ಕಾರ್ಮಿಕ ಸಚಿವರ ಊರಲ್ಲಿ ಸಚಿವ ಹೆಬ್ಬಾರ್ ನಾಚಿಸುವಂತೆ ಕಾರ್ಯ ಮಾಡಿತೋರಿಸಿದ್ರು!ಏನು ಗೊತ್ತಾ

1130

ಕಾರವಾರ:- ತಮ್ಮೂರಿಗೊಂದು ಬಸ್ ನಿಲ್ದಾಣ ಮಾಡಿಕೊಡಿ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ರವರಿಗೆ ಮನವಿಮಾಡಿದ್ರೂ ಗ್ರಾಮಸ್ಥರ ಮನವಿಗೆ ಸಚಿವ ಹೆಬ್ಬಾರ್ ಸ್ಪಂದಿಸಿರಲಿಲ್ಲ.ಈ ಕಾರಣದಿಂದ ಸಚಿವರಿಗೆ ಮತ್ತೆ ಸಲಾಂ ಹೊಡೆಯದೇ ಗ್ರಾಮಸ್ಥರೇ ತಮ್ಮ ಊರಿನ ಬಸ್ ನಿಲ್ದಾಣವನ್ನು ನಿರ್ಮಿಸಿದ ಘಟನೆ ಸಚಿವ ಶಿವರಾಮ್ ಹೆಬ್ಬಾರ್ ಸ್ವ ಕ್ಷೇತ್ರ ಯಲ್ಲಾಪುರ ತಾಲೂಕಿನ ಹೊಸಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರ ಮಾರ್ಗದಲ್ಲಿ ತೆರಳುವಾಗ ಗ್ರಾಮದಲ್ಲಿ ಯಾವುದೇ ಬಸ್ ತಂಗುದಾಣದ ವ್ಯವಸ್ಥೆ ಇರಲಿಲ್ಲ.‌ ಇದರಿಂದ ವಿದ್ಯಾರ್ಥಿಗಳು, ಗರ್ಭಿಣಿಯರು ಹಾಗೂ ವಯಸ್ಸಾದವರು ಪರದಾಡುವಂತಾಗಿತ್ತು. ಈ ಬಗ್ಗೆ ಹಲವು ವರ್ಷಗಳಿಂದ ಸಚಿವರಿಗೆ ಮನವಿ ನೀಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಇದರಿಂದ ಬೇಸತ್ತಿದ್ದ ಊರ ಜನರೇ ಒಟ್ಟಾಗಿ ಉಸಕು, ಕಲ್ಲು, ಸಿಮೆಂಟ್ ಇತ್ಯಾದಿ ಅಗತ್ಯ ಸಾಮಾನುಗಳನ್ನು ಹೊಂದಿಸಿ ಊರಿನ ಟೈಲ್ಸ್ ಮೇಸ್ತ್ರಿ, ವೆಲ್ಡಿಂಗ್ ವರ್ಕ್ಸ್ ಮತ್ತು ಗೌಂಡಿಗಳ ಸಹಾಯದಿಂದ ಕೇವಲ ಒಂದು ವಾರದಲ್ಲಿ ತಮ್ಮ ಬಿಡುವಿನ ಸಮಯದಲ್ಲಿ ಕೆಲಸ ಮಾಡಿ  ಬಸ್ ತಂಗುದಾಣವನ್ನು ನಿರ್ಮಿಸಿದ್ದಾರೆ.

ಇನ್ನು ಅಷ್ಟೇ ಅಲ್ಲದೆ ಬಸ್ ನಿಲ್ದಾಣದ ಹೊರಗೆ ಊರಿನ ಸಂಸ್ಕೃತಿ, ಬೇಸಾಯ ಮತ್ತು ಹಾಲು ಉತ್ಪಾದನೆ ಕೇಂದ್ರದ ಚಿತ್ರಗಳನ್ನು ಬಿಡಿಸಲಾಗಿದ್ದು, ನೋಡಲು ಆಕರ್ಷಕವಾಗಿದೆ. ವಿಜಯ ದಶಮಿಯ ಶುಭ ಸಂದರ್ಭದಲ್ಲಿ ಊರಿನ ಹಿರಿಯರು ಈ ತಂಗುದಾಣವನ್ನು ಉದ್ಘಾಟನೆಗೊಳಿಸಿ ಪ್ರಯಾಣಿಕರಿಗೆ ಅನಕೂಲ ಮಾಡಿಕೊಟ್ಟಿದ್ದಾರೆ. ಬಸ್ ನಿಲ್ದಾಣದಿಂದ ಸಾಕಷ್ಟು ಅನುಕೂಲವಾಗಲಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಒಟ್ಟಾರೆ ಸಾರ್ವಜನಿಕರಿಗೆ ಅಗತ್ಯವಿದ್ದ ಬಸ್ ನಿಲ್ದಾಣವನ್ನು ಊರ ಜನರೇ ಹಣ ಕೂಡಿಸಿ ನಿರ್ಮಿಸಿರುವುದು ಶ್ಲಾಘನೀಯವಾಗಿದೆ.




Leave a Reply

Your email address will not be published. Required fields are marked *