಳಿತ ಸಿದ್ಧತೆ ಕೈಗೊಳ್ಳುತ್ತಿದೆ.

ಈ ನಡುವೆ ಚುನಾವಣೆ ದಿನಾಂಕ ಪ್ರಕಟಣೆಯಾದ ತರುವಾಯ ಯಲ್ಲಾಪುರ ಕ್ಷೇತ್ರ ಸಾಕಷ್ಟು ಗಮನ ಸೆಳೆದಿತ್ತು.

ಕಾಂಗ್ರೆಸ್‌ನಿಂದ ಅನರ್ಹತೆಗೊಂಡು ಬಿಜೆಪಿ ಸೇರಿರುವ ಶಿವರಾಮ್ ಹೆಬ್ಬಾರ್, ಕಾಂಗ್ರೆಸ್‌ನಿಂದ ಬೀಮಣ್ಣ ನಾಯ್ಕ್, ಜೆಡಿಎಸ್‌ನಿಂದ ಚೈತ್ರಾ ಗೌಡ ಈಗಾಗಲೇ ಅಖಾಡದಲ್ಲಿದ್ದಾರೆ.

ಕಾಂಗ್ರೆಸ್‌ನ ಭೀಮಣ್ಣ ನಾಯ್ಕ್ ಅವರ ಪರವಾಗಿ ಬಂಗಾರಪ್ಪ ಪ್ರಚಾರ ಕೈಗೊಂಡಿದ್ದಾರೆಯೇ!!

ಯಲ್ಲಾಪುರದಲ್ಲಿ ಸುದ್ದುಮಾಡಿದ ಬಾಬು
ಹೌದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೇರಿ ಘಟಾನುಘಟಿ ನಾಯಕರು ತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚನೆ ನಡೆಸಿ, ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದರು.

ಈ ನಡುವೆ ಸೊರಬದ ಮಿಮಿಕ್ರಿ ಕಲಾವಿದ ನಾಗರಾಜ್ ಜೈನ್ (ಬಣ್ಣದ ಬಾಬು) ತಾಲೂಕಿನಲ್ಲಿ ಈಗಾಗಲೇ ಜ್ಯೂ. ಬಂಗಾರಪ್ಪ ಎಂದೇ ಚಿರಪರಿಚಿತ.

ಎಸ್. ಬಂಗಾರಪ್ಪನವರ ಶೈಲಿಯಲ್ಲಿಯೇ ಮಾತನಾಡುವ ಬಣ್ಣದ ಬಾಬು ಕಾಂಗ್ರೆಸ್‌ನ ಭೀಮಣ್ಣ ನಾಯ್ಕ್ ಪರವಾಗಿ ಕ್ಷೇತ್ರದ ಹಲವಾರು ಭಾಗಗಳಲ್ಲಿ ಮತಯಾಚನೆ ನಡೆಸಿದ್ದಾರೆ.

ಇದರ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ.

ಗಪ್‌ಚುಪ್ ಎನ್ನದ ಅಭಿಮಾನಿಗಳು:

ರಾಜಕೀಯವಾಗಿ ಗಮನಿಸುವುದಾದರೆ, ಎಸ್. ಬಂಗಾರಪ್ಪ ಅವರ ಅಭಿಮಾನಿಗಳು ರಾಜ್ಯದ ನಾನಾ ಮೂಲೆಯಲ್ಲಿದ್ದಾರೆ. ಅವರ ದಿಟ್ಟ ನಿಲುವುಗಳನ್ನು ಪಕ್ಷಾತೀತವಾಗಿ ಒಪ್ಪಿಕೊಳ್ಳುವ ನಾಯಕರು ಅನೇಕ.

ಈ ನಡುವೆ ಬಂಗಾರಪ್ಪ ಅಭಿಮಾನಿಗಳಿಗೆ ಬಂಗಾರಪ್ಪನವರ ಶೈಲಿಯಲ್ಲಿಯೇ ಬಣ್ಣದ ಬಾಬು ಭಾಷಣ ಆರಂಭಿಸುತ್ತಿದ್ದಂತೆ ಮಂತ್ರಮುಗ್ದರಾಗಿ ಆಲಿಸುತ್ತಿದ್ದರು.

ರಾಜಕೀಯ ಪ್ರಮುಖ ನಾಯಕರ ಪ್ರಚಾರದ ನಡುವೆ ಸೊರಬದ ಬಣ್ಣದ ಬಾಬು ಅವರು ಜ್ಯೂ. ಬಂಗಾರಪ್ಪ ನವರಾಗಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹವಾ ಸೃಷ್ಠಿಸಿರುವುದಂತೂ ಸತ್ಯ.

ಯಾರೀ ಬಣ್ಣದ ಬಾಬು?

ಸೊರಬ ತಾಲೂಕಿನ ಅಜಂತಾ ಕಲಾವಿದರಾಗಿ, ತಾಲೂಕು ರಕ್ತದಾನ ಸಮಿತಿಯ ಅಧ್ಯಕ್ಷರಾಗಿ ಸಾಮಾಜಿಕ ಸೇವೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಬಣ್ಣದ ಬಾಬು ಅವರಿಗೆ ಸ್ವತಃ ಎಸ್. ಬಂಗಾರಪ್ಪ ನವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಮಾತ್ರವಲ್ಲದೇ ಹಲವಾರು ಖಾಸಗಿ ಸುದ್ದಿ ವಾಹಿನಿಗಳಲ್ಲಿ ಜ್ಯೂ. ಬಂಗಾರಪ್ಪನವರಾಗಿ ನೇರ ಪ್ರಸಾರದಲ್ಲಿ ಯಶಸ್ವಿಯಾಗಿ ನಿಭಾಯಿಸಿದ್ದರು.
Leave a Reply

Your email address will not be published. Required fields are marked *