BREAKING NEWS
Search

ಯಲ್ಲಾಪುರ-ತಮ್ಮನ್ನು ಬಿಟ್ಟು ಹೋದ ಮಗನ ಬಗ್ಗೆ ವಿ.ಎಸ್ ಪಾಟೀಲ್ ಹೇಳಿದ್ದೇನು ಗೊತ್ತಾ?

804

ಕಾರವಾರ :- ಯಲ್ಲಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಶಾಸಕ ವಿ.ಎಸ್ ಪಾಟೀಲ್ ಪುತ್ರ ಕಾಂಗ್ರೆಸ್ ಸೇರ್ಪಡೆಗೊಂಡಿದ್ದು ಈಗ ಅಪ್ಪ ಮಗನ ನಡುವೆ ದೊಡ್ಡ ಯುದ್ದ ನಡೆಯುತಿದ್ದು ತಾರಕಕ್ಕೇರಿದೆ. ಅಷ್ಟಕ್ಕೂ ನಡೆದಿದ್ದೇನು ಗೊತ್ತಾ ಇಲ್ಲಿದೆ ನೋಡಿ.

ನನ್ನ ಮಗ ಊರಿಗೆ ಬಂದಮೇಲೆ ನಾನು ಎರಡುಸಲ ಸೋತಿದ್ದೇನೆ,ಅವನೊಂದಿಗೆ ಸಂಪರ್ಕ ಬಿಟ್ಟು ಏಳು ವರ್ಷವಾಗಿದೆ, ಅವನು ಕಾಂಗ್ರೆಸ್ ಗೆ ಹೋಗಿರೋದ್ರಿಂದ ಬಿಜೆಪಿ ಗೆ ಯಾವ ತೊಂದರೆಯಾಗದು ಅವನ ನನ್ನ ಸಂಪರ್ಕವೇ ಇಲ್ಲ ಎಂದು ಬಿಜೆಪಿ ಮಾಜಿ ಶಾಸಕ ವಿ.ಎಸ್ ಪಾಟೀಲ್ ತಮ್ಮ ಮಗನ ವಿರುದ್ಧ ಅಕ್ರೋಶ ಹೊರಹಾಕಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಸಮ್ಮುಖದಲ್ಲಿ ಬಿಜೆಪಿ ಯ ಮಾಜಿ ಶಾಸಕ ವಿ.ಎಸ್ ಪಾಟೀಲ್ ಪುತ್ರ ಬಾಪು ಗೌಡ ಪಾಟೀಲ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಇದರಿಂದಾಗಿ ತೀರ್ವ ಮುಖಭಂಗ ಅನುಭವಿಸಿದ್ದ ವಿ.ಎಸ್ ಪಾಟೀಲ್ ತಮ್ಮ ಮಗನ ವಿರುದ್ಧ ತೊಡೆ ತಟ್ಟಿದ್ದಾರೆ.

ಇದಲ್ಲದೇ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ ಎಂದು ಹೇಳಿದ ಅವರು ಮಗ ಕಾಂಗ್ರೆಸ್ ಪಕ್ಷ ಸೇರಿದ ಮಾತ್ರಕ್ಕೆ ಲಿಂಗಾಯಿತ ಮತ ಕಾಂಗ್ರೆಸ್ ಗೆ ಬರುವುದಿಲ್ಲ ಲಿಂಗಾಯಿತ ಮುಖಂಡ ಯಡಿಯೂರಪ್ಪ ನವರು ಮುಖ್ಯಮಂತ್ರಿ ಆಗಿದ್ದಾರೆ ,ಅದಕ್ಕೆ ಕಾರಣ ಈ ಅನರ್ಹ ಶಾಸಕರು ಹೀಗಾಗಿ ಅವರನ್ನು ಗೆಲ್ಲಿಸುವ ಜವಬ್ದಾರಿ ನಮ್ಮ ಮೇಲಿದೆ ಅಂದರು.

ವಿ.ಎಸ್ ಪಾಟೀಲ್ ಹೇಳಿಕೆ ವೀಡಿಯೋ ನೋಡಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ:-

#BJP leader VS Pattil speaks about his rebel son who joined Congress#bjp

Posted by Kannadavani on Friday, November 22, 2019

ಮಾಜಿ ಬಿಜೆಪಿ ಶಾಸಕ ವಿ.ಎಸ್ ಪಾಟೀಲ್ ಪುತ್ರ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದರಿಂದಾಗಿ ತೀರ್ವ ಮುಖಭಂಗ ಅನುಭವಿಸಿದ್ದ ಹೆಬ್ಬಾರ್ ಅಸಮಧಾನವನ್ನು ತಣಿಸುವ ಪ್ರಯತ್ನ ಮಾಡಿದರೂ ಸಫಲರಾಗಿಲ್ಲ .

