ಉಪ ಚುನಾವಣೆಗೆ ನಿಲ್ಲುತ್ತೇನೆ ಅಂದ್ರು ಶಿವರಾಮ್ ಹೆಬ್ಬಾರ್- ಬಿಜೆಪಿಗೆ ಹೋಗುವುದರ ಬಗ್ಗೆ ಹೇಳಿದ್ದೇನು ಗೊತ್ತಾ!

743

ಕಾರವಾರ/ಯಲ್ಲಾಪುರ:- ಚುನಾವಣೆಗೆ ನಿಲ್ತೀವಿ ಗಲ್ತೀವಿ ಚುನಾವಣೆಗೆ ನಿಲ್ಲಲು ತಡೆಯಲು ಯಾರಿಂದಲೂ ಸಾಧ್ಯವಿಲ್ಲ,೩೦ ನೇ ತಾರೀಕು ನಾಮಪತ್ರ ಸಲ್ಲಿಸಲು ಕೊನೆ ದಿನ,ನಮಗೆ ರಾಜಕೀಯ ನಿರ್ಣಯ ಕೈಗೊಳ್ಳಲೂ ಕೊನೆ ದಿನ ,ನೂರಕ್ಕೆ ನೂರರಷ್ಟು ನ್ಯಾಯಾಲಯ ಅವಕಾಶ ಮಾಡಿಕೊಡುತ್ತದೆ ಎಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ರು. ಇಂದು ಬೆಂಗಳೂರಿನಿಂದ ಯಲ್ಲಾಪುರ ಕ್ಕೆ ಆಗಮಿಸಿದ ಹೆಬ್ಬಾರ್ ತಾವು ಚುನಾವಣೆಗೆ ನಿಲ್ಲುವುದಾಗಿ ತಿಳಿಸಿದ್ದಾರೆ.

ಅನರ್ಹತೆ ಆಗುವುದಕ್ಕೂ ಚುನಾವಣೆಗೆ ನಿಲ್ಲಲು ಸಂಬಂಧವಿಲ್ಲ,ಅನರ್ಹತೆ ಆ ದಿನಕ್ಕೆ ಅಷ್ಟೇ,
ಪಿ.ದಿನಕರನ್ ಕೇಸ್ ನಲ್ಲಿ 19 ಜನರಿಗೆ ಇದೇ ನಿರ್ಣಯವನ್ನು ನ್ಯಾಯಾಲಯ ನೀಡಿದೆ. ಎಂದರು.

ಬಿಜೆಪಿ ಸಭೆಯಲ್ಲಿ ಕಾಣಿಸಿಕೊಂಡ ಹೆಬ್ಬಾರ್!

ಇಂದು ಬೆಂಗಳೂರಿನಿಂದ ದಿಡೀರನೆ ಯಲ್ಲಾಪುರಕ್ಕೆ ಆಗಮಿಸಿದ ಶಿವರಾಮ್ ಹೆಬ್ಬಾರ್ ಮುಂಡಗೋಡಿನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಮುಂಡಗೋಡಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗಿ ಯಾಗಿ ಬಿಜೆಪಿ ಮಾಜಿ ಶಾಸಕ ವಿ.ಎಸ್ ಪಾಟೀಲ್ ಜೊತೆ ಮಾತೂಕತೆ ನಡೆಸಿದ್ದು ಪಾಟೀಲರ ಅಸಮದಾನವನ್ನು ತಣಿಸುವ ಪ್ರಯತ್ನ ಮಾಡಿದರು.

ಸ್ಪೀಕರ್ ವಿರುದ್ಧ ಗರಂ!

ಉದ್ದೇಶಪೂರ್ವಕವಾಗಿ, ರಾಜಕೀಯದ ಲೇಪನದಡಿಯಲ್ಲಿ ಒಂದು ಪಕ್ಷದ ಕಾರ್ಯಕರ್ತರಾಗಿ ಸ್ಪೀಕರ್ ನಿರ್ಣಯ ತೆಗೆದುಕೊಂಡಿದ್ದಾರೆ.

