ಯಲ್ಲಾಪುರ :ಗುಡ್ಡ ಕುಸಿದು ನಾಲ್ವರು ಕೂಲಿ ಕಾರ್ಮಿಕರು ಸಾವು.

1526

ಕಾರವಾರ :-ಧರೆಯ ಗುಡ್ಡದ ಮಣ್ಣು ಕುಸಿದು ನಾಲ್ವರು ಕಾರ್ಮಿಕರು ಸಾವು ಕಂಡ ಘಟನೆ
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಮದಲ್ಲಿ ನಡೆದಿದೆ.

ಇಡಗುಂದಿಯ ಮಂಜುನಾಥ್ ನಾಗಪ್ಪ ಭಟ್ ಎಂಬುವವರ ತೋಟಕ್ಕೆ ಮಣ್ಣಿನ ಕೆಲಸಕ್ಕೆ ಹೊಸಳ್ಳಿ ಗ್ರಾಮದಿಂದ ಏಳುಜನ ಕೂಲಿ ಕಾರ್ಮಿಕರು ತೆರಳಿದ್ದ ಈ ವೇಳೆ ಧರೆಯ ಮಣ್ಣು ಕುಸಿದು, ನಾಲ್ಕು ಜನ ಮಣ್ಣಿನಲ್ಲಿ ಹೂತು ಸಾವು ಕಂಡಿದ್ದಾರೆ.

ಕಿರುವತ್ತಿ ಬಳಿಯ ಹೊಸಳ್ಳಿ ಗ್ರಾಮದ ಭಾಗ್ಯಶ್ರೀಯಡಗೆ-21,ಲಕ್ಷ್ಮಿ ಡೋಯಿಪಡೆ-38 ಸಂತೋಷ್ ಡೋಯಿಪಡೆ-18 ಮಾಳು ಡೋಯಿಪಡೆ-21 ಧರೆಯ ಮಣ್ಣು ಕುಸಿದು ಸಾವನ್ನಪ್ಪಿದವರಾಗಿದ್ದಾರೆ.

ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