ಇದರಿಂದಾಗಿ ಆಂತರಿಕವಾಗಿ ದೊಡ್ಡ ಹಿನ್ನಡೆ ಶಿವರಾಮ್ ಹೆಬ್ಬಾರ್ ಗೆ ಆದಂತಾಗಿದೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಹೆಬ್ಬಾರ್ ಕಾಂಗ್ರೆಸ್ ಕುಟುಂಬ ಒಡೆಯುವ ಕೆಲಸ ಮಾಡುತ್ತಿದೆ.ಮಾಜಿ ಶಾಸಕನ ಮಗ ಎನ್ನುವುದು ಒಂದೇ ಅವರ ಆಸ್ಥಿ , ಮನೆ ಒಡೆಯುವ ,ಯಾರಿಗೆ ಯಾವ ಕಾಲದಲ್ಲಿ ಏನು ಮಾಡಬೇಕು ಎಂದು ಕುಟುಂಬವನ್ನೇ ಒಡೆಯುವ ಕೆಲಸ ಕಾಂಗ್ರೆಸ್ ಮಾಡಿದೆ,ಯಶಸ್ಸನ್ನು ಕಂಡಿದೆ.ನನ್ನನ್ನು ಹೊಡೆದುರಿಳಿಸುವ ಅನಿವಾರ್ಯತೆ ಆರ್.ವಿ ದೇಶಪಾಂಡೆಗೆ ಬಂದಿದೆ ಎಂದರೆ ನನಗೂ ಎಲ್ಲೂ ಹೆಮ್ಮೆ ,ನನ್ನ ಸೋಲಿಸಲು ಸಿದ್ದರಾಮಯ್ಯ ಈ ಕ್ಷೇತ್ರ ಕ್ಕೆ ಬರುತಿದ್ದಾರೆ ಅಂದ್ರೆ ಬಿಜೆಪಿ ಸಮರ್ಥ ಅಭ್ಯರ್ಥಿ ಹಾಕಿದೆ ಎಂದೇ ಅರ್ಥ ಎಂದರು.

ಒಂದೆಡೆ ಕಾಂಗ್ರೆಸ್, ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ರನ್ನು ಶತಗತಾಯ ಸೋಲಿಸಬೇಕೆಂಬ ಹಟಕ್ಕೆ ಬಿದ್ದಿದ್ದು ಬಿಜೆಪಿ ಪ್ರಭಾವಿ ಮುಖಂಡರನ್ನು ಸೆಳೆಯಲು ಹೊರಟಿದೆ.

ಇದರ ಒಂದು ಭಾಗವಾಗಿ ಬಿಜೆಪಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಪುತ್ರ ಬಾಪು ಗೌಡ ಪಾಟೀಲ್ ರನ್ನು ಆಪರೇಶನ್ ಮೂಲಕ ತಮ್ಮ ಕಡೆ ಸೆಳೆದುಕೊಂಡಿದೆ.

ಇತ್ತ ವಿ.ಎಸ್ ಪಾಟೀಲ್ ಕೂಡ ತಮ್ಮ ಮಗ ಕಾಂಗ್ರೆಸ್ ಸೇರಿದ್ದರಿಂದ ತೀರ್ವ ಮುಖಭಂಗ ಅನುಭವಿಸುತಿದ್ದು ಅದನ್ನು ಸರಿಪಡಿಸಿಕೊಳ್ಳಲು ಮಗನ ವಿರುದ್ಧ ತಿರುಗಿಬಿದ್ದಿದ್ದಾರೆ.

ಇನ್ನು ಬಿಜೆಪಿ ಯಲ್ಲೂಕೂಡ ಅಸಮಧಾನ ದೊಡ್ಡ ಮಟ್ಟದಲ್ಲಿ ಹೊಗೆಯಾಡುತಿದ್ದು ಯಾರು ಯಾವಕಡೆ ಸೇರುತ್ತಾರೆ ಎಂಬ ಕುತೂಹಲ ಕ್ಷೇತ್ರದ ಜನರನ್ನು ಕಾಡುತಿದ್ದು ಕಾಂಗ್ರೆಸ್ ಜೆಡಿಎಸ್ ಮುಖಂಡ ರವೀಂದ್ರ ನಾಯ್ಕ ರನ್ನು ಸಹ ತಮ್ಮ ಪಕ್ಷಕ್ಕೆ ಸೆಳೆದಿದ್ದು ಚುನಾವಣಾ ರಣ ರಂಗ ರಂಗೇರತೊಡಗಿದೆ.




Leave a Reply

Your email address will not be published. Required fields are marked *