ನ್ಯಾಯಾಧೀಶರಾಗಿ ಅವರು ನಿರ್ಣಯ ತೆಗೆದುಕೊಂಡಿಲ್ಲ,ಮನಸ್ಸಿಗೆ ಬಂದ ಹಾಗೆ ಸ್ಪೀಕರ ಮಾಡುವಂತಿಲ್ಲ.೨೦೨೩ರಲ್ಲಿ ಅನರ್ಹತೆಗೊಳಿಸುತ್ತೇವೆಂದು ಹೇಳಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು.

ಸ್ಪೀಕರ್ ನಿರ್ಣಯ ಕೈಗೊಂಡಿದ್ದು ಸಂವಿಧಾನ ವಿರೋಧಿ ಕ್ರಮ,ನಾಳೆ ಮಧ್ಯಾಹ್ನದೊಳಗೆ ಯಾವುದಾದರೂ ಒಂದು ತೀರ್ಪು ಬರಲಿದೆ
ನ್ಯಾಯಾಂಗದ ಮೇಲೆ ವಿಶ್ವಾಸ ಇದೆ.

ಇಲ್ಲದಿದ್ದಲ್ಲಿ ಅದು ಸಾಂವಿಧಾನಿಕ ಬಿಕ್ಕಟ್ಟಾಗಲಿದೆ.
ಅನರ್ಹತೆ ನಿರ್ಣಯ ಮಾಡದಿದ್ದರೇ ಕ್ಷೇತ್ರಕ್ಕೆ ಎರಡು ಶಾಸಕರಾಗಲಿದ್ದಾರೆ.

ಸರ್ವೋಚ್ಛ ನ್ಯಾಯಾಲಯ ಸುದೀರ್ಘ ಚರ್ಚೆ ಮಾಡುತ್ತಿದೆ.ಸರ್ವೋಚ್ಚ ನ್ಯಾಯಾಲಯದ ಮೇಲೆ ವಿಶ್ವಾಸ ಇದೆ.

ಸ್ಪೀಕರ ನಡೆಯನ್ನ ಯೋಚಿಸಿ ನಾವು ಸುಪ್ರಿಮ್ ಕೋರ್ಟ್ ಮೊರೆ ಹೋಗಿದ್ದೇವು.
ಕೋರ್ಟ್ ನಮಗೆ ಮದ್ಯಕಾಲಿಕ ತೀರ್ಪು ನೀಡಿತ್ತು.
ವಿಧಾನಸಭೆಗೆ ಹೋಗೋದು ಬಿಡೋದು ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿತ್ತು.
ಮುಂದುವರಿದ ಭಾಗವಾಗಿ ಇಂದು ವಾದ ಪ್ರತಿವಾದಗಳು ನಡೆದಿವೆ.

ಸ್ಪೀಕರ್ ನಡೆಯ ಬಗ್ಗೆ ಸಾಮಾನ್ಯ ಜನರು ತಪ್ಪೆಂದು ಹೇಳ್ತಾರೆ,ನಾಳೆ ಸುಪ್ರಿಮ್ ಕೋರ್ಟ್ ನಿಂದ ಒಳ್ಳೆಯ ತೀರ್ಪು ಬರಲಿದೆ,ಬರುವ ಚುನಾವಣೆಯನ್ನ ಎದುರಿಸುತ್ತೇವೆ.

ನಾನಿನ್ನು ಭಾರತೀಯ ಜನತಾ ಪಾರ್ಟಿ ಸೇರಿಕೊಂಡಿಲ್ಲ.ತೀರ್ಪು ಬಂದ ಮೇಲೆ ಎಲ್ಲರೂ ಒಟ್ಟಾಗಿ ರಾಜಕೀಯ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.




Leave a Reply

Your email address will not be published. Required fields are marked *