ಯಲ್ಲಾಪುರ:ಕಾಡಲ್ಲಿ ಬಾಲಕಿ ಅತ್ಯಾಚಾರ !ಪೋಷಕರನ್ನೇ ಬೆಚ್ಚಿಬೀಳಿಸಿತು?

14872
ಕಾರವಾರ:- ಶಾಲೆಯಲ್ಲಿ ಕೊಟ್ಟ ಹೋಂ ವರ್ಕ್ ಕಿರಿಕಿರಿ ತಪ್ಪಿಸಿಕೊಳ್ಳಲು ಪಾಲಕರ ಕಣ್ತಿಪ್ಪಿಸಿ ಕಾಡಿನಲ್ಲಿ ಅಡಗಿ ಕುಳಿತು ಅತ್ಯಾಚಾರದ ನಾಟಕವಾಡಿದ ವಿದ್ಯಾರ್ಥಿನಿಯ ಅಸಲಿಯತ್ತನ್ನು ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿ ಬಯಲುಮಾಡಿದ ಘಟನೆ

ಕಾರವಾರ:- ಶಾಲೆಯಲ್ಲಿ ಕೊಟ್ಟ ಹೋಂ ವರ್ಕ್ ಕಿರಿಕಿರಿ ತಪ್ಪಿಸಿಕೊಳ್ಳಲು ಪಾಲಕರ ಕಣ್ತಿಪ್ಪಿಸಿ ಕಾಡಿನಲ್ಲಿ ಅಡಗಿ ಕುಳಿತು ಅತ್ಯಾಚಾರದ ನಾಟಕವಾಡಿದ ವಿದ್ಯಾರ್ಥಿನಿಯ ಅಸಲಿಯತ್ತನ್ನು ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿ ಬಯಲುಮಾಡಿದ ಘಟನೆ ,ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ನಂದೊಳ್ಳಿಯಲ್ಲಿ ನಡೆದಿದೆ.

ಹತ್ತನೇ ತರಗತಿ ಓದುತಿದ್ದ ವಿದ್ಯಾರ್ಥಿನಿ ,ಶಾಲೆ ಯಲ್ಲಿ ಸರಿಯಾಗಿ ಹೋಮ್ ವರ್ಕ ಮಾಡುವುದಿಲ್ಲ ಎಂದು ಮುಖ್ಯ ಶಿಕ್ಷಕ ಪಾಲಕರಿಗೆ ದೂರು ನೀಡಿದ್ದರು.

ಹೀಗಾಗಿ ವಿದ್ಯಾರ್ಥಿನಿಯನ್ನ ಪಾಲಕರು ತರಾಟೆ ತೆಗೆದುಕೊಂಡಿದ್ದರು.

ಇದರಿಂದ ಕೋಪಗೊಂಡ ವಿದ್ಯಾರ್ಥಿನಿ ಮನೆಯ ಹಿಂಭಾಗದಲ್ಲಿರುವ ಕಾಡಿನಲ್ಲಿ ಅವಿತು ಕುಳಿತಿದ್ದಳು.ಈ ವೇಳೆ ಮಗಳು ಕಾಣದಿದ್ದಾಗ ಪೋಷಕರು ಅಪಹರಣವಾಗಿರಬೇಕು ಎಂದು ಯಲ್ಲಾಪುರ ಠಾಣೆಯಲ್ಲಿ ಒಂದು ದಿನದ ಹಿಂದೆ ದೂರು ನೀಡಿದ್ದರು.

ಪೊಲೀಸರು ಈಕೆಗಾಗಿ ಮನೆಯ ಸುತ್ತಮುತ್ತ ಕಾಡಿನಲ್ಲಿ ಹುಡುಕಾಟ ನಡೆಸಿದ್ದರು.ಈ ವೇಳೆ ವಿದ್ಯಾರ್ಥಿನಿ ತಾನೇ ಕೈ ಕಾಲುಗಳಿಗೆ ಹಗ್ಗ ಸುತ್ತಿಕೊಂಡು ಅತ್ಯಾಚಾರದ ಕಥೆ ಹಣೆದಿದ್ದಾಳೆ.

ವಿದ್ಯಾರ್ಥಿನಿಯನ್ನು ಠಾಣೆಗೆ ಕರೆದೊಯ್ದು,ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅತ್ಯಾಚಾರವಾಗಿಲ್ಲ ಎಂದು ವರದಿ ಬಂದಿದ್ದು ,ತನಿಖೆ ನಡೆಸಿದಾಗ ಈಕೆಯ ಬಣ್ಣ ಬಯಲಾಗಿದೆ.
ಘಟನೆ ಸಂಬಂಧ ಯಲ್ಲಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಬಾಲಕಿ ಹಣೆದ ಕಥೆ, ಪೊಷಕರು ಹಾಗೂ ಆಕೆಗಾಗಿ ಹುಡುಕಾಟ ನಡೆಸಿದ ಗ್ರಾಮಸ್ತರು,ಪೊಲೀಸರಿಗೆ ಶಾಕ್ ನೀಡಿದ್ದಂತು ಸತ್ಯ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