ಕಾರವಾರ:- ಕಾಂಗ್ರೆಸ್ ನವರು ಅನರ್ಹ ಶಾಸಕರನ್ನ ಇಟ್ಟುಕೊಳ್ಳಬಹುದಿತ್ತು,ಕಾಂಗ್ರೇಸ್ ನ ದುರಂಕಾರದ ಪರಿಣಾಮ ಅವರು ಪಕ್ಷ ಬಿಟ್ಟು ಹೋಗಿದ್ದಾರೆ,ನಾವೇನು ಅವರನ್ನ ಪಕ್ಷಕ್ಕೆ ಬಾ ಎಂದು ಕರೆದಿಲ್ಲ ಎಂದು ಸಂಸದ ಅನಂತಕುಮಾರ್ ಹೆಗ್ಡೆ ಹೇಳಿದ್ದಾರೆ.

ಇಂದು ಯಲ್ಲಾಪುರ ತಾಲೂಕಿನ ಉಪ್ಪಳೇಶ್ವರದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಿದ್ದರಾಮಯ್ಯನವರನ್ನ ಬೆಳೆಸಿದ್ದು ದೇವೆಗೌಡ,ದೇವೆಗೌಡರಿಗೆ ಚೂರಿ ಹಾಕಿ ಬಂದು ಇವತ್ತು ಆಚಾರ ಹೇಳುತ್ತಾನೆ,ಕಾಂಗ್ರೆಸ್ ತನ್ನ ದೌರ್ಬಲ್ಯ ಒಪ್ಪಿ ಕೊಳ್ಳಬೇಕು.
ಪ್ರಾಮಾಣಿಕತೆ ಅನ್ನುವ ಶಬ್ದ ಕಾಂಗ್ರೆಸ್ ಡಿಕ್ಷನರಿಯಲ್ಲಿ ಇಲ್ಲ,ಜನರನ್ನ ದಿಕ್ಕು ತಪ್ಪಿಸುವುದು, ಮೂರ್ಖರನ್ನಾಗಿ ಮಾಡುವುದು ಕಾಂಗ್ರೆಸ್ ಎಂದು ಹರಿಹಾಯ್ದರು.
